ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರಿಗೆ ಹೆದರದವರು, ಕೊರೊನಾ ಹೆಲ್ಮೆಟ್ ಕಂಡು ಮನೆಗೆ ಓಡಿದ್ರು

|
Google Oneindia Kannada News

ಚೆನ್ನೈ, ಮಾರ್ಚ್ 30: ಕೊರೊನಾ ವೈರಸ್ ದೇಶಾದ್ಯಂತ 28 ಮಂದಿಯನ್ನು ಈಗಾಗಲೇ ಬಲಿ ಪಡೆದಿದೆ.

Recommended Video

MS Dhoni Missing on BCCI Instagaram | BCCI | Oneindia kannada

ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು, ಮಧ್ಯರಸ್ತೆಯಲ್ಲಿ ನಿಂತು ನಮಗೂ ನಿಮ್ಮಂತೆ ಕುಟುಂಬವಿದೆ, ದಯವಿಟ್ಟು ಹೊರಗೆ ಬಂದು ಕೊರೊನಾ ವೈರಸ್ ಹರಡಬೇಡಿ ಎಂದು ಅಂಗಲಾಚಿ ಬೇಡಿಕೊಂಡರು. ಆದರೆ ಇದ್ಯಾವುದಕ್ಕೂ ಜನರ ಮನ ಕರಗಲೇ ಇಲ್ಲ.

2 ವಾರಗಳಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ: ಟ್ರಂಪ್ 2 ವಾರಗಳಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ: ಟ್ರಂಪ್

ಇದೀಗ ಚೆನ್ನೈ ಪೊಲೀಸರು ವಿನೂತನ ಸಾಹಸಕ್ಕೆ ಕೈ ಹಾಕಿದ್ದು, ಕೊರೊಣಾ ಹೆಲ್ಮೆಟ್ ಧರಿಸಿ ಜನರಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದ್ದಾರೆ.

Chennai Police Corona Helmet Is Quite Scary But Helps In Raising Awareness

ಸ್ಥಳೀಯ ಕಲಾವಿದರ ಸಹಾಯದೊಂದಿಗೆ ಕೊರೊನಾ ಹೆಲ್ಮೆಟ್ ತಯಾರಿಸಿ, ಅದನ್ನು ಧರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರ ಲಾಕ್‌ಡೌನ್ ಮಾಡಿ ಇಷ್ಟೆಲ್ಲಾ ಕ್ರಮ ಕೈಗೊಂಡರೂ ಸಾರ್ವಜನಿಕರು ಮಾತ್ರ ಇದಕ್ಕೆ ಕ್ಯಾರೆ ಎಂದಿಲ್ಲ.

ಜನರನ್ನು ಮನೆಯಲ್ಲಿರುವಂತೆ ಕೇಳಿಕೊಂಡರೂ ಹೊರಗಡೆ ಬರುತ್ತಿದ್ದಾರೆ. ಪೊಲೀಸರು ದಿನದ 24ಗಂಟೆ ಕೆಲಸ ಮಾಡುತ್ತಿದ್ದು, ಕೆಲವರಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ.
ಕೊರೊನಾ ಹೆಲ್ಮೆಟ್‍ನಿಂದಾಗಿ ಜನ ಜಾಗೃತರಾಗುತ್ತಿದ್ದಾರೆ. ಅದರ ಗಂಭೀರತೆ ಅರ್ಥವಾಗುತ್ತಿದೆ. ಈ ಹೆಲ್ಮೆಟ್ ತುಂಬಾ ವಿಭಿನ್ನವಾಗಿರುವುದರಿಂದ ಜನ ಭಯಪಡುತ್ತಿದ್ದಾರೆ. ವಿಶೇಷವಾಗಿ ಮಕ್ಕಳು ಭಯಪಟ್ಟುಕೊಂಡು ಮನೆ ಕಡೆಗೆ ಓಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಳಾದ ಹೆಲ್ಮೆಟ್ ಹಾಗೂ ಪೇಪರ್ ಬಳಸಿ ಕೊರೊನಾ ಹೆಲ್ಮೆಟ್ ತಯಾರಿಸಿದ್ದೇನೆ. ಮಾತ್ರವಲ್ಲದೆ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಪ್ಲೇಕಾರ್ಡ್‍ಗಳನ್ನೂ ತಯಾರಿಸಿದ್ದೇನೆ. ಇವುಗಳನ್ನು ಸಹ ಪೊಲೀಸರಿಗೆ ನೀಡಿದ್ದೇನೆ.

ಸಾರ್ವಜನಿಕರು ಮನೆಯಲ್ಲೇ ಇದ್ದು ಕೊರೊನಾ ಹರಡುವುದನ್ನು ತಡೆಗಟ್ಟಬೇಕು ಎಂದು ಹೆಲ್ಮೆಟ್ ಡಿಸೈನ್ ಮಾಡಿದ ಗೌತಮ್ ಅಭಿಪ್ರಾಯಪಟ್ಟಿದ್ದಾರೆ.

ಜನರಲ್ಲಿ ಜಾಗೃತಿ ಮೂಡಿಸಲು ಈ ಹೆಲ್ಮೆಟ್ ತುಂಬಾ ಸಹಕಾರಿಯಾಗಿದೆ. ಇದರಿಂದಾಗಿ ಜನರಲ್ಲಿ ಅರಿವು ಮೂಡುತ್ತಿದೆ. ಹೊರಗಡೆ ಬರಬೇಡಿ ಎಂದು ಎಷ್ಟೇ ಹೇಳಿದರೂ ಜನ ಕೇಳುತ್ತಿರಲಿಲ್ಲ.

English summary
In a bid to spread awareness about the severity of the coronavirus pandemic, a local artist in collaboration with a police official here has made a unique 'Corona' helmet to dissuade commuters from coming out on the streets during the nationwide lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X