ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರ್ತು ಪರಿಸ್ಥಿತಿ ನಂತರ ಕಾಂಗ್ರೆಸ್ ಹೆಚ್ಚು ಕುತಂತ್ರಿಯಾಗಿದೆ: ಮೋದಿ

|
Google Oneindia Kannada News

ಚೆನ್ನೈ, ಡಿಸೆಂಬರ್ 19: ತುರ್ತು ಪರಿಸ್ಥಿತಿಯ ದಿನಗಳ ನಂತರ ಕಾಂಗ್ರೆಸ್ ಪಕ್ಷವು ಹೆಚ್ಚು ಕುತಂತ್ರಿ ಆಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ನವದೆಹಲಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ವೆಲ್ಲೂರ್, ಕಾಂಚೀಪುರಂ, ವಿಲ್ಲುಪುರಂ, ದಕ್ಷಿಣ ಚೆನ್ನೈ ಜಿಲ್ಲೆಗಳು ಹಾಗೂ ಪುದುಚೆರಿಯ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮೋದಿ ಮಾತನಾಡಿದರು.

'15 ಲಕ್ಷ ರೂ. ಎಲ್ಲರ ಖಾತೆಗೂ ಬರುತ್ತದೆ, ಆದರೆ ಸ್ವಲ್ಪ ತಡವಾಗಿ!''15 ಲಕ್ಷ ರೂ. ಎಲ್ಲರ ಖಾತೆಗೂ ಬರುತ್ತದೆ, ಆದರೆ ಸ್ವಲ್ಪ ತಡವಾಗಿ!'

ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆಗಳನ್ನು ಅವಮಾನ ಮಾಡಿದೆ. ಅದು ಸೇನೆ ಇರಲಿ ಅಥವಾ ಸಿಎಜಿ ಇರಲಿ. ಅಷ್ಟೇ ಏಕೆ ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡ ಪ್ರಶ್ನಿಸಿದೆ. ಅದು ತನಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಪ್ರಶ್ನಿಸಿದೆ ಎಂದು ರಫೇಲ್ ವ್ಯವಹಾರ ವಿಚಾರವಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ದಾಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Congress became more cunning since Emergency, PM Modi

ಕೇಂದ್ರ ಸರಕಾರದ ಯೋಜನೆಗಳ ಮಾಹಿತಿಯನ್ನು ಮತದಾರರಿಗೆ ತಲುಪಿಸಿ. ವಸತಿ ಯೋಜನೆಯಿಂದ ಆರೋಗ್ಯ ರಕ್ಷಾ ಯೋಜನೆ ತನಕ. ಶೌಚಾಲಯದಿಂದ ಕೌಶಲ ಯೋಜನೆ ತನಕ ಸಮಾಜದ ಎಲ್ಲ ವರ್ಗದವರಿಗೆ ರೂಪಿಸಲಾಗಿದೆ ಎಂದಿದ್ದಾರೆ.

English summary
Hitting back at the Congress, Prime Minister Narendra Modi said on Wednesday it has humiliated every institution of democracy, be it the Army or the CAG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X