ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಬ್ಯಾಕ್ ಮೋದಿ ಎಂದ ಟ್ವಿಟ್ಟಿಗರು: ಭಾರೀ ಸ್ವಾಗತದಲ್ಲಿ ಮಿಂದೆದ್ದ ಪ್ರಧಾನಿ

|
Google Oneindia Kannada News

ಬಿಜೆಪಿಯ ಮತ್ತು ಹಿಂದಿ ಅತ್ಯಂತ ಕಮ್ಮಿ ಪ್ರಭಾವವಿರುವ ರಾಜ್ಯಗಳಲ್ಲೊಂದು ತಮಿಳುನಾಡು. ಪ್ರಧಾನಿಯಾದ ನಂತರ ನರೇಂದ್ರ ಮೋದಿ ಹಲವು ಬಾರಿ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ಅವರಾಗಲಿ ಅಥವಾ ಕೇಂದ್ರ ಗೃಹಸಚಿವ ಅಮಿತ್ ಶಾ ಅಲ್ಲಿಗೆ ಭೇಟಿ ನೀಡಿದಾಗ ಅದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗುವುದು ಸಾಮಾನ್ಯ.

ಅಂತೆಯೇ, ಗುರುವಾರ (ಮೇ 26) ಪ್ರಧಾನಿ ಮೋದಿ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆಗೆ ತಮಿಳುನಾಡಿಗೆ ಭೇಟಿ ನೀಡಿದ್ದರು. ಬೆಂಗಳೂರು - ಚೆನ್ನೈ ಎಕ್ಸ್ ಪ್ರೆಸ್ ವೇ, ಚೆನ್ನೈ ಎಗ್ಮೋರ್, ರಾಮೇಶ್ವರಂ, ಮಧುರೈ, ಕಾಟ್ಪಾಡಿ ಮತ್ತು ಕನ್ಯಾಕುಮಾರಿ ರೈಲ್ವೇ ನಿಲ್ದಾಣದ ಪುನರಾಭಿವೃದ್ಧಿ ಕೆಲಸದ ಶಂಕು ಸ್ಥಾಪನೆಯನ್ನು ಪ್ರಧಾನಿ ಈ ಸಂದರ್ಭದಲ್ಲಿ ನೆರವೇರಿಸಿದರು.

 ತಮಿಳುನಾಡಿನಲ್ಲಿ 31,500 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಿಲಾನ್ಯಾಸ ತಮಿಳುನಾಡಿನಲ್ಲಿ 31,500 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಿಲಾನ್ಯಾಸ

ಮಾಮೂಲಿನಂತೆ ಮತ್ತೆ ಮೋದಿ ಭೇಟಿ ಟ್ವಿಟ್ಟರ್ ನಲ್ಲಿ ಇಂಡಿಯಾ ಟ್ರೆಂಡಿಂಗ್ ನಲ್ಲಿತ್ತು. ಗೋಬ್ಯಾಕ್ ಮೋದಿ ಹ್ಯಾಷ್ ಟ್ಯಾಗ್ ನಲ್ಲಿ ಸಾವಿರಾರು ಕಾಮೆಂಟುಗಳು ಬಂದು ಬಿದ್ದವು. ಬಹುತೇಕ ಎಲ್ಲವೂ ಪ್ರಧಾನಿ ಭೇಟಿಯನ್ನು ವಿರೋಧಿಸಿ ಬಂದಿದ್ದಂತಹ ಕಾಮೆಂಟುಗಳು.

ಆದರೆ, ಮೋದಿ ತಮಿಳುನಾಡು ನೆಲಕ್ಕೆ ಕಾಲಿಡುತ್ತಿದ್ದಂತೆಯೇ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತು. ಸಾಮಾಜಿಕ ತಾಣದಲ್ಲಿ ಸದ್ದು ಮಾಡಿದ್ದ ಹ್ಯಾಷ್ ಟ್ಯಾಗಿಗೂ ಅವರಿಗೆ ಸಿಕ್ಕಂತಹ ಸ್ವಾಗತಕ್ಕೂ ಸಂಬಂಧವೇ ಇಲ್ಲದಂತೆ ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ಅವರಿಗೆ ಸ್ವಾಗತವನ್ನು ಕೋರಿದರು.

