• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಲ್ಲಿ ಕೊರೊನಾ ಭೀತಿ; ಸೆಕ್ಷನ್ 144 ಜಾರಿ

|

ಚೆನ್ನೈ, ಮಾರ್ಚ್ 23 : ಕೊರೊನಾ ಹರಡುವುದನ್ನು ತಡೆಯಲು ಜನ ಸಂದಣಿ ಸೇರದಂತೆ ನೋಡಿಕೊಳ್ಳಬೇಕಿದೆ. ತಮಿಳುನಾಡು ಜನ ಸೇರುವುದನ್ನು ಕಡಿಮೆ ಮಾಡಲು ರಾಜ್ಯಾದ್ಯಂತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಿದೆ.

   Karnataka will be under complete lockdown | Karnataka LockDown | Oneindia kannada

   ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಿತು. ಕೊರೊನಾ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

   ಆಗ ಕಾವೇರಿ, ಈಗ ಕೊರೊನಾ; ಕರ್ನಾಟಕ, ತಮಿಳುನಾಡು ಬಸ್ ರದ್ದು

   ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು, "ಸಿಆರ್‌ಪಿಸಿಯ ಸೆಕ್ಷನ್ 144 ಅನ್ವಯ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗುತ್ತದೆ. ಮಂಗಳವಾರ ಸಂಜೆ 6 ಗಂಟೆಯಿಂದ ಮಾರ್ಚ್ 31ರ ತನಕ ಇದು ಜಾರಿಯಲ್ಲಿರಲಿದೆ" ಎಂದರು.

   ಕರ್ನಾಟಕದಲ್ಲಿ ಕೊರೊನಾ ನಿಯಂತ್ರಿಸಲು ಜೈಲು ಕೈದಿಗಳು ನೆರವು

   "ಹಾಲು, ತರಕಾರಿ, ದಿನಸಿ, ಮಟನ್, ಚಿಕನ್, ಮೀನು ಅಂಗಡಿಗಳು ಈ ಸಮಯದಲ್ಲಿ ಕಾರ್ಯ ನಿರ್ವಹಣೆ ಮಾಡಲಿವೆ. ರಾಜ್ಯದ ಗಡಿಗಳನ್ನು ಮುಚ್ಚಲಾಗುತ್ತದೆ" ಎಂದು ಮುಖ್ಯಮಂತ್ರಿಗಳು ವಿವರಣೆಯನ್ನು ನೀಡಿದರು.

   ಶಿವಮೊಗ್ಗದಿಂದ ಚೆನ್ನೈ, ತಿರುಪತಿಗೆ ರೈಲು, ಸೇವೆ ಲಾಭ ಪಡೆಯಿರಿ

   "ರಾಜ್ಯದ ಎಲ್ಲಾ ಖಾಸಗಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸೂಚಿಸಲಾಗಿದೆ. ಸರ್ಕಾರದಿಂದ ನಡೆಯುತ್ತಿರುವ ಅಣ್ಣಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಣೆ ಮಾಡಲಿವೆ" ಎಂದು ಕೆ. ಪಳನಿಸ್ವಾಮಿ ಹೇಳಿದರು.

   ಸ್ಪೇನ್‌ನಿಂದ ಬಂದ ಮಹಿಳೆಗೆ ಕೊರೊನಾ ಸೋಂಕು ಇರುವುದು ಭಾನುವಾರ ಖಚಿತವಾಗಿತ್ತು. ಈ ಮೂಲಕ ತಮಿಳುನಾಡಿನಲ್ಲಿ 7 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದವು.

   ತಮಿಳುನಾಡಿನಲ್ಲಿ ಶುಕ್ರವಾರ 4,253 ಜನರು home quarantine ನಲ್ಲಿದ್ದರು. ಶನಿವಾರ ಅದು 8950ಕ್ಕೆ ಏರಿಕೆಯಾಗಿತ್ತು. ಸೋಂಕು ತಗುಲಿರುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ, ಸರ್ಕಾರ ನಿಷೇಧಾಜ್ಞೆಯನ್ನು ಜಾರಿಗೆ ತರಲಿದೆ.

   English summary
   To control coronavirus Tamil Nadu government will imposed restrictions under section 144 of CrPC from 6 PM on March 24, 2020 said CM Edappadi Palanisamy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X