• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಡಿಯನ್ 2 ಸೆಟ್ ನಲ್ಲಿ ಅಪಘಾತ, ಶಂಕರ್ ಪವಾಡ ಸದೃಶ ಪಾರು

|

ಚೆನ್ನೈ, ಫೆಬ್ರವರಿ 20: ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ಇಂಡಿಯನ್ 2 ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಭಾರಿ ಅವಘಡ ಸಂಭವಿಸಿದೆ. ನಿರ್ದೇಶಕ ಶಂಕರ್ ಅವರು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಕ್ರೇನ್ ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದು, ಅನೇಕರಿಗೆ ಗಾಯಗಳಾಗಿವೆ.

ಇಂಡಿಯನ್ 2 ಗಾಗಿ ಸೆಟ್ ನಿರ್ಮಾಣ ವೇಳೆಯಲ್ಲಿ ಕ್ರೇನ್ ಕುಸಿದು ಬಿದ್ದಿದೆ. ಕ್ರೇನ್ ಪಕ್ಕದಲ್ಲೇ ನಿರ್ದೇಶನ ನೀಡುತ್ತಿದ್ದ ಶಂಕರ್ ಹಾಗೂ ತಂಡದ ಸದಸ್ಯರು ತಕ್ಷಣವೇ ಪಾರಾಗಲು ಯತ್ನಿಸಿದ್ದಾರೆ. ಆದರೆ, ಶಂಕರ್ ಅವರ ಸಹಾಯಕರ ಮೇಲೆ ಕ್ರೇನ್ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮೂವರು ಮೃತಪಟ್ಟಿದ್ದರೆ, 10 ಮಂದಿಗೆ ಗಾಯಗಳಾಗಿವೆ.

ಈ ಬಗ್ಗೆ ಭಾರಿ ದುಃಖ ವ್ಯಕ್ತಪಡಿಸಿರುವ ನಟ ಕಮಲ್ ಹಾಸನ್, ಟ್ವಿಟ್ಟರ್ ನಲ್ಲಿ ದುರಂತದ ಬಗ್ಗೆ ಬರೆದುಕೊಂಡಿದ್ದಾರೆ. ನಾನು ಅನೇಕ ದುರಂತಗಳನ್ನು ಕಂಡಿದ್ದೇನೆ, ಆದರೆ, ಇದು ದೊಡ್ಡ ನೋವು ತಂದಿರುವ ಅಪಘಾತ. ನನ್ನ ಜೊತೆಗಾರರನ್ನು ಕಳೆದುಕೊಂಡಿದ್ದೇನೆ. ನಮ್ಮ ದುಃಖ ನೋವಿಗಿಂತ ಅವರ ಕುಟುಂಬಸ್ಥರ ನೋವು ಹಿರಿದಾಗಿದ್ದು, ಅವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ ಎಂದಿದ್ದಾರೆ.

ಪ್ರಾಥಮಿಕ ವರದಿಯಂತೆ, ಶಂಕರ್ ಅವರ ಕಾಲು ಮುರಿದಿರುವ ಸುದ್ದಿ ಬಂದಿತ್ತು. ಆದರೆ, ನಂತರ ಅದು ಸುಳ್ಳು ಸುದ್ದಿ ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ. ಶಂಕರ್ ಅವರ ನಿರ್ದೇಶಕ ತಂಡದ ಸಹಾಯಕರಾಗಿದ್ದ ಕೃಷ್ಣ(34), ಸಹಾಯಕ ಮಧು (29) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತರಾಗಿದ್ದಾರೆ. ಇವಿಪಿ ಸ್ಟುಡಿಯೋಸ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಲೈಟ್ ಸೆಟ್ ಅಪ್ ಗಾಗಿ ಬಳಸಿದ್ದ ಕ್ರೇನ್ ಬಿದ್ದ ಪರಿಣಾಮ ದುರಂತ ಸಂಭವಿಸಿದೆ.ಕಮಲ್ ಹಾಸನ್, ರಾಕುಲ್ ಪ್ರೀತ್ ಸಿಂಗ್, ಸಿದ್ದಾರ್ಥ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವು 2021ರಲ್ಲಿ ತೆರೆಗೆ ಬರಲಿದೆ.

English summary
Three people were killed on Wednesday night when a crane fell on them on the sets of the Kamal Haasan-starrer Indian 2, local media reported.Director Shankar was working close to the spot, but had a miraculous escape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X