ತಮಿಳು ಅಧಿಕೃತ ಭಾಷೆ ಎಂದು ಘೋಷಿಸಿ, ಮೋದಿಗೆ ಸ್ಟಾಲಿನ್ ಆಗ್ರಹತಮಿಳು ಅಧಿಕೃತ ಭಾಷೆ ಎಂದು ಘೋಷಿಸಿ, ಮೋದಿಗೆ ಸ್ಟಾಲಿನ್ ಆಗ್ರಹ

 ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮ

ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮ

ಚೆನ್ನೈ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಭಾರೀ ಭದ್ರತೆಯೊಂದಿಗೆ ಮೋದಿ ತಮ್ಮ ಎಸ್ಕಾರ್ಟ್ ಪಡೆಯೊಂದಿಗೆ ಅಲ್ಲಿಗೆ ಆಗಮಿಸಿದರು. ಸುಮಾರು ಮೂರು ಕಿಲೋಮೀಟರ್ ದೂರವನ್ನು ನಿಧಾನಗತಿಯಲ್ಲಿ ಸಾಗಿದ ಮೋದಿಗೆ ಸಾರ್ವಜನಿಕರಿಂದ ಉತ್ತಮ ಸ್ವಾಗತ ಸಿಕ್ಕಿತು. ಬಿಜೆಪಿ ಮತ್ತು ಎಐಎಡಿಎಂಕೆ ಬಾವುಟ ಎಲ್ಲೆಲ್ಲೂ ಹಾರಾಡುತ್ತಿದ್ದರೆ, ಚಿಣ್ಣರು ಮಹಿಳೆಯರು ಮೋದಿಗೆ ಕೈಬೀಸುತ್ತಾ ಜೈಕಾರ ಹಾಕುತ್ತಿದ್ದರು.

 ರೋಡ್ ಶೋ ರೀತಿಯಲ್ಲಿ ಮೋದಿಯವರ ಸ್ವಾಗತಕ್ಕೆ ಜನ

ರೋಡ್ ಶೋ ರೀತಿಯಲ್ಲಿ ಮೋದಿಯವರ ಸ್ವಾಗತಕ್ಕೆ ಜನ

ರೋಡ್ ಶೋ ರೀತಿಯಲ್ಲಿ ಮೋದಿಯವರ ಕಾರು ಎಷ್ಟು ನಿಧಾನಗತಿಯಲ್ಲಿ ಸಾಗುತ್ತಿತ್ತು ಎಂದರೆ, ಅವರ ಭದ್ರತಾ ಸಿಬ್ಬಂದಿಗಳು ನಡೆದುಕೊಂಡೇ ಬಂದರು. ಚೆಂಡೆ, ಡೊಳ್ಳು ಕಿವಿಗಡಚುವಂತೆ ಸದ್ದು ಮಾಡುತ್ತಿದ್ದರೆ ಪ್ರಧಾನಿ ಕೈಮುಗಿಯುತ್ತಾ ಭರ್ಜರಿ ಸ್ವಾಗತಕ್ಕೆ ಧನ್ಯವಾದ ಕೋರುತ್ತಾ ಬರುತ್ತಿದ್ದರು. ಸರಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲೂ ಜನರು ಕಿಕ್ಕಿರಿದು ಸೇರಿದ್ದರು. ತಮಿಳು, ತಮಿಳುನಾಡು, ಅಲ್ಲಿನ ಸಂಸ್ಕೃತಿಯನ್ನು ತಮ್ಮ ಭಾಷಣದುದ್ದಕ್ಕೂ ಹೇಳುತ್ತಾ, ಭಾರೀ ಕರತಾಡನ ಗಿಟ್ಟಿಸಿಕೊಂಡರು.

