ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಗಾಲಾಗಿದ್ದ ಚಿತ್ರರಂಗದ ಕಾರ್ಮಿಕರಿಗೆ 50 ಲಕ್ಷ ನೀಡಿದ ರಜನಿಕಾಂತ್

|
Google Oneindia Kannada News

ಚೆನ್ನೈ, ಮಾರ್ಚ್ 24: ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರರಂಗದ ಕಾರ್ಮಿಕರಿಗೆ 50 ಲಕ್ಷ ನೀಡಿದ್ದಾರೆ. ಕೊರೊನಾ ವೈರಸ್‌ ಭೀತಿಯಿಂದ ಕೆಲಸ ಇಲ್ಲದೆ ಕಂಗಾಲಾಗಿದ್ದ ಚಿತ್ರರಂಗದ ಕಾರ್ಮಿಕರ ನೆರವಿಗೆ ರಜನಿಕಾಂತ್ ಬಂದಿದ್ದಾರೆ.

ಕೊರೊನಾ ಭೀತಿಯಿಂದ ಯಾವುದೇ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿಲ್ಲ. ಇದರಿಂದ ಚಿತ್ರರಂಗವನ್ನೆ ನಂಬಿಕೊಂಡು, ದಿನಕೂಲಿ ಮಾಡುವ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ದಕ್ಷಿಣ ಭಾರತದ ಚಿತ್ರ ಕಾರ್ಮಿಕರಿಗೆ ರಜನಿಕಾಂತ್ ಸಹಾಯ ಮಾಡಿದ್ದಾರೆ.

ನನ್ನಿಂದ‌ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಕನ್ನಡತಿನನ್ನಿಂದ‌ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಕನ್ನಡತಿ

ಫಿಲ್ಮ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಸೌತ್ ಇಂಡಿಯಾ (FEFSI)ಗೆ 50 ಲಕ್ಷ ಹಣವನ್ನು ರಜನಿಕಾಂತ್ ನೀಡಿದ್ದಾರೆ. ಚಿತ್ರರಂಗದ ಕೆಲಸಗಳು ಇಲ್ಲದೆ, ಸಂಕಷ್ಟದಲ್ಲಿ ಇದ್ದವರಿಗೆ ಈ ರೀತಿಯಾಗಿ ರಜನಿ ಆಸರೆ ನೀಡಿದ್ದಾರೆ.

Coronavirus Rajinikanth donates Rs 50 lakh to Film Employees Federation of South India

ಕೊರೊನಾ ಎಫೆಕ್ಟ್ ಚಿತ್ರರಂಗಕ್ಕೆ ದೊಡ್ಡ ಮಟ್ಟಕ್ಕೆ ತಟ್ಟಿದೆ. ಚಿತ್ರ ಪ್ರದರ್ಶನ, ಚಿತ್ರಗಳ ಚಿತ್ರೀಕರಣದ ಮೇಲೆ ಸಂಪೂರ್ಣ ನಿರ್ಬಂಧ ಏರಲಾಗಿದೆ. ಕೊರೊನಾ ಭಾರತದಲ್ಲಿಯೂ ಹೆಚ್ಚಾಗಿ ಹಬ್ಬುತ್ತಿದ್ದು, ಚಿತ್ರರಂಗ ಇನ್ನಷ್ಟು ದಿನ ಬಂದ್ ಆಗಿ ಇರಲಿದೆ.

ಸದ್ಯದವರೆಗೆ, ಭಾರತದಲ್ಲಿ 471 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

English summary
Coronavirus care: Super star Rajinikanth donates Rs 50 lakh to Film Employees Federation of South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X