ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ: ಕುಡಿಯುವ ನೀರಿಗೆ ಹಾಹಾಕಾರ, ಸಂಕಷ್ಟದಲ್ಲಿ ಸರ್ಕಾರ

|
Google Oneindia Kannada News

ಚೆನ್ನೈ, ಜೂನ್ 29: ಚೆನ್ನೈ ನಗರ ಹಿಂದೆಂದೂ ನೋಡದ ಬರದಿಂದ ತತ್ತರಿಸಿದ್ದು, ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಸ್ಥಳೀಯ ಆಡಳಿತ, ತಮಿಳುನಾಡು ಸರ್ಕಾರ, ಚೆನ್ನೈನ ಬಾಯರಿಕೆ ನೀಗಿಸಲು ಹರಸಾಹಸ ಪಡುತ್ತಿದೆ.

ಚೆನ್ನೈನ ಜಲ ಗಂಡಾಂತರ ಬೆಂಗಳೂರಿಗೂ ಕಾದಿದೆಯಾ? ಸಮಗ್ರ ವರದಿಚೆನ್ನೈನ ಜಲ ಗಂಡಾಂತರ ಬೆಂಗಳೂರಿಗೂ ಕಾದಿದೆಯಾ? ಸಮಗ್ರ ವರದಿ

12 ದಿನಗಳಿಗೆ ಒಮ್ಮೆ ಮಾತ್ರ ಅಲ್ಲಿನ ನಿವಾಸಿಗಳಿಗೆ ನೀರು ಲಭ್ಯವಾಗುತ್ತಿದೆ. ಕಾರ್ ವಾಶ್ ಅಂಗಡಿಗಳನ್ನು ಸ್ಥಳೀಯ ಸಂಸ್ಥೆ ಬಲವಂತದಿಂದ ಮುಚ್ಚಿಸಿದೆ. ಸ್ನಾನಾದಿಗಳನ್ನು ಕಡಿಮೆ ಮಾಡಿರೆಂದು ಹೇಳಿದೆ, ಹೊಟೆಲ್‌ಗಳಲ್ಲಿ ಬಾಳೆ ಎಲೆಗಳಲ್ಲಿ ಊಟ ಬಡಿಸಲಾಗುತ್ತಿದೆ.. ಆ ಮಟ್ಟಕ್ಕೆ ಚೆನ್ನೈನಲ್ಲಿ ಕುಡಿಯುವ ನೀರಿನ ಸಮಸ್ಯೆ ಏರ್ಪಟ್ಟಿದೆ.

ಟ್ರೈನ್ ಮೂಲಕ ಚೆನ್ನೈ ನಗರಕ್ಕೆ ನೀರು ಪೂರೈಕೆ : ಪಳನಿಸ್ವಾಮಿ ಟ್ರೈನ್ ಮೂಲಕ ಚೆನ್ನೈ ನಗರಕ್ಕೆ ನೀರು ಪೂರೈಕೆ : ಪಳನಿಸ್ವಾಮಿ

ಚೆನ್ನೈನ ನೀರಿನ ಸಮಸ್ಯೆ ವಿಶ್ವದ ಗಮನ ಸೆಳೆದಿದ್ದು, ಕೆಲ ದಿನಗಳ ಹಿಂದಷ್ಟೆ ಟೈಟಾನಿಕ್ ಹೀರೋ ಖ್ಯಾತ ನಟ ಲಿಯೋನಾರ್ಡೊ ಡಿ ಕ್ಯಾಪ್ರಿಯೋ ಸಹ ಚೆನ್ನೈನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದರು, ಅವರೊಂದಿಗೆ ವಿಶ್ವದ ಜನರೇ ಚೆನ್ನೈಗಾಗಿ ಪ್ರಾರ್ಥಿಸುವಂತಾಗಿದೆ.

Chennai water crisis, world paraying for chennai

ಈ ಕೂಡಲೇ ಮಳೆ ಬರದಿದ್ದಲ್ಲಿ ಚೆನ್ನೈನ ಪರಿಸ್ಥಿತಿ ಇನ್ನಷ್ಟು ಹದಗೆಡಲಿದ್ದು, ತಮಿಳುನಾಡು ಮಾತ್ರವಲ್ಲದೆ, ವಿಶ್ವದ ಹಲವೆಡೆಗೆ ಚೆನ್ನೈನಲ್ಲಿ ಮಳೆ ಬರಲೆಂದು ಪ್ರಾರ್ಥಿಸಲಾಗುತ್ತಿದೆ.

ಮಳೆ ಮಾತ್ರ ಚೆನ್ನೈ ನಗರವನ್ನು ಉಳಿಸಬಲ್ಲದು: ಬರಕ್ಕೆ ಮಿಡಿದ ಹಾಲಿವುಡ್ ನಟ ಡಿಕಾಪ್ರಿಯೋ ಮಳೆ ಮಾತ್ರ ಚೆನ್ನೈ ನಗರವನ್ನು ಉಳಿಸಬಲ್ಲದು: ಬರಕ್ಕೆ ಮಿಡಿದ ಹಾಲಿವುಡ್ ನಟ ಡಿಕಾಪ್ರಿಯೋ

2015 ರಲ್ಲಿ ಅತಿವೃಷ್ಠಿಯಿಂದ ತತ್ತರಿಸಿಹೋಗಿದ್ದ ಚೆನ್ನೈ ಈಗ ಅನಾವೃಷ್ಠಿಯಿಂದ ಅದಕ್ಕಿಂತಲೂ ಕೆಟ್ಟ ದಿನಗಳನ್ನು ಕಾಣುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಅಲ್ಲಿ ಕೇವಲ ಬಡಜನರನ್ನು ಮಾತ್ರವೇ ಕಾಡುತ್ತಿಲ್ಲ, ಅಪಾರ್ಟ್‌ಮೆಂಟ್ ವಾಸಿಗಳು, ಸಿರಿವಂತರಿಗೂ ಕಾಡುತ್ತಿದೆ. ಎಲ್ಲರಿಗೂ ಕುಡಿಯುವ ನೀರಿಗೆ ಬರ ಆರಂಭವಾಗಿದೆ.

English summary
Seviour drinking water crisis in chennai, Tamilnadu government trying hard to solve Chennai water problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X