 ಎಗ್ಮೋರ್ ರೈಲು ನಿಲ್ದಾಣ, ಖಾಸಗೀಕರಣಗೊಳ್ಳುತ್ತಿರುವ ನಾಲ್ಕುನೂರು ನಿಲ್ದಾಣಗಳಲ್ಲೊಂದು

ಎಗ್ಮೋರ್ ರೈಲು ನಿಲ್ದಾಣ, ಖಾಸಗೀಕರಣಗೊಳ್ಳುತ್ತಿರುವ ನಾಲ್ಕುನೂರು ನಿಲ್ದಾಣಗಳಲ್ಲೊಂದು

ಗುರುವಾರ ಬೆಳಗ್ಗೆಯಿಂದಲೂ #GoBackModi ಟ್ಯಾಗ್ ಸದ್ದನ್ನು ಮಾಡುತ್ತಿತ್ತು. 'ಪುನರಾಭಿವೃದ್ಧಿಗೊಳ್ಳುತ್ತಿರುವ ಎಗ್ಮೋರ್ ರೈಲು ನಿಲ್ದಾಣ, ಖಾಸಗೀಕರಣಗೊಳ್ಳುತ್ತಿರುವ ನಾಲ್ಕುನೂರು ನಿಲ್ದಾಣಗಳಲ್ಲೊಂದು. ತೆರಿಗೆದಾರರ ದುಡ್ಡಿನಿಂದ ನಿಲ್ದಾಣವನ್ನು ಅಭಿವೃದ್ದಿಗೊಳಿಸುವುದು, ನಂತರ ಅದನ್ನು ಅದಾನಿ ಸಂಸ್ಥೆಗೆ ವಹಿಸುವುದು. ಮೋದಿ ತೊಲಗು'ಎನ್ನುವ ಕಾಮೆಂಟುಗಳೂ ಈ ಟ್ಯಾಗ್ ನಲ್ಲಿ ಬಂದಿದ್ದವು. 'ಬಿಜೆಪಿಯನ್ನು ಎಂದೂ ತಮಿಳುನಾಡಿಗೆ ಪ್ರವೇಶಿಸಲು ಬಿಡುವುದಿಲ್ಲ. ಮೋದಿ ಸುಳ್ಳುಗಾರ, ಅಮಿತ್ ಶಾ ದೇಶ ವಿಭಜಕ, ನಿರ್ಮಲಾ ಸೀತಾರಾಮನ್ ದೇಶವನ್ನು ಮಾರಾಟ ಮಾಡುವವರು' ಈ ರೀತಿಯ ಕಾಮೆಂಟುಗಳು ಬಂದಿತ್ತು.

 ಪ್ರಧಾನಿಯ ತಮಿಳುನಾಡು ಕಾರ್ಯಕ್ರಮ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು

ಪ್ರಧಾನಿಯ ತಮಿಳುನಾಡು ಕಾರ್ಯಕ್ರಮ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು

ಒಟ್ಟಿನಲ್ಲಿ ಬೆಳಗ್ಗೆಯಿಂದ ಬರುತ್ತಿದ್ದ ಕಾಮೆಂಟುಗಳು ಬರೀ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾದಂತಿತ್ತು. ಜೊತೆಗೆ, ಪ್ರಧಾನಿ ಮೋದಿಗೆ ಚೆನ್ನೈನಲ್ಲಿ ಸಿಕ್ಕ ಗೌರವವಕ್ಕೂ, ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿರುವುದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲದಂತಿತ್ತು. ಮೋದಿಗೆ ಸಿಕ್ಕ ಸ್ವಾಗತದಲ್ಲಿ ಬಹುತೇಕ ಬಿಜೆಪಿ ಮುಖಂಡರು, ಕಾರ್ಯಕರ್ತರ ಪಾಲು ಇದ್ದರೂ, ಗುರುವಾರದ ಪ್ರಧಾನಿಯ ತಮಿಳುನಾಡು ಕಾರ್ಯಕ್ರಮ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದನ್ನು ಮಾಡಿದೆ.

Recommended Video

KGF ಮತ್ತು ರಜತ್ ಕಟ್ಟಿಹಾಕೋಕೆ ರಾಜಸ್ತಾನ್ ರಣತಂತ್ರ:ಗೆದ್ದೋರು ಪೈನಲ್,ಸೋತೋರು ಮನೆಗೆ | Oneindia Kannada

English summary
Chennai Gives Rousing Reception To Modi, But, Go Back Trending In Twitter. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X