ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ

|
Google Oneindia Kannada News

ಚೆನ್ನೈ, ಮೇ 21; ಕೊರೊನಾ ಸೋಂಕು ಇಡೀ ವಿಶ್ವವನ್ನೇ ಕಾಡುತ್ತಿದೆ. ತಮಿಳುನಾಡಿನಲ್ಲಿ ಕೊರೊನಾಗೆ ದೇವರ ಸ್ವರೂಪ ನೀಡಲಾಗಿದ್ದು, ಆರ್ಭಟ ತಣ್ಣಗಾಗಿಸುವಂತೆ 'ಕೊರೊನಾ ದೇವಿ'ಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ.

Recommended Video

ತಮಿಳುನಾಡಿನಲ್ಲಿ ಕೊರೋನಾ ದೇವಿ ದೇವಾಲಯ ಕಟ್ಟಿ ವಿಶೇಷ ಪೂಜೆ | Oneindia Kannada

ತಮಿಳುನಾಡಿನ ಕೊಯಮತ್ತೂರಿನಲ್ಲಿ 'ಕೊರೊನಾ ದೇವಿ' ದೇವಾಲಯ ನಿರ್ಮಾಣ ಮಾಡಲಾಗಿದೆ. ಕಾಮಾಚಿಪುರಿ ಅಧೀನಂ ಪೀಠ ಈ ದೇವಾಲಯ ನಿರ್ಮಿಸಿದೆ. ಪ್ರತಿದಿನವೂ ಈ ದೇವಾಲಯದಲ್ಲಿ ಅರ್ಚಕರು ದೇವಿಗೆ ಪೂಜೆ ಮಾಡುತ್ತಿದ್ದಾರೆ.

 ಕಪ್ಪು ಶಿಲೀಂಧ್ರ ಸೋಂಕನ್ನು ಅಧಿಸೂಚಿತ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ತಮಿಳುನಾಡು ಕಪ್ಪು ಶಿಲೀಂಧ್ರ ಸೋಂಕನ್ನು ಅಧಿಸೂಚಿತ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ತಮಿಳುನಾಡು

ಕೊರೊನಾ ಆರ್ಭಟ ದೇಶದಲ್ಲಿ ಕಡಿಮೆಯಾಗಲಿ ಎಂದು ನಿತ್ಯ ಪೂಜೆಗಳನ್ನು ಮಾಡಲಾಗುತ್ತಿದೆ. ಒಟ್ಟು 48 ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತದೆ ಎಂದು ಅರ್ಚಕರು ಹೇಳಿದ್ದಾರೆ.

 ಕೊರೊನಾ ಸೋಂಕಿನಿಂದ ಚಿಪ್ಕೊ ಚಳವಳಿ ನಾಯಕ ಸುಂದರ್‌ಲಾಲ್ ಬಹುಗುಣ ನಿಧನ ಕೊರೊನಾ ಸೋಂಕಿನಿಂದ ಚಿಪ್ಕೊ ಚಳವಳಿ ನಾಯಕ ಸುಂದರ್‌ಲಾಲ್ ಬಹುಗುಣ ನಿಧನ

Corona Devi Temple Built At Coimbatore

"ವಿಶೇಷ ಪೂಜೆಗಳು, ಮಹಾಯಾಗದ ಮೂಲಕ ದೇವಿಯನ್ನು ಸಂತೃಪ್ತಿಗೊಳಿಸಲಾಗುತ್ತದೆ. ಈ ಮೂಲಕ ದೇವಿಯನ್ನು ಶಾಂತಳಾಗಿರುವಂತೆ ಬೇಡಿಕೊಳ್ಳಲಾಗುತ್ತದೆ" ಎಂದು ದೇವಾಲಯದ ಮುಖ್ಯಸ್ಥ ಶಿವಲಿಂಗೇಶ್ವರ್ ತಿಳಿಸಿದ್ದಾರೆ.

 ಕೊರೊನಾ ನಮ್ಮಿಂದ ಹಲವರನ್ನು ಕಿತ್ತುಕೊಂಡಿದೆ; ಭಾವುಕರಾದ ಮೋದಿ ಕೊರೊನಾ ನಮ್ಮಿಂದ ಹಲವರನ್ನು ಕಿತ್ತುಕೊಂಡಿದೆ; ಭಾವುಕರಾದ ಮೋದಿ

ತಮಿಳುನಾಡಿನಲ್ಲಿ ಸಾಂಕ್ರಾಮಿಕ ರೋಗಗಳು ಬಂದಾಗ ಈ ಹಿಂದೆಯೂ ದೇವಾಲಯಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಲಾಗಿತ್ತು. ಈಗ ಕೊರೊನಾ ಕಾಲದಲ್ಲಿಯೂ ದೇವಾಲಯ ನಿರ್ಮಿಸಲಾಗಿದೆ.

Corona Devi Temple Built At Coimbatore

ಕೊರೊನಾ ಅಮ್ಮನ ದೇವಾಲಯದಲ್ಲಿ ಅರ್ಚಕರು ಪೂಜೆ ಸಲ್ಲಿಸುತ್ತಿರುವ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ವೈರಲ್ ಆಗಿವೆ.

ತಮಿಳುನಾಡಿನಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 17,34,804. ಸಕ್ರಿಯ ಪ್ರಕರಣಗಳ ಸಂಖ್ಯೆ 2,63,390. ಇದುವರೆಗೂ ರಾಜ್ಯದಲ್ಲಿ 19,131 ಜನರು ಮೃತಪಟ್ಟಿದ್ದಾರೆ.

English summary
Corona Devi temple built at Coimbatore, Tamil Nadu. Priests offer special prayer to Corona Devi to contain the spread of COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X