ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ತಪಾಸಣೆಯಲ್ಲಿ ದಾಖಲೆ ಬರೆದ ತಮಿಳುನಾಡು!

|
Google Oneindia Kannada News

ಚೆನ್ನೈ, ಜೂನ್.17: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ವೈದ್ಯಕೀಯ ತಪಾಸಣೆಯೇ ಸೂಕ್ತ ಮಾರ್ಗ ಎಂದು ತೀರ್ಮಾನಿಸಲಾಗಿದೆ. ಭಾರತ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಹಿನ್ನೆಲೆ ಸಾಧ್ಯವಾದಷ್ಟು ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸಬೇಕಿದೆ.

ರಾಷ್ಟ್ರಾದ್ಯಂತ ಕೊರೊನಾ ವೈರಸ್ ಸೋಂಕಿತರ ತಪಾಸಣೆಯ ವೇಗವನ್ನು ಹೆಚ್ಚಿಸಬೇಕಿದೆ. ಹೀಗಾಗಿ ಆರು ದಿನಗಳಲ್ಲಿ ಮೂರು ಪಟ್ಟು ತಪಾಸಣಾ ಪ್ರಮಾಣವನ್ನು ಏರಿಕೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು. ಅಂದರೆ ಪ್ರತಿನಿತ್ಯ 100ರ ಬದಲಿಗೆ 600 ಜನರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದ್ದರು.

ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ!ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ!

ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕು ತಪಾಸಣೆಯ ಪ್ರಮಾಣವನ್ನು ಏರಿಕೆ ಮಾಡಲಾಗಿದೆ. ಒಂದೇ ದಿನ 25,000ಕ್ಕೂ ಅಧಿಕ ಜನರನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಲಾಯಿತು.

ತಮಿಳುನಾಡಿನಲ್ಲಿ 50,000ಕ್ಕಿಂತ ಹೆಚ್ಚು ಪ್ರಕರಣ

ತಮಿಳುನಾಡಿನಲ್ಲಿ 50,000ಕ್ಕಿಂತ ಹೆಚ್ಚು ಪ್ರಕರಣ

ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 50,000ದ ಗಡಿ ದಾಟಿದೆ. ಒಂದೇ ದಿನ 2,174 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಚು ಸೋಂಕಿತರ ಸಂಖ್ಯೆ 50,193ಕ್ಕೆ ಏರಿಕೆಯಾಗಿದೆ. ಬುಧವಾರ 48 ಮಂದಿ ಮಹಾಮಾರಿಗೆ ಪ್ರಾಣ ಬಿಟ್ಟಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆಯು 576ಕ್ಕೆ ಏರಿಕೆಯಾಗಿದೆ.

ತಮಿಳುನಾಡಿನಲ್ಲಿ 25,463 ಮಂದಿ ತಪಾಸಣೆ

ತಮಿಳುನಾಡಿನಲ್ಲಿ 25,463 ಮಂದಿ ತಪಾಸಣೆ

ತಮಿಳುನಾಡಿನಲ್ಲೂ ಕೂಡಾ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ತಪಾಸಣೆಯ ಪ್ರಮಾಣವನ್ನು ಕ್ಷಿಪ್ರಗತಿಯಲ್ಲಿ ಹೆಚ್ಚಿಸಲಾಗಿದೆ. ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 25,463 ಮಂದಿಯನ್ನು ನೊವೆಲ್ ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ತಪಾಸಣಾ ಲ್ಯಾಬ್

ಭಾರತದಲ್ಲಿ ಕೊರೊನಾವೈರಸ್ ತಪಾಸಣಾ ಲ್ಯಾಬ್

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತಪಾಸಣೆಗೆ ನಿರ್ದಿಷ್ಟ ಪ್ರಯೋಗಾಲಯಗಳನ್ನು ಗುರುತುಪಡಿಸಲಾಗಿದೆ. ಹೀಗಿ ಗುರುತಿಸಿದ ಲ್ಯಾಬ್ ಗಳ ಸಂಖ್ಯೆಯಲ್ಲಿ ಏರಿಕೆ ಮಾಡಲಾಗಿದೆ. ಸರ್ಕಾರದ 653 ಪ್ರಯೋಗಾಲಯ ಹಾಗೂ 248 ಖಾಸಗಿ ಪ್ರಯೋಗಾಲಯ ಸೇರಿದಂತೆ ಒಟ್ಟು 901 ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ತಪಾಸಣೆಯನ್ನು ನಡೆಸುವುದಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ.

ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ

ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ

ಭಾರತದಲ್ಲಿ ಒಂದೇ ದಿನ ಕೊರೊನಾ ವೈರಸ್ ನಿಂದಾಗಿ 2003ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 10,974 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟು 3,54,065 ಪ್ರಕರಣಗಳಿದ್ದು ಈ ಪೈಕಿ 1,55,227 ಪ್ರಕರಣಗಳು ಸಕ್ರಿಯವಾಗಿದೆ. 1,86,935 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

English summary
Coronavirus test for more than 25,000 thousand people in a single day in Tamil Nadu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X