ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಭಾರತದ N-95 ಮಾಸ್ಕ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

|
Google Oneindia Kannada News

ಚೆನ್ನೈ, ಜನವರಿ.30: ಚೀನಾದಲ್ಲಿ ಮಾರಣಹೋಮ ನಡೆಸಿರುವ ಮಾರಕ ರೋಗ ಕೊರೊನಾ ವೈರಸ್ ಗೆ ಮದ್ದು ಭಾರತದಲ್ಲಿ ಸಿದ್ಧಗೊಳ್ಳುತ್ತಿದೆ. ಪ್ರಾಣಾಪಾಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ವಿಶೇಷ ಮಾಸ್ಕ್ ಗೆ ಇದೀಗ ವಿಶ್ವದಾದ್ಯಂತ ಫುಲ್ ಡಿಮ್ಯಾಂಡ್ ಬಂದಿದೆ.

ತಮಿಳುನಾಡಿನ ಮಧುರೈನಲ್ಲಿ ತಯಾರಿಸುವ N-95 ಮಾಸ್ಕ್ ಗೆ ಚೀನಾ ಸೇರಿದಂತೆ ಜಗತ್ತಿನ ಮೂಲೆ ಮೂಲೆಗಳಿಂದ ಬೇಡಿಕೆ ಬರುತ್ತಿದೆ. ಕಳೆದ ಒಂದೇ ವಾರದಲ್ಲಿ N-95 ಮಾಸ್ಕ್ ತಯಾರಿಕೆಯನ್ನು ಕಂಪನಿಯು ದ್ವಿಗುಣಗೊಳಿಸಿದೆ.

ಊಟವಿಲ್ಲ, ನೀರಿಲ್ಲ: ಚೀನಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಿತಿಊಟವಿಲ್ಲ, ನೀರಿಲ್ಲ: ಚೀನಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ

ಚೀನಾದಲ್ಲಿ ಕೊರೊನಾ ವೈರಸ್ ಗೆ ಈಗಾಗಲೇ 170ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನು, 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ವಿಶ್ವದಾದ್ಯಂತ ಈ ಮಾರಕ ವೈರಸ್ ಹರಡುತ್ತಿದೆ. ಇನ್ನು, ಭಾರತದಲ್ಲೂ ಕೊರೊನಾ ವೈರಸ್ ಹರಡುವ ಭೀತಿ ಹೆಚ್ಚಿದ್ದು, ತಮಿಳುನಾಡಿನ ಮಾಸ್ಕ್ ತಯಾರಿಕಾ ಕಂಪನಿಯಲ್ಲಿ N-95 ಮಾಸ್ಕ್ ತಯಾರಿಕೆಯಲ್ಲಿ ಗಣನೀಯ ಏರಿಕೆ ಕಂಡಿದೆ.

N-95 ಮಾಸ್ಕ್ ತಯಾರಿಕೆಗೆ 150 ಸಿಬ್ಬಂದಿ

N-95 ಮಾಸ್ಕ್ ತಯಾರಿಕೆಗೆ 150 ಸಿಬ್ಬಂದಿ

ತಮಿಳುನಾಡು ಮಧುರೈನಲ್ಲಿರುವ ಎಎಂ ಮೇಡಿವೇರ್ ಕಂಪನಿಯು ಈ N-95 ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆ ಹೆಚ್ಚುವರಿ ಸಿಬ್ಬಂದಿ ಬಳಸಿಕೊಂಡು ಮಾಸ್ಕ್ ತಯಾರು ಮಾಡಲಾಗುತ್ತಿದೆ. 150 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಿಸಿಕೊಂಡಿದ್ದು, N-95 ಮಾಸ್ಕ್ ಸಿದ್ಧಪಡಿಸಲಾಗುತ್ತಿದೆ.

ಕೊರೊನಾ ವೈರಾಣು ಬಗ್ಗೆ ಭಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ!ಕೊರೊನಾ ವೈರಾಣು ಬಗ್ಗೆ ಭಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ!

