ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ತೆ ಹೆಸರಿನಲ್ಲಿ ಶಿರಡಿ ಸಾಯಿಬಾಬಾ ಹುಂಡಿಗೆ 40 ಲಕ್ಷ!

By Srinath
|
Google Oneindia Kannada News

ಶಿರಡಿ, ನ. 30: ಹೀಗೂ ಉಂಟೆ ಎಂದು ಅತ್ತೆಯರ ಲೋಕ ಹುಬ್ಬೇರಿಸುವಂತೆ ಸೊಸೆಯೊಬ್ಬರು ತಮ್ಮ ಅತ್ತೆಯ ಹೆಸರಿನಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಬರೋಬ್ಬರಿ 40 ಲಕ್ಷ ರೂ ದಾನ ಮಾಡಿದ್ದಾರೆ.

ಚೆನ್ನೈ ಮೂಲದ ಈ ಸೊಸೆ, ತಮ್ಮ ಅತ್ತೆ ದಿವಂಗತ ಲೀಲಾವತಿ ದೇವಿ ಅವರ ಅಂತಿಮ ಇಚ್ಛೆಯಂತೆ ಅವರ ಹೆಸರಿನಲ್ಲಿ Shirdi Saibaba Sansthan Trustಗೆ 40 ಲಕ್ಷ ರೂ ಆರ್ಥಿಕ ನೆರವು ನೀಡಿದ್ದಾರೆ.

Chennai sarladevi donated Rs 40 lakh to shirdi Saibaba Trust to fulfil mother-in-law wish

ಚೆನ್ನೈನ ಸರಳಾದೇವಿ ಅವರು ಇತ್ತೀಚೆಗೆ ತಮ್ಮ ಅತ್ತೆ ಲೀಲಾವತಿಯನ್ನು ಕಳೆದುಕೊಂಡರು. ಶಿರಡಿ ಸಾಯಿಬಾಬಾರ ಪರಮಭಕ್ತೆಯಾಗಿದ್ದ ಆಕೆ ಶಿರಡಿ ಬಾಬಾ ದೇವಸ್ಥಾನಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಸದಾ ಅಂದುಕೊಳ್ಳುತ್ತಿದ್ದರಂತೆ. ಹಾಗಾಗಿ ಅವರ ಇಚ್ಛೆಯನ್ನು ಪೂರೈಸಲು ಇತ್ತೀಚೆಗೆ ಆಕೆಯ ಹೆಸರಿನಲ್ಲಿದ್ದ ಆಸ್ತಿ-ಪಾಸ್ತಿಯನ್ನು ಮಾರಾಟ ಮಾಡಿದಾಗ ಇಷ್ಟು ದೊಡ್ಡ ಮೊತ್ತದ ಹಣ ಬಂದಿದೆ.

ಆದರೆ ಸರಳಾದೇವಿ ಅವರು ಅನಾಯಾಸವಾಗಿ ಬಂದ ಆ ದುಡ್ಡಿಗೆ ಆಸೆ ಪಡದೆ ಅದನ್ನು ಸೀದಾ ಸಂಸ್ಥಾನದ ಧರ್ಮದರ್ಶಿಗಳ ಕೈಗೆ ನೀಡಿ, ಕೃತಾರ್ಥರಾಗಿದ್ದಾರೆ. ನಿನ್ನೆ ಗುರುವಾರ ಶಿರಡಿಗೆ ಭೇಟಿ ನೀಡಿದ್ದ ಸೊಸೆ ಸರಳಾದೇವಿ ಮತ್ತು ಅವರ ಕುಟುಂಬದವರು, ತಕ್ಷಣಕ್ಕೆ 14 ಲಕ್ಷ ರೂ ನೀಡಿ, ಸಂಸ್ಥಾನದ ಆಸ್ಪತ್ರೆಗಾಗಿ ಕೃತಕ ಉಸಿರಾಟದ ವೈದ್ಯಕೀಯ ಸಾಧನ (ventilator) ಖರೀದಿಸುವಂತೆ ಸೂಚಿಸಿದ್ದಾರೆ.

ಉಳಿದ ಮೊತ್ತವನ್ನು ಶೀಘ್ರವೇ ಹಸ್ತಾಂತರಿಸುವುದಾಗಿ ತಿಳಿಸಿದ ಅವರು ಅದನ್ನು ಸತ್ಕಾರ್ಯಕ್ಕೆ ವಿನಿಯೋಗಿಸುವಂತೆ ಕೋರಿದ್ದಾರೆ. ಸರಳಾದೇವಿ ಅವರ ಈ ನಡೆಯನ್ನು ಮೆಚ್ಚಿ ಶಿರಡಿ ಸಾಯಿಬಾಬಾ ಸಂಸ್ಥಾನದ ಧರ್ಮದರ್ಶಿಗಳು ಸನ್ಮಾನಿಸಿದ್ದಾರೆ.

English summary
A Chennai-based woman Sarladevi donated Rs 40 lakh to the Saibaba Sansthan Trust in Shirdi to fulfil the last wish of her late mother-in-law Lilavati Devi. The woman, Sarladevi lost her mother-in-law recently. As per the devotee's wishes, the family sold the property in her name and donated the amount to the temple trust, Sansthan sources said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X