ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಘ್ನೇಶ್ ಸಾವು: ಆರು ಮಂದಿ ಪೊಲೀಸರ ಬಂಧನ, ನ್ಯಾಯಾಂಗ ಕಸ್ಟಡಿಗೆ

|
Google Oneindia Kannada News

ಚೆನ್ನೈ, ಮೇ 8: ವಿಘ್ನೇಶ್ ಲಾಕಪ್ ಡೆತ್ ಪ್ರಕರಣದ ತನಿಖೆ ನಡೆಸುತ್ತಿರುವ ಚೆನ್ನೈನ ಸಿಬಿ-ಸಿಐಡಿ ಪೊಲೀಸರು (CB-CID Police) ಆರು ಮಂದಿ ಆರೋಪಿತ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಸೈದಾಪೇಟ್ ಜಿಲ್ಲಾ ಮ್ಯಾಜಿಸ್ಟ್ರೇಟರು ಈ ಆರೋಪಿಗಳನ್ನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. 25 ವರ್ಷದ ವಿಘ್ನೇಶ್‌ನ ಶವಪರೀಕ್ಷೆಯ ವರದಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಜಿ5 ಸೆಕ್ರೆಟರಿಯಟ್ ಕಾಲೊನಿ ಪೊಲೀಸ್ ಠಾಣೆಯ ಹಿರಿಯ ಠಾಣಾಧಿಕಾರಿ (ಎಸ್‌ಎಸ್‌ಐ- Senior Station Inspector) ಕುಮಾರ್, ಹೆಡ್ ಕಾನ್ಸ್‌ಟೆಬಲ್ ಮುನಾಬ್, ಪೊಲೀಸ್ ಕಾನ್ಸ್‌ಟೆಬಲ್ ಪೊನ್ನುರಾಜ್ ಹಾಗೂ ಸಿಆರ್‌ಪಿಎಫ್ ಕಾನ್ಸ್‌ಟೆಬಲ್‌ಗಳಾದ ಜಗಜೀವನ್‌ರಾಮ್, ಚಂದ್ರಕುಮಾರ್ ಮತ್ತು ಹೋಮ್ ಗಾರ್ಡ್ ದೀಪ್ ಬಂಧಿತರಾದ ಆರು ಪೊಲೀಸರಾಗಿದ್ದಾರೆ. ಐಪಿಸಿ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಮತ್ತು ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಈ ಆರು ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಹಿಂದಿ V/s ಕನ್ನಡ ಆಯ್ತು; ತಮಿಳುನಾಡಿನಲ್ಲಿ ಹುಟ್ಟಿಕೊಂಡ ಸಂಸ್ಕೃತ ವಿವಾದ!ಹಿಂದಿ V/s ಕನ್ನಡ ಆಯ್ತು; ತಮಿಳುನಾಡಿನಲ್ಲಿ ಹುಟ್ಟಿಕೊಂಡ ಸಂಸ್ಕೃತ ವಿವಾದ!

ಏನಿದು ಪ್ರಕರಣ?:
ಏಪ್ರಿಲ್ 18ರಂದು ಚೆನ್ನೈನಲ್ಲಿ ವಿಘ್ನೇಶ್ ಮತ್ತು ಸುರೇಶ್ ಇದ್ದ ಆಟೊರಿಕ್ಷಾದ ಪರಿಶೀಲನೆಗೆಂದು ಪೊಲೀಸರು ತಡೆದಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ಇಬ್ಬರೂ ತಡವರಿಸಿದ್ದಾರೆನ್ನಲಾಗಿದೆ. ಪೊಲೀಸರು ಮಾಡಿದ ಆರೋಪದ ಪ್ರಕಾರ ಇವರಿಬ್ಬರು ಪ್ರಯಾಣಿಸುತ್ತಿದ್ದ ಆಟೊರಿಕ್ಷಾದಲ್ಲಿ ಗಾಂಜಾ ಡ್ರಗ್ ಮತ್ತು ಮದ್ಯದ ಬಾಟಲುಗಳು ಸಿಕ್ಕಿವೆ. ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಸೆಕ್ರೆಟರಿಯಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮರುದಿನ ಅಂದರೆ, ಏಪ್ರಿಲ್ 19ರಂದು ಪೊಲೀಸ್ ಲಾಕಪ್‌ನಲ್ಲಿದ್ದಾಗಲೇ ವಿಘ್ನೇಶ್ ಸಾವನ್ನಪ್ಪಿದ್ದಾನೆ.

