ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ರೈಲು ವೇಳಾಪಟ್ಟಿ ಬದಲು

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಕೆಎಸ್ಆರ್ ಬೆಂಗಳೂರು - ಎಂಜಿಆರ್ ಚೆನೈ ಸೆಂಟ್ರಲ್ ನಡುವೆ ಸಂಚಾರ ನಡೆಸುವ ಡಬಲ್ ಡೆಕ್ಕರ್ ರೈಲಿನ ವೇಳಾಪಟ್ಟಿ ಬದಲಾಗಿದೆ. ನೂತನ ವೇಳಾಪಟ್ಟಿ ಡಿಸೆಂಬರ್ 4ರಿಂದ ಜಾರಿಗೆ ಬರಲಿದೆ.

ಬೆಂಗಳೂರು ಚೆನ್ನೈ ನಡುವೆ ಪ್ರತಿದಿನ ಸಂಚಾರ ನಡೆಸುವ ಹವಾನಿಯಂತ್ರಿತ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ನೂತನ ವೇಳಾಪಟ್ಟಿ ಅನ್ವಯ 10 ನಿಮಿಷ ತಡವಾಗಿ ರೈಲು ಬೆಂಗಳೂರು ತಲುಪಲಿದೆ.

ಮೈಸೂರು-ಧಾರವಾಡ ಪ್ರತಿದಿನದ ರೈಲು ಸೇವೆ ವಿಸ್ತರಣೆ ಮೈಸೂರು-ಧಾರವಾಡ ಪ್ರತಿದಿನದ ರೈಲು ಸೇವೆ ವಿಸ್ತರಣೆ

ಬದಲಾದ ವೇಳಾಪಟ್ಟಿ ಪ್ರಕಾರ ಚೆನ್ನೈ ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಂಗಳೂರಿಗೆ ಹೊರಡುವ 06075 ನಂಬರ್ ಡಬಲ್ ಡೆಕ್ಕರ್ ರೈಲು ಬೆಳಗ್ಗೆ 7.25ಕ್ಕೆ ಹೊರಡಲಿದೆ. ಮಧ್ಯಾಹ್ನ 1.10ರ ಬದಲಾಗಿ, 1.20ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ರೈಲು ನಿಲ್ದಾಣದ ಪ್ಲಾಟ್‌ ಫಾರಂ ಟಿಕೆಟ್‌ ದರ ಕಡಿತವಿಲ್ಲರೈಲು ನಿಲ್ದಾಣದ ಪ್ಲಾಟ್‌ ಫಾರಂ ಟಿಕೆಟ್‌ ದರ ಕಡಿತವಿಲ್ಲ

Chennai Bengaluru Double Decker Train Schedule Changed

ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ 06076 ಡಬಲ್ ಡೆಕ್ಕರ್ ರೈಲು ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ಚೆನ್ನೈನ ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣವನ್ನು ರಾತ್ರಿ 8.30ರ ಬದಲಾಗಿ 8.25ಕ್ಕೆ ತಲುಪಲಿದೆ.

ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು; ಜನರ ಆಕ್ರೋಶ ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು; ಜನರ ಆಕ್ರೋಶ

ಭಾರತೀಯ ರೈಲ್ವೆ ಮಾಹಿತಿಯಂತೆ ವೇಳಾಪಟ್ಟಿಯನ್ನು ಮಾತ್ರ ಬದಲಾವಣೆ ಮಾಡಲಾಗಿದೆ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ದರ ಸೇರಿದಂತೆ ಬೇರೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಡಬಲ್ ಡೆಕ್ಕರ್ ರೈಲು: ಚೆನ್ನೈ-ಬೆಂಗಳೂರು ನಗರದ ನಡುವೆ ಅಧಿಕ ಸಂಚಾರ ದಟ್ಟಣೆ ಇದೆ. ಆದ್ದರಿಂದ, ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ 2012-13ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಡಬಲ್ ಡೆಕ್ಕರ್ ರೈಲು ಯೋಜನೆಯನ್ನು ಘೋಷಣೆ ಮಾಡಲಾಗಿತ್ತು.

2013-14ರ ಬಜೆಟ್‌ಗೆ ಎರಡು ದಿನ ಬಾಕಿ ಇರುವಾಗ ಡಬಲ್ ಡೆಕ್ಕರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಪರೀಕ್ಷಾರ್ಥ ಸಂಚಾರವನ್ನು ಆರಂಭಿಸಲಾಗಿತ್ತು. ಬಳಿಕ ಉಭಯ ನಗರಗಳ ನಡುವೆ ರೈಲು ಪ್ರತಿದಿನ ಸಂಚಾರವನ್ನು ನಡೆಸುತ್ತಿದೆ.

Recommended Video

Burevi ಚಂಡಮಾರುತ ಕೇರಳ ಪ್ರವೇಶಿಸಿದ್ದಕ್ಕೆ , ನಮ್ಮ ರಾಜ್ಯದಲ್ಲಿ ಮಳೆ | Oneindia Kannada

ಪಂಬಾಜ್‌ನ ಕಪುರ್ತಲಾ ಕೋಚ್ ಫ್ಯಾಕ್ಟರಿಯಲ್ಲಿ ರೈಲಿನ ಬೋಗಿಯನ್ನು ತಯಾರು ಮಾಡಲಾಗಿದೆ. ಸಾಮಾನ್ಯ ರೈಲಿನಲ್ಲಿ 90 ಆಸನ ಇರುತ್ತದೆ. ಡಬಲ್ ಡೆಕ್ಕರ್ ರೈಲಿನಲ್ಲಿ 120 ಆಸನದ ವ್ಯವಸ್ಥೆ ಇದೆ. ಒಟ್ಟು ಮೂರು ಹಂತದ ವ್ಯವಸ್ಥೆ ಈ ರೈಲಿನಲ್ಲಿ ಇದೆ. ಪ್ಲಾಟ್ ಫಾರ್ಮ್ ಹಂತದಲ್ಲಿ 22, ಮಧ್ಯದಲ್ಲಿ 48 ಮತ್ತು ಮೇಲ್ಮೈ ಹಂತದಲ್ಲಿ 50 ಸೆಮಿ ಕುಷನ್ ಆಸನ ವ್ಯವಸ್ಥೆಗಳಿವೆ.

English summary
Indian railways changed the schedule of AC Double Decker super fast train service between MGR central station - KSR Bengaluru station. New schedule come to effect from December 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X