ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದಂಗಡಿ ಬಂದ್; ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಿದ ತಮಿಳುನಾಡು ಸಿಎಂ

|
Google Oneindia Kannada News

ಚೆನ್ನೈ ಅಕ್ಟೋಬರ್ 24: ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಇಬ್ಬರು ಶಾಲಾ ವಿದ್ಯಾರ್ಥಿಗಳು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಮನವಿ ಮಾಡಿದ್ದರು. ಈ ಬಗ್ಗೆ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದ ಪರಿಣಾಮವಾಗಿ ತಮಿಳುನಾಡಿನ ಅರಿಯಲೂರು ಜಿಲ್ಲೆಯ ಅವರ ಶಾಲೆಯ ಬಳಿ ಇರುವ ಮದ್ಯದ ಅಂಗಡಿಯನ್ನು ಮುಚ್ಚಲಾಗಿದೆ.

ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದ ವಿದ್ಯಾರ್ಥಿಗಳು ಒಡಹುಟ್ಟಿದವರು. ಇ ಎಂ ಇಲಂಥೆಂಡ್ರಲ್ ಮತ್ತು ಅರಿವರಸನ್ ಹೆಸರಿನ ಇವರು 6 ನೇ ತರಗತಿ ಮತ್ತು 4 ನೇ ತರಗತಿಯಲ್ಲಿ ಓದುತ್ತಿದ್ದಾರೆ. ನವೆಂಬರ್‌ನಲ್ಲಿ ಪ್ರಾಥಮಿಕ ವಿಭಾಗಕ್ಕೆ ಭೌತಿಕ ತರಗತಿಗಳನ್ನು ಮತ್ತೆ ತೆರೆಯುವ ಮೊದಲು ಕಲೆಕ್ಟರ್‌ನಿಂದ ಅಂಗಡಿಯನ್ನು ಬಂದ್ ಮಾಡುವಂತೆ ಅವರು ಮನವಿ ಮಾಡಿದ್ದರು.

ಸ್ಥಳೀಯ ಮಾದ್ಯಮದೊಂದಿಗೆ ಮಾತನಾಡಿದ ಇಲಂಥೆಂಡ್ರಲ್ ಅವರು "ಶಾಲೆ ಬಳಿಯಿರುವ ಮದ್ಯದ ಅಂಗಡಿಯಲ್ಲಿ ಜನ ಸೇರುತ್ತಾರೆ. ಎಲ್ಲರೂ ಅಲ್ಲಿ ಕುಳಿತು ಕುಡಿಯುತ್ತಾರೆ. ಜೊತೆಗೆ ಅಲ್ಲಿ ಕುಳಿತು ಅಸಭ್ಯ ಭಾಷೆಯನ್ನು ಬಳಸುತ್ತಾರೆ. ನಮಗೆ ತುಂಬಾ ಭಯವಾಗುತ್ತದೆ" ಎಂದು ಹೇಳಿದ್ದಾರೆ.

ದೂರಿನಲ್ಲೇನಿದೆ?

ದೂರಿನಲ್ಲೇನಿದೆ?

ಈ ಹಿಂದೆ ಶಿಕ್ಷಣ ಸಂಸ್ಥೆಗಳ ಸಮೀಪ ಇರುವ 300 ಅಂಗಡಿಗಳನ್ನು ಮುಚ್ಚಲಾಗಿದ್ದರೂ ಸೆಲಯೂರಿನ ಜಾನ್ ಮಾರ್ಕ್ ಮೆಟ್ರಿಕ್ಯುಲೇಷನ್ ಶಾಲೆ, ನನ್ಮಂಗಲಂನ ಜಿಯಾನ್ ಶಾಲೆ, ಚೂಲೈಮೇಡು ಕೇಂದ್ರೀಯ ವಿದ್ಯಾಲಯ ಸೇರಿದಂತೆ ಇತರ ಅನೇಕ ಶಾಲೆಗಳ ವಿದ್ಯಾರ್ಥಿಗಳು ಸಮಾಜ ವಿರೋಧಿ ಅಂಶಗಳು ತಮಗೆ ದೊಡ್ಡ ತೊಂದರೆಯಾಗಿದೆ ಎಂದು ದೂರುತ್ತಾರೆ. ಕುಡುಕರು ಸಾಮಾನ್ಯವಾಗಿ ಶಾಲೆಯ ಕಾಂಪೌಂಡ್‌ಗಳ ಸುತ್ತಲೂ ಮಲಗುತ್ತಾರೆ ಮತ್ತು ಅವರು ನಮ್ಮ ಆವರಣದ ಬಳಿ ಮದ್ಯದ ಬಾಟಲಿಗಳನ್ನು ಸಹ ಎಸೆಯುತ್ತಾರೆ. ಇದು ನಮ್ಮ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಈ ಹಿಂದೆ ದೂರು