Chennai Vignesh custodial death case: 6 police officials arrested

ಈ ವಿಚಾರ ಬೆಳಕಿಗೆ ಬರುತ್ತಲೇ ಠಾಣೆಯ ಪಿಎಸ್‌ಐ, ಕಾನ್ಸ್‌ಟೆಬಲ್ ಮತ್ತು ಒಬ್ಬ ಹೋಮ್ ಗಾರ್ಡ್ ಅನ್ನು ತತ್‌ಕ್ಷಣವೇ ಅಮಾನತು ಮಾಡಲಾಗಿದೆ. ಸಾವನ್ನಪ್ಪಿದ ವಿಘ್ನೇಶ್ ಮೈಮೇಲೆ ಬಹಳ ಕಡೆ ಗಾಯಗಳಾಗಿದ್ದವು. ಇದು ಸಾರ್ವಜನಿಕರಲ್ಲಿ ಆಕ್ರೋಶ ಸೃಷ್ಟಿಸಿದೆ. ಜನರ ಪ್ರತಿಭಟನೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದ್ದಂತೆಯೇ ಸಿಬಿ-ಸಿಐಡಿಗೆ ತನಿಖೆಯ ಹೊಣೆ ವರ್ಗಾಯಿಸಲಾಯಿತು.

ಸಿಎಂ ಆಗಿ ಒಂದು ವರ್ಷಕ್ಕೆ ಬಸ್ ಹತ್ತಿದ ಸ್ಟಾಲಿನ್; ಜನತೆಗೆ 5 ಕೊಡುಗೆಸಿಎಂ ಆಗಿ ಒಂದು ವರ್ಷಕ್ಕೆ ಬಸ್ ಹತ್ತಿದ ಸ್ಟಾಲಿನ್; ಜನತೆಗೆ 5 ಕೊಡುಗೆ

ಸಾಯುವ ಮುನ್ನ ವಿಘ್ನೇಶ್‌ಗೆ ದೈಹಿಕ ಹಿಂಸೆ:
25 ವರ್ಷದ ವಿಘ್ನೇಶ್‌ನ ಮರಣೋತ್ತರ ಪರೀಕ್ಷೆಯಿಂದ ಹಲವು ಪ್ರಮುಖ ವಿಚಾರಗಳು ಬೆಳಕಿಗೆ ಬಂದಿವೆ. ವಿಘ್ನೇಶ್ ಸಾವಿಗೆ ಇಂಥದ್ದೇ ಕಾರಣ ಎಂಬುದು ಸ್ಪಷ್ಟವಾಗದಿದ್ರೂ ಆತನ ದೇಹದ ಹಲವು ಕಡೆ ಗಾಯಗಳಾಗಿವೆ. ಒಂದು ಸೆಂಟಿ ಮೀಟರ್‌ನಷ್ಟು ದೊಡ್ಡ ಗಾಯಗಳೂ ಆಗಿವೆ. ತಲೆ ಮೇಲೂ ಹಲವು ಗಾಯಗಳಾಗಿವೆ. ಕಾಲು ಮೊದಲಾದ ಜಾಗದಲ್ಲಿ ಮೂಳೆಮುರಿತವೂ ಆಗಿದೆ. ಎಡಗಡೆಯ ಕಣ್ಣಿನಿಂದ ಸ್ವಲ್ಪ ಮೇಲೆ ಆಳದ ಗಾಯವಾಗಿದೆ. ಎಡಗಡೆಯ ಕೆನ್ನೆ, ಬೆನ್ನು, ಬಲ ತೋಳು ಹೀಗೆ ಹಲವು ಕಡೆ ಗಾಯವಾಗಿರುವುದು ಶವ ಪರೀಕ್ಷೆಯಿಂದ ತಿಳಿದುಬಂದಿದೆ.

Chennai Vignesh custodial death case: 6 police officials arrested

ಮೊದಲಿಗೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಮಾತ್ರ ಪ್ರಕರಣ ದಾಖಲಿಸಲಾಗಿತ್ತು. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ) ಈ ಘಟನೆಯನ್ನ ಪರಿಶೀಲಿಸಿ ಎಸ್‌ಸಿ ಎಸ್‌ಟಿ ಕಾಯ್ದೆ ಅಡಿ ಸೂಕ್ತ ಸೆಕ್ಷನ್‌ಗಳನ್ನ ಪ್ರಕರಣಕ್ಕೆ ಸೇರಿಸುವಂತೆ ತಮಿಳುನಾಡಿನ ಡಿಜಿಪಿಗೆ ಸೂಚಿಸಿದ್ದರು. ಅದಾದ ಬಳಿಕ ಎಸ್‌ಸಿ ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳನ್ನ ಸೇರಿಸಲಾಯಿತು.

ಮೊನ್ನೆ ಶುಕ್ರವಾರ ಸಿಬಿ-ಸಿಐಡಿಯವರು ಪ್ರಕರಣದ ತನಿಖೆಯ ಭಾಗವಾಗಿ ಐವರು ಪೊಲೀಸ್ ಅಧಿಕಾರಿಗಳನ್ನು ಕರೆದು ವಿಚಾರಣೆ ನಡೆಸಿದ್ದರು. ಅದಾದ ಬಳಿಕ ಈಗ ಒಟ್ಟು ಆರು ಮಂದಿಯನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನೂ ಸದ್ಯದಲ್ಲೇ ಬಂಧಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

(ಒನ್ಇಂಡಿಯಾ ಸುದ್ದಿ)

English summary
The Chennai CB-CID police have arrested six police officials on murder charges in connection with the alleged custodial death of Vignesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X