ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ: ಹೆಚ್ಚುವರಿ ಸಾವಿರ ಕೋಟಿ

|
Google Oneindia Kannada News

ಚೆನ್ನೈ, ಡಿಸೆಂಬರ್. 03: ವೈಮಾನಿಕ ಸಮೀಕ್ಷೆ ನಡೆಸಿ ಪ್ರಧಾನಿ ನರೇಂದ್ರ ಪ್ರವಾಹದಿಂದ ತತ್ತರಿಸಿರುವ ಚೆನ್ನೈ ನೆರೆ ಸಂತ್ರಸ್ತರ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೇ ಪರಿಹಾರಕ್ಕೆ ಹೆಚ್ಚುವರಿ 1000 ಕೋಟಿ ರು. ನೀಡಲು ಆದೇಶ ಮಾಡಿದರು.

ತಮಿಳುನಾಡು ಜಯಲಲಿತಾ, ರಾಜ್ಯಪಾಲ ರೋಸಯ್ಯ ಸಹ ವೈಮಾನಿಕ ಸಮೀಕ್ಷೆ ಮಾಡಿ ಪರಿಸ್ಥಿತಿ ಅವಲೋಕನ ಮಾಡಿದರು .ಪ್ರವಾಹ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ 940 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಇನ್ನೂ 1 ಸಾವಿರ ಕೋಟಿ ರುಪಾಯಿ ತಕ್ಷಣ ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.[ಚೆನ್ನೈ ಜಲಪ್ರಳಯಕ್ಕೆ ನೆರವಾಗುತ್ತಿರುವ ಟ್ವಿಟ್ಟರ್ ಮಿತ್ರರು]

modi

ಕೇಂದ್ರ ಸರ್ಕಾರ ತಮಿಳುನಾಡು ಜನತೆಯ ನೆರವಿಗೆ ಇದೆ, ಪರಿಹಾರ ಕಾರ್ಯಗಳಿಗೆ ಒಟ್ಟು 1940 ಕೋಟಿ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.

ಬುಧವಾರ ರಾತ್ರಿಯಿಂದ ಮಳೆ ಅಬ್ಬರ ನಿಂತಿದೆ. ಗುರುವಾರ ಚೆನ್ನೈ, ತಿರುವಳ್ಳೂರ್ ಹಾಗೂ ಕಾಂಚೀಪುರಂ ಸೇರಿದಂತೆ ವಿವಿಧ ಜಿಲ್ಲೆಗಳ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ ಮುಂದಿನ 24ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.[ತಮಿಳುನಾಡಿಗೆ 5 ಕೋಟಿ ನೆರವು ಘೋಷಿಸಿದ ಕರ್ನಾಟಕ]

modi

ರಕ್ಷಣಾ ತಂಡ ಈಗಾಗಲೇ ಸುಮಾರು 62 ಸಾವಿರ ಜನರನ್ನು ರಕ್ಷಣೆ ಮಾಡಿದೆ. ಪ್ರವಾಹದಲ್ಲಿ ಒಟ್ಟು 269 ಜನ ಜೀವ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

English summary
Prime Minister Narendra Modi announced a relief package of Rs. 1000 crores for Tamilnadu Floods. He said that the declared amount is over and above the Rs. 940 crores which was released earlier. Prime Minister Modi earlier in the day arrived in Chennai to take stock of the situation arising out of incessant rains in coastal parts of Tamil Nadu over the last few weeks. He also conducted an aerial survey of the flood affected areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X