ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಮೇ 10ರಿಂದ 24ರವರೆಗೆ ಸಂಪೂರ್ಣ ಲಾಕ್‌ಡೌನ್

|
Google Oneindia Kannada News

ಚೆನ್ನೈ, ಮೇ 08: ತಮಿಳುನಾಡಿನಲ್ಲಿ ಕೊರೊನಾ ಸೋಂಕು ವಿಪರೀತವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 10 ರಿಂದ 24ರವರೆಗೆ ಎರಡು ವಾರಗಳ ಕಾಲ ಲಾಕ್‌ಡೌನ್ ವಿಧಿಸಲಾಗಿದೆ.

ತಮಿಳು ನಾಡಿನಲ್ಲಿ ಯಾವುದಕ್ಕೆ ನಿರ್ಬಂಧ?: ಈ ಕುರಿತು ಹೇಳಿಕೆ ಹೊರಡಿಸಿರುವ ಅವರು, ಅಗತ್ಯ ಸೇವೆಗಳಾದ ಸಚಿವಾಲಯ, ಆರೋಗ್ಯ, ಕಂದಾಯ, ವಿಪತ್ತು ನಿರ್ವಹಣೆ, ಪೊಲೀಸ್, ಗೃಹ ರಕ್ಷಕ, ಅಗ್ನಿಶಾಮಕ ಮತ್ತು ಸುರಕ್ಷತಾ ಸೇವೆ, ಕೈದಿ ಇಲಾಖೆ, ಜಿಲ್ಲಾಡಳಿತ, ಇಂಧನ, ಕುಡಿಯುವ ನೀರು, ಪೂರೈಕೆ ಖಜಾನೆಗಳನ್ನು ಹೊರತುಪಡಿಸಿ ಉಳಿದ ಯಾವ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಲಾಕ್‌ಡೌನ್, ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ನಿಷೇಧ: ಯಡಿಯೂರಪ್ಪ ಕರ್ನಾಟಕದಲ್ಲಿ ಲಾಕ್‌ಡೌನ್, ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ನಿಷೇಧ: ಯಡಿಯೂರಪ್ಪ

ಒಂದೊಂದೇ ರಾಜ್ಯಗಳು ಲಾಕ್‌ಡೌನ್ ವಿಧಿಸುತ್ತಿದ್ದು, ಇದೀಗ ತಮಿಳುನಾಡು ಸರದಿಯಾಗಿದೆ. ಇದೀಗ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡ ಲಾಕ್ ಡೌನ್ ಘೋಷಿಸಿದ್ದಾರೆ. ಮೇ 10ರಿಂದ 24ರವರೆಗೆ ಎರಡು ವಾರಗಳ ಕಾಲ ತಮಿಳು ನಾಡಿನಲ್ಲಿ ಸಂಪೂರ್ಣ ಲಾಕ್ ಡೌನ್‌ನ್ನು ಅಲ್ಲಿನ ಮುಖ್ಯಮಂತ್ರಿ ಘೋಷಿಸಿದ್ದಾರೆ.

ಉದ್ಯಾನ, ಕ್ಲಬ್, ಬಾರ್‌ಗಳಿಗೆ ಅವಕಾಶವಿಲ್ಲ

ಉದ್ಯಾನ, ಕ್ಲಬ್, ಬಾರ್‌ಗಳಿಗೆ ಅವಕಾಶವಿಲ್ಲ

ಮನರಂಜನಾ ಕ್ಲಬ್‌ಗಳು, ಬಾರ್‌ಗಳು, ಸಭಾಂಗಣಗಳು, ಮನರಂಜನೆ ಉದ್ಯಾನವನಗಳು, ಸಭಾಂಗಣಗಳು ಕಾರ್ಯನಿರ್ವಹಿಸುವಂತಿಲ್ಲ. ಕೊಯಂಬೆಡು ಸಗಟು ಮಾರುಕಟ್ಟೆಯಲ್ಲಿ ಬಾರ್ ಗಳು ಚಿಲ್ಲರೆ ಮಾರಾಟ ಮಧ್ಯಾಹ್ನದವರೆಗೆ ಮಾರಾಟ ಮಾಡಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಸಗಟು ಮಾರುಕಟ್ಟೆಯಲ್ಲಿ ಹಣ್ಣು-ತರಕಾರಿ ಮಾರಾಟಕ್ಕೂ ಈ ನಿರ್ಬಂಧ ಅನ್ವಯವಾಗುತ್ತದೆ.

