• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆನ್ನೈ ಉಪನಗರ ರೈಲಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ

|

ಚೆನ್ನೈ,ಜನವರಿ 10: ಚೆನ್ನೈ ಉಪನಗರ ರೈಲೊಂದರಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ರಾತ್ರಿ 11-30ರಲ್ಲಿ ಪಲ್ಲವರಂ ನಿಲ್ದಾಣದಿಂದ ಚೆನ್ನೈ ಬೀಚ್ - ಚೆಂಗಲ್ ಪಟ್ಟು ರೈಲನ್ನು ಮಹಿಳೆ ಹತ್ತಿರುವುದಾಗಿ ತಂಬರಂ ಸರ್ಕಾರಿ ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.

ಮಹಿಳೆ ಮೇಲೆ ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ಲೋಟ ತುರುಕಿದ ದುಷ್ಕರ್ಮಿಗಳು

ಸಬರ್ಬನ್ ರೈಲಿನಲ್ಲಿ 40 ವರ್ಷದ ಮಹಿಳೆ ಮೇಲೆ ಇಬ್ಬರು ಗುತ್ತಿಗೆ ಕೆಲಸಗಾರರು ಅತ್ಯಾಚಾರ ನಡೆಸಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ದೂರು ದಾಖಲಿಸಿಕೊಂಡ ಪೊಲೀಸರು ನಿರ್ವಹಣಾ ಕಾರ್ಯ ಮಾಡುತ್ತಿದ್ದ ಇಬ್ಬರು ಗುತ್ತಿಗೆ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆ ಮಹಿಳೆ ಮದ್ಯಪಾನ ಮಾಡಿದ್ದರಿಂದ ತಾನೂ ತಲುಪಬೇಕಾದ ಪ್ರದೇಶದಲ್ಲಿ ಇಳಿಯದೆ ರೈಲು ತನ್ನ ಟ್ರಿಪ್ ನ್ನು ಪೂರ್ಣಗೊಳಿಸುವವರೆಗೂ ನಿದ್ರೆಗೆ ಜಾರಿದ್ದಾರೆ. ನಂತರ ತಂಬರಂ ಯಾರ್ಡ್ ಗೆ ರೈಲು ತಲುಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರೈಲಿನಲ್ಲಿ ಇಬ್ಬರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಈ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂದು ಆಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಭಾನುವಾರ ಬೆಳಗ್ಗೆ 5 ಗಂಟೆ ಸಮಯದಲ್ಲಿ ಶೆಡ್ ನಿಂದ ಅರ್ಧ ಕಿಲೋಮೀಟರ್ ದೂರ ನಡೆದು ತಂಬರಂ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಗೆ ಆ ಮಹಿಳೆ ದೂರು ನೀಡಿದ್ದಾರೆ.

English summary
In a shocking incident, a 40-year-old woman who fell asleep in the suburban train was allegedly raped by two railway contract staff in the Tambaram railway yard in the zero hours of Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X