ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಮೆಟ್ರೋ ಟಿಕೆಟ್ ದರ ದೇಶದಲ್ಲೇ ಅಧಿಕ!

By Mahesh
|
Google Oneindia Kannada News

ಚೆನ್ನೈ, ಜೂ.30: ಅನೇಕ ವರ್ಷಗಳ ನಂತರ ಚೆನ್ನೈ ನಗರದಲ್ಲಿ ಮೆಟ್ರೋ ರೈಲು ಸೋಮವಾರದಿಂದ ಓಡಾಟ ಆರಂಭಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರೆ, ಚೆನ್ನೈ ಮೆಟ್ರೋ ದರ ಪಟ್ಟಿ ನೋಡಿದ ಪ್ರಯಾಣಿಕರು ಹೌಹಾರಿದ್ದಾರೆ.

ಹೌದು, ಬೆಂಗಳೂರು ಸೇರಿದಂತೆ ದೇಶದ ಇತರೆ ನಗರಗಳ ದರ ಪಟ್ಟಿಯನ್ನು ನೋಡಿದರೆ ಚೆನ್ನೈ ಮೆಟ್ರೋ ದರ ಜೇಬಿಗೆ ಕತ್ತರಿ ಹಾಕುತ್ತದೆ. ಅಳಂದೂರಿನಿಂದ ಕೊಯಂಬೇಡು ನಡುವಿನ 10 ಕಿ.ಮೀ ದೂರಕ್ಕೆ 40 ರು ನೀಡಬೇಕಾಗಿದೆ. [ವಿಡಿಯೋ ಕಾನ್ಫರೆನ್ಸ್ ಮೂಲಕ 'ಮೆಟ್ರೋ ರೈಲು' ಬಿಟ್ಟ ಜಯಾ]

ಮಹಿಳಾ ಚಾಲಕಿ: 28ರ ಹರೆಯದ ಅವರು ಚೆನ್ನೈಯ ಸರಕಾರಿ ಧರ್ಮಪುರಿ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೊಮಾ ಪಡೆದಿರುವ ಎ. ಪ್ರೀತಿ ಅವರು ಚೆನ್ನೈ ಮೆಟ್ರೋ ಚಾಲನೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ದೆಹಲಿಲ್ಲಿ ಒಂದೂವರೆ ವರ್ಷ ತರಬೇತಿ ಪಡೆದು ಬಂದಿದ್ದಾರೆ. [ಉಪ ಚುನಾವಣೆ: ಜಯಲಲಿತಾಗೆ ಭಾರಿ ಗೆಲುವು]

ಆರ್ಥಿಕವಾಗಿ ಕೆಳಹಂತದಲ್ಲಿರುವವರು, ಕೂಲಿಕಾರ್ಮಿಕರಿಗೆ ಮೆಟ್ರೋ ರೈಲು ಯಾವ ರೀತಿಯಿಂದಲೂ ಅನುಕೂಲಕರವಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಅದರೆ, ಗುಂಪಾಗಿ ಪ್ರಯಾಣಿಸುವವರಿಗೆ ಷೇರ್ ಆಟೋ, ಎಂಆರ್ ಟಿಎಸ್ ದರ ಇನ್ನೂ ಕಡಿಮೆಯಾಗುತ್ತದೆ.