ಸರ್ಕಾರಿ ಕಚೇರಿಗಳಿಗೂ ಅನ್ವಯ

ಸರ್ಕಾರಿ ಕಚೇರಿಗಳಿಗೂ ಅನ್ವಯ

ಈ ನಿರ್ಬಂಧ ರಾಜ್ಯದಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಿಗೂ ಅನ್ವಯವಾಗುತ್ತದೆ. ಎಲ್ಲಾ ಖಾಸಗಿ ಕಚೇರಿಗಳು, ಉದ್ಯಮಗಳು, ಐಟಿ, ಐಟಿ ಸಂಬಂಧಿ ಸೇವೆಗಳು, ವಿನಾಯ್ತಿ ಹೊಂದಿದ ಕೈಗಾರಿಕೆಗಳು ಹೊರತುಪಡಿಸಿ ಬೇರೆ ಕಾರ್ಖಾನೆಗಳು ಲಾಕ್ ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸುವಂತಿಲ್ಲ, ಈ ಕಚೇರಿಗಳಲ್ಲಿ ಮನೆಯಿಂದ ಕೆಲಸ ಮಾಡುವ ವಿಧಾನ ಅನುಸರಿಸಬಹುದು.

ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ 12ರವರೆಗೆ ಅವಕಾಶ

ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ 12ರವರೆಗೆ ಅವಕಾಶ

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ನಿಯಮಿತದ ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿದ್ದು ರೆಸ್ಟೋರೆಂಟ್, ಹೊಟೇಲ್, ಮೆಸ್ ಮತ್ತು ಟೀ ಅಂಗಡಿಗಳಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಾರ್ಸೆಲ್ ಕೊಂಡೊಯ್ಯಲು ಮಾತ್ರ ಅವಕಾಶವಿರುತ್ತದೆ.

ಆನ್ ಲೈನ್ ನಲ್ಲಿ ಗ್ರಾಹಕರಿಗೆ ದಿನಸಿ, ತರಕಾರಿಗಳು, ಮಾಂಸ ಮತ್ತು ಮೀನುಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ವಿತರಿಸಲು ಅವಕಾಶವಿರುತ್ತದೆ. ಉಳಿದೆಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಿರುತ್ತದೆ.
ಯಾವ ಅಂಗಡಿಗಳು ಎಷ್ಟೊತ್ತು ತೆಗೆದಿರಲಿವೆ

ಯಾವ ಅಂಗಡಿಗಳು ಎಷ್ಟೊತ್ತು ತೆಗೆದಿರಲಿವೆ

ಬ್ಯೂಟಿ ಪಾರ್ಲರ್, ಹೇರ್ ಕಟ್ಟಿಂಗ್ ಸಲೂನ್ ಗಳು, ಸ್ಪಾಗಳು ಎರಡು ವಾರ ಬಂದ್ ಆಗಿರುತ್ತದೆ. ಇನ್ನು ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು, ತರಕಾರಿ ಮಳಿಗೆಗಳು, ಮಾಂಸ, ಮೀನು ಮಾರಾಟ ಮಾಡುವ ಹವಾ ನಿಯಂತ್ರಿತವಲ್ಲದ ಅಂಗಡಿಗಳಿಗೆ ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರಲು ಅವಕಾಶವಿರುತ್ತದೆ.

English summary
In a bid to control the spread of coronavirus, the newly elected MK Stalin-led Tamil Nadu government has decided to impose a 2-week complete lockdown in the state from May 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X