ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಯಮತ್ತೂರಿನಲ್ಲಿ ಸಿಕ್ಕಿಬಿದ್ದ ನಕ್ಸಲರು ಯಾರು?

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಮೇ 5 : ನಾಲ್ಕು ರಾಜ್ಯಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಕ್ಸಲ್ ನಾಯಕ ರೂಪೇಶ್ ಮತ್ತು ಆತನ ಪತ್ನಿ ಶೈನಾ ಸೇರಿದಂತೆ ಐವರನ್ನು ಕೊಯಮತ್ತೂರಿನಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಇವರು ಚಳವಳಿ ವಿಸ್ತರಿಸಲು ಯೋಜನೆ ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರೂಪೇಶ್, ಶೈನಾ, ಅನೂಪ್, ವೀರಮಣಿ, ಕಣ್ಣನ್ ಅವರನ್ನು ಬಂಧಿಸಲಾಗಿದೆ. 2010ರಲ್ಲಿ ಕರ್ನಾಟಕದಲ್ಲಿ ಬಂಧಿತನಾಗಿದ್ದ ನಂದಕುಮಾರ್ ದಕ್ಷಿಣದ ರಾಜ್ಯಗಳಲ್ಲಿ ನಕ್ಸಲ್ ಚಳವಳಿ ವಿಸ್ತರಣೆ ಬಗ್ಗೆ ಮಾಹಿತಿ ನೀಡಿದ್ದ. ಆದ್ದರಿಂದ ಐವರ ಬಂಧನ ಮಹತ್ವ ಪಡೆದುಕೊಂಡಿದೆ.

Naxal

ಕಳೆದ ಕೆಲವು ತಿಂಗಳುಗಳಿಂದ ದಕ್ಷಿಣ ರಾಜ್ಯದಲ್ಲಿ ಚಳವಳಿ ವಿಸ್ತರಣೆ ಮಾಡುವ ಕಾರ್ಯವನ್ನು ನಕ್ಸಲರು ಆರಂಭಿಸಿದ್ದರು ಎಂಬ ಮಾಹಿತಿ ಪ್ರಾಥಮಿಕವಾಗಿ ಲಭ್ಯವಾಗಿದೆ. ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮುಂತಾದ ರಾಜ್ಯಗಳಲ್ಲಿ ಸದಸ್ಯರ ಕೊರತೆ ಎದುರಿಸುತ್ತಿರುವ ನಕ್ಸಲರು ದಕ್ಷಿಣದತ್ತ ಮುಖ ಮಾಡಿ ಹೋರಾಟ ಆರಂಭಿಸುತ್ತಿದ್ದಾರೆ. [ಕೊಯಮುತ್ತೂರಿನಲ್ಲಿ ಐವರು ಶಂಕಿತ ನಕ್ಸಲರ ಬಂಧನ]

ಸಶಸ್ತ್ರ ಹೋರಾಟ : ದಕ್ಷಿಣ ಭಾರತದ ರಾಜ್ಯಗಳಲ್ಲಿ 'ಸಶಸ್ತ್ರ ಹೋರಾಟ' ಎಂಬ ಹೆಸರಿನಲ್ಲಿ ನಕ್ಸಲರು ಚಳವಳಿ ವಿಸ್ತರಣೆ ಮಾಡಲು ಪ್ರಯತ್ನ ಆರಂಭಿಸಿದ್ದಾರೆ. ಚೈನಾದಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಹೋರಾಟಕ್ಕೆ ಬಳಸುತ್ತಿದ್ದಾರೆ. ದಕ್ಷಿಣದ ಪ್ರತಿ ರಾಜ್ಯದಲ್ಲಿ ಚಳವಳಿ ವಿಸ್ತರಿಸಲು ಪ್ರತ್ಯೇಕ ಯೋಜನೆ ರೂಪಿಸಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ.

ಆಂಧ್ರದಲ್ಲಿ ಕ್ಯಾಂಪ್ : ಹಿಂದೆ ಆಂಧ್ರಪ್ರದೇಶದ ದಂಡಕಾರಣ್ಯದಲ್ಲಿ ನಕ್ಸಲರ ಟೆಂಟ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆಗಲೇ ದಕ್ಷಿಣದ ರಾಜ್ಯಗಳತ್ತ ಅವರು ಮುಖ ಮಾಡಿದ್ದಾರೆ ಎಂಬುದು ತಿಳಿದಿತ್ತು. ಕಾಡನ್ನು ತರಬೇತಿ ಶಿಬಿರದಂತೆ ಬಳಸುತ್ತಿದ್ದ ನಕ್ಸಲರು ಆಂಧ್ರ ಮತ್ತು ತೆಲಂಗಾಣ ಭಾಗದಲ್ಲಿ ಸಕ್ರಿಯರಾಗಿದ್ದರು. ಉಳಿದ ರಾಜ್ಯದವರು ಇವರೊಂದಿಗೆ ಕೈ ಜೋಡಿಸುತ್ತಿದ್ದಾರೆ.

ಕೇರಳದ ಸಂಪರ್ಕದ ತನಿಖೆ : ಕೊಯಮತ್ತೂರಿನಲ್ಲಿ ಸಿಕ್ಕಿಬಿದ್ದ ರೂಪೇಶ್ ಮತ್ತು ಶೈನಾ ದಂಪತಿಗಳು ಕೇರಳಕ್ಕೆ ಸೇರಿದವರು. ಕೇರಳದ ರಬ್ಬರ್ ಪ್ಲಾಂಟೇಶನ್ ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲು ಬಯಸಿದ್ದರು. ಕೇರಳ ಕರ್ನಾಟಕ ಗಡಿಯಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ಕರ್ನಾಟಕ ನಂಟು : ಕರ್ನಾಟಕದ ನಕ್ಸಲ್ ನಾಯಕರು ಉಳಿದ ರಾಜ್ಯಗಳಿಗೆ ಸಹಾಯ ಮಾಡುತ್ತಿದ್ದರು. 2010ರಲ್ಲಿ ಕರ್ನಾಟಕದಲ್ಲಿ ಬಂಧಿತನಾದ ನಂದಕುಮಾರ್ ದಕ್ಷಿಣ ರಾಜ್ಯಗಳ ವಿಷಯವನ್ನು ಬಹಿರಂಗಪಡಿಸಿದ್ದ. ಕೊಯಮತ್ತೂರಿನಲ್ಲಿ ಬಂಧಿಸಲಾದ ವೀರಮಣಿ ಕರ್ನಾಟಕದವರಾಗಿದ್ದು, ರಾಜ್ಯದಲ್ಲಿ ಅವರು ಹೊಂದಿರುವ ಸಂಪರ್ಕಗಳ ಬಗ್ಗೆ ತನಿಖೆ ನಡೆಯುತ್ತಿದೆ.

English summary
Combined operation by the police forces of Tamil Nadu, Andhra Pradesh, Karnataka and Kerala managed to nab the five naxals including a couple from Coimbatore and officials say that this is a major catch. The five persons to be arrested were Roopesh and his wife, Shina, Anup, Veeramani and Kannan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X