ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ: ನೋಕಿಯಾ ಉತ್ಪಾದನಾ ಘಟಕ ಬಹುತೇಕ ಸ್ಥಗಿತ

By Srinath
|
Google Oneindia Kannada News

ಚೆನ್ನೈ, ಜೂನ್ 16: ಆರಂಭದಲ್ಲಿ ಭಾರಿ ಆರ್ಭಟದೊಂದಿಗೆ ಮತ್ತು ಅಷ್ಟೇ ಉತ್ತಮ ಗುಣಮಟ್ಟದ ಮೊಬೈಲುಗಳೊಂದಿಗೆ ಭಾರತದಲ್ಲಿ ದಾಂಗುಡಿಯಿಟ್ಟ ವಿಶ್ವದ ಅಗ್ರಗಣ್ಯ ಮೊಬೈಲ್ ಉತ್ಪಾದನಾ ಕಂಪನಿ ನೋಕಿಯಾ. ಇದೀಗ ಕಾಲಚಕ್ರಕ್ಕೆ ಸಿಲುಕಿ ಫಿನ್ ಲ್ಯಾಂಡಿನ ನೋಕಿಯಾ ಕಂಪನಿ ಧ್ವನಿಯಡಗುತ್ತಿದೆ.

ಚೆನ್ನೈನ ಶ್ರೀಪೆರಂಬದೂರಿನಲ್ಲಿ ಧಾಮ್ ಧೂಮ್ ಎಂದು ಉತ್ಪಾದನೆಗೆ ಅಣಿಯಾದ ನೋಕಿಯಾ, ಇದೀಗ ಫ್ಯಾಕ್ಟರಿ ಮುಚ್ಚುವ ಹಂತಕ್ಕೆ ಬಂದುನಿಂತಿದೆ. ಒಂದೆರಡು ವಾರಗಳಿಂದ ಈ ಘಟಕದಲ್ಲಿ ಅಲ್ಪ ಪ್ರಮಾಣದಲ್ಲಿ ನೋಕಿಯಾ ಮೊಬೈಲುಗಳ ಉತ್ಪಾದನೆಯಾಗುತ್ತಿದೆ. ಸುಮಾರು 5,000 ಮಂದಿ ಉದ್ಯೋಗಿಗಳು ಅದಾಗಲೇ ಕಂಪನಿಯಿಂದ ವಿಮುಖಗೊಂಡಿದ್ದಾರೆ.

chennai-nokia-unit-on-the-verge-of-shut-down

ಮೈಕ್ರೋಸಾಫ್ಟ್ ಕಂಪನಿಯ ಜತೆ ಕೈಜೋಡಿಸಿರುವ ನೋಕಿಯಾಗೆ ಇದೀಗ ಇದ್ದಕ್ಕಿದ್ದಂತೆ ಬೇಡಿಕೆ ಕುದುರಿದೆ. ಆದರೂ ನೋಕಿಯಾ ಕಂಪನಿಗೆ ಚೆನ್ನೈ ಘಟಕ ಬೇಡವಾದ ಕೂಸಾಗಿದೆ. ಆರು ವರ್ಷದಿಂದ ಈ ಘಟಕದಲ್ಲಿ ಯಾರೆಲ್ಲಾ ಕೆಲಸದಲ್ಲಿದ್ದರೋ ಅಂಥವರಿಗೆ ತಲಾ 6 ಲಕ್ಷ ರೂ ಪ್ಯಾಕೇಜ್ ನೀಡಿ, ಕಂಪನಿಯು ಕೈತೊಳೆದುಕೊಳ್ಳುತ್ತಿದೆ.

ಅಂದಹಾಗೆ ಬೇಡಿಕೆಯ ಕುಸಿತಕ್ಕಿಂತ ಚೆನ್ನೈ ಘಟಕಕ್ಕೆ ಮಾರಕವಾಗಿರುವುದು ತೆರಿಗೆ ವ್ಯಾಜ್ಯ. ಆದಾಯ ತೆರಿಗೆ ಇಲಾಖೆಯು ಚೆನ್ನೈ ಘಟಕದಿಂದ ಬಾಕಿಯಿರುವ ಕೋಟ್ಯಂತರ ರೂ ತೆರಿಗೆ ವಸೂಲಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ. ಅದು ಚುಕ್ತಾ ಆಗದ ಹೊರತು ನೋಕಿಯಾಗೆ ಚೆನ್ನೈ ಘಟಕವನ್ನು (ಮೈಕ್ರೋಸಾಫ್ಟ್ ಕಂಪನಿಗೆ) ಮಾರಾಟ ಮಾಡುವಂತಿಲ್ಲ. ಅದು ನೈಜ ಸಮಸ್ಯೆ.

ಒಂದೊಮ್ಮೆ ಚೆನ್ನೈ ಘಟಕದಲ್ಲಿ ಮೂರೂ ಶಿಫ್ಟ್ ಮುಖಾಂತರ 16-20 ದಶಲಕ್ಷ ಮೊಬೈಲ್ ಸೆಟ್ ಗಳನ್ನು ಉತ್ಪಾದಿಸಲಾಗುತ್ತಿತ್ತು. ಕೊನೆ ಕೊನೆಗೆ ಅದೀಗ 40 ಲಕ್ಷಕ್ಕೆ ಕುಸಿದಿತ್ತು. 2013ರ ಅಂಕಿ ಅಂಶದ ಪ್ರಕಾರ ನೋಕಿಯಾ ಕಂಪನಿಯ 120 ರಾಷ್ಟ್ರಗಳಲ್ಲಿ 90,000 ಮಂದಿ ಉದ್ಯೋಗಿಗಳಿದ್ದಾರೆ. 150 ರಾಷ್ಟ್ರಗಳಲ್ಲಿ ನೋಕಿಯಾ ಮೊಬೈಲುಗಳ ಮಾರಾಟವಾಗುತ್ತಿದೆ. ವಿಶ್ವದಲ್ಲಿ ಆದಾಯ ಗಳಿಕೆಯಲ್ಲಿ ನೋಕಿಯಾ ಕಂಪನಿ 274ನೇ ಸ್ಥಾನದಲ್ಲಿದೆ.

English summary
Chennai Nokia unit on the verge of shut down. The Sriperumbudur plant of Nokia — its largest mobile phone manufacturing facility — stares at a possible shutdown. With more than 5,000 employees or nearly 85% of its total strength opting for a separation scheme, the plant has been tottering with little or no production over the past few days, facing a bleak future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X