ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕೇರ್ಸ್ ಬಗ್ಗೆ ಟ್ವೀಟ್ ಮಾಡಿ ಕೆಲ್ಸ ಕಳೆದುಕೊಂಡ ಡಾಕ್ಟರ್

|
Google Oneindia Kannada News

ಚೆನ್ನೈ, ಜೂನ್ 17: ಭಾರತ ಹಾಗೂ ಚೀನಾ ಗಡಿಭಾಗದಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. 20ಕ್ಕೂ ಅಧಿಕ ಭಾರತೀಯ ಯೋಧರು, 43ಕ್ಕೂ ಅಧಿಕ ಚೀನಿಯರು ಮೃತಪಟ್ಟ ಘಟನೆ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಪ್ರಮುಖ ತಂಡ ಚೆನ್ನೈ ಸೂಪರ್ ಕಿಂಗ್ಸ್( ಸಿಎಸ್ ಕೆ) ನ ಟೀಂ ಡಾಕ್ಟರ್ ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.

Recommended Video

History of India China border dispute | Oneindia Kannada

ಲಡಾಕ್ ಸಂಘರ್ಷ ಕುರಿತಂತೆ ಸಿಎಸ್ ಕೆ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ಡಾಕ್ಟರ್ ಮಧು ಥೊಟ್ಟಪಿಳ್ಳಿಲ್ ರನ್ನು ಅವರ ಹುದ್ದೆಯಿಂದ ತೆಗೆದು ಹಾಕಲಾಗಿದೆ.

Chennai Super Kings Suspends Team Doctor Over Tweet On Ladakh Clash

ಭೂ ಸೇನೆಯಲ್ಲಿ ಗೌರವಯುತ ಲೆಫ್ಟಿನೆಂಟ್ ಆಗಿರುವ ಎಂಎಸ್ ಧೋನಿ ನಾಯಕತ್ವದ ತಂಡದ ಡಾಕ್ಟರ್ ಮಧು ಅವರು ಮಾಡಿದ ಕೃತ್ಯಕ್ಕೆ ಭಾರಿ ಬೆಲೆ ತೆತ್ತಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಒಡೆತನದ ಚೆನ್ನೈ ತಂಡದ ಡಾಕ್ಟರ್ ಅವರು ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಶವಗಳನ್ನು ಹೊತ್ತು ತರುವ ಶವಪೆಟ್ಟಿಗೆ ಮೇಲೆ ಕೂಡಾ ಪಿಎಂ ಕೇರ್ಸ್ ಎಂದು ಬರೆಯಲಾಗಿರುತ್ತದೆಯೇ? ಎಂದು ಪಿಎಂ ಕೇಸ್ ಫಂಡ್ ಬಗ್ಗೆ ಗೇಲಿ ಮಾಡಿದ್ದರು.

ಕಣಿವೆ ಕದನ: ಗುಲಾಂ ರಸೂಲ್ ಗಾಲ್ವಾನ್ ಯಾರು? ಕಣಿವೆ ಕದನ: ಗುಲಾಂ ರಸೂಲ್ ಗಾಲ್ವಾನ್ ಯಾರು?

ಮೋದಿ ಸರ್ಕಾರದ ವಿರುದ್ಧ ಇದ್ದ ಈ ಟ್ವೀಟ್ ಬಗ್ಗೆ ಆಕ್ಷೇಪಗಳು ಕೇಳಿ ಬಂದಿತ್ತು. ಕೊನೆಗೆ ಟ್ವೀಟ್ ಡಿಲೀಟ್ ಮಾಡಿ ಟ್ವಿಟ್ಟರ್ ಖಾತೆ ಲಾಕ್ ಮಾಡಿಕೊಂಡಿದ್ದ ಡಾ. ಮಧುಗೆ ಸಿಎಸ್ ಕೆ ತಂಡದ ಮ್ಯಾನೇಜ್ಮೆಂಟ್ ನೋಟಿಸ್ ನೀಡಿದ್ದಲ್ಲದೆ, ಟ್ವೀಟ್ ಮೂಲಕವೆ ಅಮಾನತು ಮಾಡಿರುವ ಆದೇಶ ಪ್ರಕಟಿಸಿದೆ.

''ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ರೀತಿಯ ಟ್ವೀಟ್ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ. ಇಂಥ ಕೆಟ್ಟ ಅಭಿರುಚಿಯ ಟ್ವೀಟ್ ಅವರ ವೈಯಕ್ತಿಕ ಖಾತೆಯಿಂದ ಬಂದಿತ್ತು ಹಾಗೂ ನಮ್ಮ ಗಮನಕ್ಕೆ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಂಡಿದ್ದೇವೆ" ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ಮೆಂಟ್ ಹೇಳಿದೆ.

English summary
Chennai Super Kings on Wednesday suspended its team doctor Madhu Thottappillil for a social media post on the death of Indian Army personnel during a clash with Chinese troops in eastern Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X