ಮೆಟ್ರೋ ರೈಲು ದುಬಾರಿ ಹೇಗೆ

ಮೆಟ್ರೋ ರೈಲು ದುಬಾರಿ ಹೇಗೆ

ವಾರಕ್ಕೆ ಐದು ದಿನದಂತೆ ತಿಂಗಳಿಗೆ 22 ದಿನವೂ ಪ್ರಯಾಣಿಸಿದರೆ ದಿನವೊಂದಕ್ಕೆ 80 ರು ನಂತೆ ನೀಡಬೇಕಲ್ಲದೆ, ಬೈಕ್(ಮೆಟ್ರೋ ಸ್ಟೇಷನ್ ನಿಂದ ಮನೆಗೆ ತೆರಳಲು) ಪಾರ್ಕ್ ಮಾಡಲು 10 ರು ಅಧಿಕವಾಗಿ ನೀಡಬೇಕು. ಒಟ್ಟಾರೆ 1,980 ರು ಖರ್ಚು ಮಾಡಿ ಮೆಟ್ರೋ ರೈಲಿನ ಪ್ರಯಾಣ ಸುಖ ಅನುಭವಿಸಲು ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಚಿತ್ರದಲ್ಲಿ: ಚಾಲಕಿ ಪ್ರೀತಿ.

ಜಯಲಲಿತಾ ಅವರಿಗೆ ಯಾವಾಗ ತಿಳಿದೆಯೋ

ಜಯಲಲಿತಾ ಅವರಿಗೆ ಯಾವಾಗ ತಿಳಿದೆಯೋ

ಚೆನ್ನೈ ಬೀಚ್ ನಿಂದ ವೆಲಚ್ಚರಿ ಮಾರ್ಗವಾಗಿ ಗಿಂಡಿಗೆ ಹೋಗಲು ಎಂಆರ್ ಟಿಎಸ್ ಹತ್ತಿದರೆ 5 ರು ಸಾಕು. ಹೇಗೆ ಸುತ್ತಿ ಬಳಸಿದರೂ ದಕ್ಷಿಣ ಚೆನ್ನೈನಿಂದ ಉತ್ತರ ಭಾಗಕ್ಕೆ ಸುತ್ತಿ ಹಾಕಲು 19 ಕಿ.ಮೀ ಗೆ 10 ರು ಖರ್ಚಾಗುತ್ತದೆ.

ನೇರ ವೀಡಿಯೊ ಮೂಲಕ ಹಸಿರು ನಿಶಾನೆ

ನೇರ ವೀಡಿಯೊ ಮೂಲಕ ಹಸಿರು ನಿಶಾನೆ

ಇದೆಲ್ಲ ರಾಜ್ಯ ಕಾರ್ಯಾಲಯದಿಂದ ನೇರ ವೀಡಿಯೊ ಮೂಲಕ ಹಸಿರು ನಿಶಾನೆ ತೋರಿಸಿದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಯಾವಾಗ ತಿಳಿಯುತ್ತದೆಯೋ ಗೊತ್ತಿಲ್ಲ. ಅವರು ಹಾಗೂ ಅವರ ಅಭಿಮಾನಿಗಳು ಆರ್ ಕೆ ನಗರ ಉಪಚುನಾವಣೆ ಗೆದ್ದ ಸಂಭ್ರಮದಲ್ಲಿದ್ದಾರೆ.

ದೇಶದ ಇತರೆ ನಗರಗಳ ಕನಿಷ್ಠ ಹಾಗೂ ಗರಿಷ್ಠ ದರ

ದೇಶದ ಇತರೆ ನಗರಗಳ ಕನಿಷ್ಠ ಹಾಗೂ ಗರಿಷ್ಠ ದರ

* ಚೆನ್ನೈ -(10 ಕಿ.ಮೀ) - 10 ರಿಂದ 40 ರು
* ಮುಂಬೈ (12.3 ಕಿ.ಮೀ) - 10 ರಿಂದ 40 ರು
* ಬೆಂಗಳೂರು (6.7 ಕಿ.ಮೀ) - 10 ರಿಂದ 17 ರು
* ದೆಹಲಿ - 8 ರಿಂದ 30 ರು
* ಕೋಲ್ಕತ್ತಾ - 5 ರಿಂದ 25 ರು
* ಜೈಪುರ - 5 ರಿಂದ 15 ರು

English summary
With a fare of Rs. 40 for 10 km between Alandur and Koyambedu, Chennai Metro Rail is now the costliest in the country. Tamil Nadu Chief Minister J Jayalalithaa on Jun.29 launched the first phase of the Chennai Metro via videoconferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X