ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಪ್ರವಾಹ ಸಂತ್ರಸ್ತರಿಗೆ ಉಚಿತ ಟಾಕ್‌ಟೈಮ್

|
Google Oneindia Kannada News

ಚೆನ್ನೈ, ಡಿಸೆಂಬರ್, 02: ಚೆನ್ನೈ ಪ್ರವಾಹದಲ್ಲಿ ಸಿಲುಕಿ ಒದ್ದಾಡುತ್ತಿರುವವರ ನೆರವಿಗೆ ಮೊಬೈಲ್ ಕಂಪನಿಗಳು ನಿಂತಿವೆ. ಉಚಿತ ಟಾಕ್ ಟೈಮ್, ಡಾಟಾ ನೀಡುತ್ತೇವೆ ಎಂದು ಅಧಿಕೃತವಾಗಿ ಘೊಷಣೆ ಮಾಡಿವೆ.

ಭಾರತ ದೂರ ಸಂಚಾರ ನಿಗಮ (ಬಿಎಸ್ ಎನ್ ಎಲ್) ಮುಂದಿನ 1 ವಾರಗಳ ಕಾಲ ಉಚಿತ ದೂರವಾಣಿ ಸೇವೆ ನೀಡಲಿದೆ. ಬಿಲ್ ಪಾವತಿಸದೇ ಇರುವ ಟೆಲಿಫೋನ್ ಗಳಿಗೂ ಸೇವೆ ಕಲ್ಪಿಸಲಿದೆ. ಒಲಾ ಕ್ಯಾಬ್ ಗಳು ಸಹ ನೆರವಿಗೆ ಧಾವಿಸುತ್ತಿವೆ.[ಜಲ ಪ್ರಳಯ: ನೀರಿನಲ್ಲಿ ಸಿಲುಕಿ ದ್ವೀಪವಾದ ಚೆನ್ನೈ]

rain

ತನ್ನ ಗ್ರಾಹಕರಿಗೆ ಏರ್ ಟೆಲ್ 30 ರೂಪಾಯಿ ಕರೆನ್ಸಿ, 50 ಎಂಬಿ ಡಾಟಾ ಫ್ರೀ ಕೊಡುವುದಾಗಿ ಘೋಷಿಸಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ವೋಡಾಪೋನ್ ತನ್ನ ಗ್ರಾಹಕರಿಗೆ 10 ರು. ಉಚಿತ ಟಾಕ್ ಟೈಮ್, ವೋಡಾಫೋನ್ ನಿಂದ ವೋಡಾಫೊನ್ ಗೆ 10 ನಿಮಿಷ ಉಚಿತ ಕರೆ ಸೌಲಭ್ಯ ಮತ್ತು 100 ಎಂಬಿ ಡಾಟಾ ನೀಡುವುದಾಗಿ ಹೇಳಿದೆ. ಬಿಲ್ ಪಾವತಿಸದ ಗ್ರಾಹಕರಿಗೂ ಸೌಲಭ್ಯ ವಿಸ್ತರಣೆ ಮಾಡಿದೆ,. ಮುಂದಿನ ಎರಡು ದಿನಗಳ ಕಾಲ ಈ ಸವಲತ್ತುಗಳನ್ನು ಜಾರಿಯಲ್ಲಿ ಇಡುತ್ತೇವೆ ಎಂದು ವೋಡಾಫೋನ್ ತಿಳಿಸಿದೆ.[ತಮಿಳುನಾಡಲ್ಲಿ ಮಳೆ ಅವಾಂತರ ಹೇಗಿದೆ?]

ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರಾಗಿರುವವರ ನೆರವಿಗೆ ಕೇಂದ್ರ ಸರ್ಕಾರ ನಿಂತಿದೆ. ಸೈನ್ಯ ಮತ್ತು ಸ್ವಯಂ ಸೇವಕರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿವಿಧ ರಾಜ್ಯಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಆಹಾರ ಸೇರಿದಂತೆ ವಿವಿಧ ನೆರವು ನೀಡುತ್ತಿವೆ.

English summary
Corporates such as Bharti Airtel, Reliance Communications, Vodafone and taxi operator Olacabs have come out to provide relief to thousands of people stranded across Chennai because of heavy flooding in India's fourth largest city. Even state-run companies like BSNL are chipping in. Telecom Minister Ravi Shankar Prasad said state-run BSNL would not charge anything for a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X