• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ ಬಗ್ಗೆ ಚಿದಂಬರಂ ಪ್ರಶ್ನೆ

|

ಚೆನ್ನೈ, ಮಾರ್ಚ್ 25: ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿಕೂಟದ ಕುರಿತು ಮಾತನಾಡಿದ್ದು, ಹೇಗೆ ಒಂದು ವಿಷಯದ ಬಗ್ಗೆ ಭಿನ್ನ ನಿಲುವು ವ್ಯಕ್ತಪಡಿಸಿದವರು ಮೈತ್ರಿ ಮಾಡಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಈ ಎರಡೂ ಪಕ್ಷಗಳು ಭಿನ್ನ ನಿಲುವು ವ್ಯಕ್ತಪಡಿಸಿವೆ. ಹೀಗಿದ್ದರೂ ಈ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಇದು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.

 ಬಜೆಟ್ 2021ರಲ್ಲಿ ಬಡವರಿಗೆ ವಂಚನೆ: ನಿರ್ಮಲಾ ಸೀತಾರಾಮನ್ ವಿರುದ್ಧ ಚಿದಂಬರಂ ವಾಗ್ದಾಳಿ ಬಜೆಟ್ 2021ರಲ್ಲಿ ಬಡವರಿಗೆ ವಂಚನೆ: ನಿರ್ಮಲಾ ಸೀತಾರಾಮನ್ ವಿರುದ್ಧ ಚಿದಂಬರಂ ವಾಗ್ದಾಳಿ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಚಿದಂಬರಂ, ಸಂಸತ್ತಿನಲ್ಲಿ ಎಐಎಡಿಎಂಕೆ, ಸಿಎಎ ಪರ ಮತ ಹಾಕಿತ್ತು. ಇದೀಗ ಈ ವಿವಾದಾತ್ಮಕ ಕಾನೂನನ್ನು ತೆಗೆದುಹಾಕುತ್ತೇವೆಂದು ಘೋಷಿಸಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ, ತಾವು ಅಧಿಕಾರಕ್ಕೆ ಬಂದರೆ ಸಿಎಎ ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡುತ್ತಿದೆ. ಈ ಎರಡೂ ಪಕ್ಷಗಳು ಒಂದೇ ವಿಷಯದ ಬಗ್ಗೆ ಭಿನ್ನ ನಡೆ ಹೊಂದಿವೆ. ಆದರೂ ಮೈತ್ರಿಕೂಟವನ್ನು ಸಾಧಿಸಿವೆ ಎಂದು ಟೀಕಿಸಿದ್ದಾರೆ.

ತಮಿಳುನಾಡಿನಲ್ಲಿ ಹಿಂದೂ ದೇಗುಲಗಳ ಉಸ್ತುವಾರಿಗೆ ಪ್ರತ್ಯೇಕ ಮಂಡಳಿ ಸ್ಥಾಪನೆ ಕುರಿತು ಘೋಷಣೆ ಮಾಡಿರುವ ಬಿಜೆಪಿ ಪ್ರಣಾಳಿಕೆಯನ್ನು ಚಿದಂಬರಂ ಟೀಕಿಸಿ, ಇದು ಅನಗತ್ಯ ಎಂದು ಹೇಳಿದ್ದಾರೆ.

English summary
BJP and the AIADMK, which are alliance partners in Tamil Nadu, have different stance over the issue of the Citizenship Amendment Act (CAA). But how they are in alliance asked Senior Congress leader and former Finance Minister P Chidambaram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X