ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಣಾಂತಿಕ ಕೊರೊನಾಗೆ ಭಾರತದಲ್ಲಿ ಮೊದಲ ಬಲಿ

|
Google Oneindia Kannada News

Recommended Video

Corona virus might have clutch a life in Tamil Nadu | Corona Virus | Tamil Nadu | Oneindia Kannada

ಚೆನ್ನೈ, ಫೆಬ್ರವರಿ 19: ಮಾರಣಾಂತಿಕ ಕೊರೊನಾವು ದೇಶದಲ್ಲಿ ಮೊದಲ ಬಲಿ ಪಡೆದುಕೊಂಡಿದೆ.

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೊನಾ ವೈರಸ್ ಸೋಂಕು ದೇಶವನ್ನು ಪ್ರವೇಶಿಸದಂತೆ ನೋಡಿಕೊಳ್ಳಲು ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಂಡಿರುವಾಗಲೇ , ಚೀನಾದಿಂದ ಇತ್ತೀಚೆಗೆ ತಮಿಳುನಾಡಿಗೆ ಮರಳಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ವೈದ್ಯನ ಹರಸಾಹಸಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ವೈದ್ಯನ ಹರಸಾಹಸ

ಮೊದಲೇ ಅನಾರೋಗ್ಯಪೀಡಿತರಾಗಿದ್ದ ಶಕ್ತಿ ಕುಮಾರ್ ಅವರ ದೇಹ ಸ್ಥಿತಿ ಕೊರೊನಾ ವೈರಸ್ ಸೋಂಕಿನಿಂದ ಮತ್ತಷ್ಟು ವಿಷಮಗೊಂಡು ಸಾವು ಸಂಭವಿಸಿರಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ. ಕೊರೊನಾ ವೈರಾಣು ಸೋಂಕಿನಿಂದಲೇ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

 ಇದು ದೇಶದ ಮೊದಲ ಕೊರೊನಾ ಸಾವು

ಇದು ದೇಶದ ಮೊದಲ ಕೊರೊನಾ ಸಾವು

ಇದು ದೇಶದ ಮೊದಲ ಕೊರೊನಾ ಸಾವು ಎಂಬು ಸುದ್ದಿ ಎಲ್ಲೆಡೆ ಹಬ್ಬಿದೆ. ಚೀನಾದಲ್ಲಿ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿರುವ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕೊಥಾಯಿಮಂಗಳಂ ಗ್ರಾಮದ 42 ವರ್ಷದ ಶಕ್ತಿ ಕುಮಾರ್ ಅವರು ಜಾಂಡೀಸ್ ಹಿನ್ನೆಲೆಯಲ್ಲಿ ಇತ್ತೀಚೆಗೆ ತವರುನಾಡಿಗೆ ಮರಳಿದ್ದರು.

 ಜಾಂಡೀಸ್ ಜೊತೆಗೆ ಕೊರೊನಾ ಸೇರಿ ಮೃತಪಟ್ಟಿರುವ ಶಂಕೆ

ಜಾಂಡೀಸ್ ಜೊತೆಗೆ ಕೊರೊನಾ ಸೇರಿ ಮೃತಪಟ್ಟಿರುವ ಶಂಕೆ

ಚೀನಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ ಶಕ್ತಿ ಕುಮಾರ್‌ಗೆ ಜಾಂಡೀಸ್ ಬಂದಿತ್ತು. ಭಾರತಕ್ಕೆ ಚಿಕಿತ್ಸೆ ಪಡೆಯಲೆಂದು ಬಂದಿದ್ದರು. ಮತ್ತೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಝಾಂಡೀಸ್ ಜೊತೆ ಕೊರೊನಾ ವೈರಸ್ ಸೇರಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯ

 ಕೊರೊನಾಗೆ ಆಸ್ಪತ್ರೆ ನಿರ್ದೇಶಕರೇ ಬಲಿ

ಕೊರೊನಾಗೆ ಆಸ್ಪತ್ರೆ ನಿರ್ದೇಶಕರೇ ಬಲಿ

ಕೊರೊನಾ ಕೇಂದ್ರ ಬಿಂದುವಾಗಿರುವ ವುಹಾನ್‌ನಲ್ಲಿರುವ ಆಸ್ಪತ್ರೆಯ ನಿರ್ದೇಶಕರೊಬ್ಬರು ಮೃತಪಟ್ಟಿದ್ದಾರೆ. ಚೀನಾದ ಪ್ರಮುಖ ನಗರ ವುಹಾನ್ ನಲ್ಲಿ ಆಸ್ಪತ್ರೆಯ ನಿರ್ದೇಶಕರು ಮಂಗಳವಾರ ಸಾವನ್ನಪ್ಪಿದ್ದಾರೆ. ವುಚಾಂಗ್ ಆಸ್ಪತ್ರೆಯ ನಿರ್ದೇಶಕ ಲಿಯೂ ಜಿಮಿಂಗ್ ಬೆಳಗ್ಗೆ 10.30ರ ಸುಮಾರಿಗೆ ಮೃತರಾಗಿದ್ದಾರೆ. ಹ್ಯೂಬೆ ಆರೋಗ್ಯ ಇಲಾಖೆಯು ಲಿಯೂ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಇಲ್ಲ ಅವರ ಜೀವಂತವಾಗಿದ್ದಾರೆ ಎನ್ನಲಾದ ಸುದ್ದಿ ಹರಿದಾಡಿತ್ತು. ಆದರೆ ಎರಡನೇ ಪೋಸ್ಟ್ ಲಿಯೂವಿನ ಸ್ನೇಹಿತರೊಬ್ಬರು ಮಾಡಿದ್ದು, ಅವರಿಗೆ ಪ್ರಸ್ತುತ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಚೀನಾದ ಹಿರಿಯ ಆರೋಗ್ಯಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ 1716 ಮಂದಿ ಆರೋಗ್ಯ ನೌಕರರಿಗೆ ಕೊರೊನಾ ತಗುಲಿರುವುದು ತಿಳಿದುಬಂದಿದ್ದು, ಅದರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

 ಕೊರೊನಾಕ್ಕೆ 1800ಕ್ಕೂ ಹೆಚ್ಚು ಮಂದಿ ಬಲಿ

ಕೊರೊನಾಕ್ಕೆ 1800ಕ್ಕೂ ಹೆಚ್ಚು ಮಂದಿ ಬಲಿ

ಕೊರೊನಾ ವೈರಸ್ ಕುರಿತು ಮೊದಲ ಬಾರಿಗೆ ಮಾಹಿತಿ ನೀಡಿದ್ದ ಲಿ ವೆನ್‌ಲಿಯಾಂಗ್ ಫೆಬ್ರವರಿ ಮೊದಲ ವಾರದಲ್ಲಿ ಮರಣಹೊಂದಿದ್ದರು.ಸಾವಿರಾರು ಮಂದಿ ವೈದ್ಯರಿಗೆ ವೈರಸ್ ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದುವರೆಗೂ ಚೀನಾದಲ್ಲಿ ಇದುವರೆಗೆ 1800ಕ್ಕೂ ಹೆಚ್ಚು ಮಂದಿ ಕೊರೊನಾ ರೋಗದಿಂದ ಮೃತಪಟ್ಟಿದ್ದು, 80 ಸಾವಿರಕ್ಕೂ ಹೆಚ್ಚು ಮಂದಿಗೆ ರೋಗ ತಗುಲಿದೆ.

English summary
In Tamil Nadu One Person Died Due To Heavy Fever But Health department yet To Confirm this is Corona Or Not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X