ಈ ಹಿಂದೆ ದೂರು

ಮದ್ರಾಸ್ ಹೈಕೋರ್ಟ್ 2015 ರಲ್ಲಿ ಶಾಲೆಯ 100 ಮೀಟರ್ ಒಳಗೆ ಯಾವುದೇ ಮದ್ಯ ಇರಬಾರದು ಎಂದು ತೀರ್ಪು ನೀಡಿತ್ತು. ಆದರೆ ಕೆಲವು ಕಡೆ ಈ ಆದೇಶವನ್ನು ಉಲ್ಲಂಘಿಸಲಾಗಿದೆ. ಆದರೆ ಮಕ್ಕಳು ದೂರು ನೀಡಿದ ಮದ್ಯದಂಗಡಿ 100 ಮೀಟರ್ ದೂರದಲ್ಲಿ ಇದ್ದರೂ, ಮಕ್ಕಳ ಮನವಿಯ ನಂತರ ಅದನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿ ನಿರ್ಧರಿಸಿದರು. ಪುಟ್ಟ ಮಕ್ಕಳ ಈ ಮನವಿಯು ಮುಖ್ಯ ಕಾರ್ಯದರ್ಶಿಯವರ ಮಧ್ಯಸ್ಥಿಕೆಗೆ ಕಾರಣವಾಗಿದೆ. ಜೊತೆಗೆ ಅವರು ಪ್ರದೇಶದಿಂದ ಮದ್ಯದ ಅಂಗಡಿಯನ್ನು ಸ್ಥಳಾಂತರಿಸುವಂತೆ ಸೂಚಿಸಿದರು.

ಮಾತ್ರವಲ್ಲದೇ ಶಾಲೆಯ ಆಸುಪಾಸಿನಲ್ಲಿರುವ ಮದ್ಯದ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. 9ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವ ಘಟನೆಗಳು ಸಾಕಷ್ಟು ನಡೆದಿವೆ. ಇಂತಹ ಘಟನೆಗಳು ಇದರ ವಿರುದ್ಧ ಕಠಿಣ ಕ್ರಮಗಳ ಅಗತ್ಯವನ್ನು ಎತ್ತಿ ತೋರಿಸಿವೆ' ಎಂದು ತಾಂಬರಂನಲ್ಲಿರುವ ಸಿಎಸ್‌ಐ ಕಾರ್ಲೆ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ವಿ.ರಾಜು ಹೇಳಿದ್ದಾರೆ.

 ಮಕ್ಕಳ ಪ್ರಯತ್ನಕ್ಕೆ ಪ್ರಶಂಸೆ

ಮಕ್ಕಳ ಪ್ರಯತ್ನಕ್ಕೆ ಪ್ರಶಂಸೆ

"ಮದ್ಯದಂಗಡಿ ಶಾಲೆಯಿಂದ 100 ಮೀಟರ್ ದೂರದಲ್ಲಿದ್ದರೂ, ಮಕ್ಕಳು ಶಾಲೆಯನ್ನು ಪ್ರತಿನಿಧಿಸಿದ್ದರಿಂದ ಅಂಗಡಿಯನ್ನು ಮುಚ್ಚಲು ಮತ್ತು ಅದನ್ನು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸುವ ಆದೇಶವನ್ನು ನಾವು ಅಂಗೀಕರಿಸಿದ್ದೇವೆ" ಎಂದು ಅರಿಯಲೂರು ಕಲೆಕ್ಟರ್ ಪಿ ರಮಣ ಸರಸ್ವತಿ ಸ್ಥಳೀಯ ಸುದ್ದಿಗಾರರಿಗೆ ತಿಳಿಸಿದರು. ಮಕ್ಕಳ ಪ್ರಯತ್ನಕ್ಕೆ ತಮಿಳುನಾಡಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

 ಚೆನ್ನೈನ ಸಾಮಾಜಿಕ ಕಾರ್ಯಕರ್ತೆ ಪ್ರಣಿತಾ ತಿಮೋತಿ

ಚೆನ್ನೈನ ಸಾಮಾಜಿಕ ಕಾರ್ಯಕರ್ತೆ ಪ್ರಣಿತಾ ತಿಮೋತಿ

ಚೆನ್ನೈನ ಸಾಮಾಜಿಕ ಕಾರ್ಯಕರ್ತೆ ಪ್ರಣಿತಾ ತಿಮೋತಿ, "ನಮ್ಮ ನಾಯಕರು, ನಮ್ಮ ಸಮುದಾಯದಲ್ಲಿ ಬದಲಾವಣೆಯನ್ನು ತರಲು ಜವಾಬ್ದಾರಿ ಮತ್ತು ಧೈರ್ಯವನ್ನು ತೆಗೆದುಕೊಳ್ಳುವುದನ್ನು ಮಕ್ಕಳು ನಮಗೆ ನೆನಪಿಸುತ್ತಾರೆ" ಎಂದು ಹೇಳಿದರು.

ಮಕ್ಕಳ ಪರ ಸಕ್ರಿಯ ಕಾರ್ಯ ಮತ್ತು ಸರ್ಕಾರದ ಪ್ರತಿಕ್ರಿಯೆಯು ಅನೇಕ ಶಾಲಾ ವಿದ್ಯಾರ್ಥಿಗಳಿಗೆ ಹೊಸ ಮಟ್ಟದ ಆತ್ಮವಿಶ್ವಾಸವನ್ನು ನೀಡಿದೆ. ಇದು ಶಾಲೆಗಳ ಸಮೀಪದ ವಾತಾವರಣವನ್ನು ಹಾಳುಗೆಡವುವಂತಹ ಹಲವು ಮದ್ಯದ ಅಂಗಡಿಗಳನ್ನು ಮುಚ್ಚಲು ಕಾರಣವಾಗಿದೆ.

English summary
A letter to the district Collector by two school students has resulted in the shutting down of a liquor shop near their school in Tamil Nadu's Ariyalur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X