ಸಾಮಾನ್ಯ ಮಾಸ್ಕ್ ನಂತೆ ಅಲ್ಲ N-95 ಮಾಸ್ಕ್!

ಸಾಮಾನ್ಯ ಮಾಸ್ಕ್ ನಂತೆ ಅಲ್ಲ N-95 ಮಾಸ್ಕ್!

N-95 ಮಾಸ್ಕ್ ಸಾಮಾನ್ಯ ಮಾಸ್ಕ್ ಗಳಿಗಿಂತ ವಿಭಿನ್ನ ಮತ್ತು ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ಬಳಸುವ ಮಾಸ್ಕ್ ಗಳು ಎರಡರಿಂದ ಮೂರು ಪದರವನ್ನು ಹೊಂದಿರುತ್ತದೆ. ಆದರೆ, N-95 ಮಾಸ್ಕ್ ಆರು ಪದರಗಳನ್ನು ಹೊಂದಿದ್ದು, ಉಳಿದ ಮಾಸ್ಕ್ ಗಳಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ ಎನಿಸಿದೆ.

N-95 ಮಾಸ್ಕ್ ಹಾಕುತ್ತೆ ವೈರಸ್ ಹರಡುವಿಕೆಗೆ ಕಡಿವಾಣ

N-95 ಮಾಸ್ಕ್ ಹಾಕುತ್ತೆ ವೈರಸ್ ಹರಡುವಿಕೆಗೆ ಕಡಿವಾಣ

ಆರು ಪದರಗಳನ್ನು ಹೊಂದಿರುವ N-95 ಮಾಸ್ಕ್ ಹೆಚ್ಚು ಸುರಕ್ಷಿತವಾಗಿದ್ದು, ಸೂಕ್ಷ್ಮ ವೈರಾಣುಗಳು ಹರಡದಂತೆ ರಕ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ N-95 ಮಾಸ್ಕ್ ನ್ನು ಧರಿಸುವಂತೆ ಹೆಚ್ಚಾನುಹೆಚ್ಚು ವೈದ್ಯರು ಸಲಹೆ ನೀಡುತ್ತಿದ್ದಾರೆ. ಇದರಿಂದ N-95 ಮಾಸ್ಕ್ ಗಾಗಿ ಬೇಡಿಕೆ ಹೆಚ್ಚುತ್ತಿದೆ ಎಂಬುದು ಕಂಪನಿಯ ಮ್ಯಾನೇಜರ್ ಅಭಿಲಾಷ ಅಭಿಪ್ರಾಯವಾಗಿದೆ.

ಕೊರೊನಾ ವೈರಸ್ ಚಿಕಿತ್ಸೆಗಾಗಿ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಲಿದೆ ಚೀನಾಕೊರೊನಾ ವೈರಸ್ ಚಿಕಿತ್ಸೆಗಾಗಿ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಲಿದೆ ಚೀನಾ

ಚೀನಾ, ಅಮೆರಿಕಾ, ಇಂಗ್ಲೆಂಡ್ ನಲ್ಲೂ ಕ್ರಮ

ಚೀನಾ, ಅಮೆರಿಕಾ, ಇಂಗ್ಲೆಂಡ್ ನಲ್ಲೂ ಕ್ರಮ

ಇನ್ನು, ಚೀನಾದಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊರಾನಾ ವೈರಸ್ ವಿಶ್ವದಾದ್ಯಂತ ಹರಡಿದ್ದು, ಆತಂಕ ಸೃಷ್ಟಿಸಿದೆ. ಮಾರಕ ರೋಗ ತಡೆಗೆ ಚೀನಾ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಿದೆ. ಇನ್ನೊಂದೆಡೆ ವಿಶ್ವದ ದೊಡ್ಡಣ್ಣ ಅಮೆರಿಕಾ, ಇಂಗ್ಲೆಂಡ್ ಮತ್ತು ಭಾರತದಲ್ಲೂ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

English summary
CoronaVirus: Demand Create For N-95 Special Mask Manufactured In India. Tamilnadu Based Company Increased Manufacturers Of Mask.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X