ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಸ್ ದಿನ' ಆಚರಿಸುವ ಜೋಶ್ ನಲ್ಲಿ ಟಾಪ್ ನಿಂದ ಬಿದ್ದ ಚೆನ್ನೈ ವಿದ್ಯಾರ್ಥಿಗಳು

|
Google Oneindia Kannada News

ಚೆನ್ನೈ, ಜೂನ್ 18: ಸೋಮವಾರ ಚೆನ್ನೈನಲ್ಲಿ ನಡೆದ ಘಟನೆಯೊಂದರ ವಿಡಿಯೋ ಭಾರೀ ವೈರಲ್ ಆಗಿದೆ. ಚೆನ್ನೈ ನಗರದ ಬಸ್ ವೊಂದರ ಮುಂದೆ ದಿಢೀರನೆ ಬೈಕ್ ಅಡ್ಡ ಬಂದಿದೆ. ಆ ವೇಳೆ ಚಾಲಕ ಬ್ರೇಕ್ ಹಾಕಿದ್ದಾನೆ. ಆಗ ಟಾಪ್ ನಲ್ಲಿ ಕುಳಿತ ವಿದ್ಯಾರ್ಥಿಗಳ ಗುಂಪೊಂದು ರಸ್ತೆಗೆ ಬಿದ್ದಿದೆ. 'ಬಸ್ ದಿನ'ವನ್ನು ಅಚರಿಸುವ ಸಲುವಾಗಿ ಪಚ್ಚೈಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಬಸ್ ನ ಮೇಲೇರಿ ಕುಳಿತಿದ್ದರು.

ಇನ್ನು ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿರ್ದಿಷ್ಟ ಕಾಲೇಜು ಮಾರ್ಗದಲ್ಲೇ ಸಂಚಾರ ಮಾಡುವ ಬಸ್ ನ ಚಾಲಕ ಹಾಗೂ ನಿರ್ವಾಹಕರಿಗೆ ಧನ್ಯವಾದ ಹೇಳುವ ಸಲುವಾಗಿ ಹೀಗೆ 'ಬಸ್ ದಿನ'ವನ್ನು ಆಚರಿಸಲಾಗುತ್ತದೆ. ಕ್ರಮೇಣ ಈ ದಿನವೇ ನಾನಾ ಅವಘಡಗಳಿಗೆ ಕಾರಣ ಆಗುತ್ತಿದೆ.

Chennai college students fell down to road on Bus Day

ಜನ ನಿಬಿಡ ರಸ್ತೆಗಳಲ್ಲೇ ಬಹಳ ನಿಧಾನವಾಗಿ ಬಸ್ ಅನ್ನು ಚಾಲನೆ ಮಾಡುವಂತೆ ಚಾಲಕರಿಗೆ ವಿದ್ಯಾರ್ಥಿಗಳು ಒತ್ತಡ ಹಾಕುತ್ತಾರೆ. ಇದರಿಂದ ಸಂಚಾರ ದಟ್ಟಣೆ ಏರ್ಪಡುತ್ತದೆ. 'ಬಸ್ ದಿನ' ಆಚರಣೆ ಬಗ್ಗೆ ಮದ್ರಾಸ್ ಹೈ ಕೋರ್ಟ್ ಹಲವು ಬಾರಿ ಆಕ್ಷೇಪಣೆಯನ್ನು ವ್ಯಕ್ತಿಪಡಿಸಿದೆ. ಇಂಥ ಆಚರಣೆ ವಿರುದ್ಧ ಪೊಲೀಸರು ಕೂಡ ಎಚ್ಚರಿಕೆ ನೀಡಿದ್ದಾರೆ.

English summary
Chennai Pachaiappa's college student fell down from bus top on Monday during 'Bus Day' celebration. Video of that incident gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X