• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆನ್ನೈ ಸೇರಿದಂತೆ 9 ಜಿಲ್ಲೆಗಳಲ್ಲಿ ಮಳೆ, ಜನಜೀವನ ತತ್ತರ

|

ಚೆನ್ನೈ, ಜನವರಿ 7: ಚೆನ್ನೈ ಸೇರಿದಂತೆ ಅಕ್ಕಪಕ್ಕದ 9 ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೆರಡು ದಿನಗಳ ಕಾಲ ಇದೇ ರೀತಿ ವಾತಾವರಣ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಹಲವೆಡೆ ಅನಿರೀಕ್ಷಿತ ಮಳೆಗೆ ಕಾರಣವೇನು?

ಕಳೆದ ನೂರು ವರ್ಷಗಳಲ್ಲೇ ಬೀಳದಷ್ಟು ಮಳೆಯನ್ನು ಚೆಂಗಲಪಟ್ಟು ದಾಖಲಿಸಿದೆ. ಒಂದು ದಿನದಲ್ಲಿ ಸುರಿದ ಮಳೆ ಪ್ರಮಾಣ ಹೊಸ ಇತಿಹಾಸ ನಿರ್ಮಿಸಿದೆ. ಚೆಂಗಲಪಟ್ಟುವಿನಲ್ಲಿ ಬುಧವಾರದಂದು ಸರಾಸರಿ 26 ಸೆಂ.ಮೀ ಮಳೆ ಬಿದ್ದಿದೆ. 1915ರ ಜನವರಿ 15ರಂದು ಚೆನ್ನೈನಲ್ಲಿ 21.5 ಸೆಂ.ಮೀ ಸುರಿದಿದ್ದೇ ಇಲ್ಲಿ ತನಕ ದಾಖಲೆಯಾಗಿತ್ತು ಎಂದು ಚೆನ್ನೈ ಹವಾಮಾನ ಇಲಾಖೆ ವಿಜ್ಞಾನಿ ಎನ್ ಪುವಿಯಾರಾಸನ್ ಹೇಳಿದ್ದಾರೆ.

ಮೀನಂಬಕ್ಕಂನಲ್ಲಿ 12.6 ಸೆಂ.ಮೀ,ನುಂಗಂಬಾಕ್ಕಂನಲ್ಲಿ 11 ಸೆಂ.ಮೀ, ಸೇರಿದಂತೆ ಚೆನ್ನೈನಲ್ಲಿ ಕಳೆದೆರಡು ದಿನಗಳ ಸರಾಸರಿ 12.05 ಸೆಂ.ಮೀ ಮಳೆ ಸುರಿದಿದೆ ಎಂದು ತಮಿಳುನಾಡಿನ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಚೆನ್ನೈ ನಗರದ ಹಲವು ಬಡಾವಣೆಗಳಲ್ಲಿ ನೀರು ತುಂಬಿದ ರಸ್ತೆಗಳಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿರುವ ಘಟನೆ ನಡೆದಿದೆ. ಪಾಲಿಕೆ ಸಿಬ್ಬಂದಿಗಳು ಕೆಲವೆಡೆ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ, ಸಂಚಾರ ಸುಗುಮಗೊಳಿಸಿದ್ದಾರೆ.

ಕಡಲೂರು, ವಿಳ್ಳುಪುರಂ, ಚೆಂಗಲ್ ಪಟ್ಟು, ಕಾಂಚೀಪುರಂ, ಕೊಯಮತ್ತೂರು, ನೀಲಗಿರೀಸ್, ನಾಗಪಟ್ಟಿಣಂ, ಥೇಣಿ, ದಿಂಡಿಗಲ್, ವಿರುಧನಗರ್ ಹಾಗೂ ರಾಮನಾಥಪುರಂ ಮುಂತಾದ ಪ್ರದೇಶಗಳಲ್ಲಿ ಜನವರಿ 10ರ ತನಕ ಇದೇ ರೀತಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

   ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಮೇಲೆ ಶೂಟೌಟ್ | Oneindia Kannada

   English summary
   Chennai, adjoining districts of Chengalpattu, Tiruvallur, Kancheepuram and Ranipet other districts to receive rainfall in TN.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X