ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದಮಾಮ: ವಿಕ್ರಮ ಮತ್ತು ಬೇತಾಳ ಕಥೆ ಖ್ಯಾತಿಯ ಚಿತ್ರ ಕಲಾವಿದ ಶಿವಶಂಕರನ್ ನಿಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಮೊಬೈಲ್ ಇಲ್ಲದ ಕಾಲದಲ್ಲಿ, ಮಕ್ಕಳನ್ನು ಓದಿಗೆ ಒರೆ ಹಚ್ಚುತ್ತಿದ್ದ, ರಾಜಾ ವಿಕ್ರಮನ ಸಾಹಸಗಳ ಮೂಲಕ ಬೆರಗಾಗುವ ಜಗತ್ತನ್ನು ತೆರೆದಿಡುತ್ತಿದ್ದ ಚಂದಮಾಮ ಕಲಾವಿದ ಶಂಕರ( ಕೆಸಿ ಶಿವಶಂಕರನ್) ಅವರು ಕೊನೆಯುಸಿರೆಳೆದಿದ್ದಾರೆ.

ವಿಕ್ರಮ ಮತ್ತು ಬೇತಾಳನ ಕಥೆಗಳು ಕಥಾರೂಪಕಗಳಲ್ಲಿ ಸುಂದರವಾಗಿ ಮೂಡಿಬರುತ್ತಿದ್ದ ಕಲಾವಿದ ಶಂಕರ್ ಅವರ ಅದ್ಭುತ ಚಿತ್ರಗಳು ನೇರವಾಗಿ ಮನಸ್ಸಿಗೆ ತಾಕುತ್ತಿದ್ದವು.

ಕೆಸಿ ಶಿವಶಂಕರನ್ 1924 ರಲ್ಲಿ ಈರೋಡ್‌ನಲ್ಲಿ ಜನಿಸಿದರು. ಅವರ ತಂದೆ ಶಿಕ್ಷಕರಾಗಿದ್ದರು. ಮದ್ರಾಸಿನ ಕಾರ್ಪೊರೇಷನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ ಶಂಕರ್ ಅವರ ಕೈಬರಹ ಅದ್ಭುತವಾಗಿತ್ತು. ಮುಂದೆ ಆ ಕೈಬರಹವೇ ಚಿತ್ರಕಾರರನ್ನಾಗಿ ಮಾಡಿತ್ತು.

Chandamama Artist KC Sivasankar, Illustrator Of Famous Vikram And Vetala Series Passes Away

ಮುಂದೆ ತಂದೆ ಸೇರಿದಂತೆ ಅನೇಕ ಹಿತೈಷಿಗಳ ಮಾರ್ಗದರ್ಶನದಂತೆ ಬಾಲ ಶಂಕರ್ ಪದವಿ ಶಿಕ್ಷಣ ಪಡೆಯದೆ, ಫೈನ್ ಆರ್ಟ್ಸ್ ಕಾಲೇಜು ಸೇರಿಕೊಂಡು ಒಂದಷ್ಟು ಕಲೆ ಕಲಿತರು.
ಬಳಿಕ 1952ರ ವೇಳೆಗೆ ಮಾಸಿಕ 350 ರೂಪಾಯಿ ಸಂಬಳಕ್ಕೆ ಚಂದಮಾಮ ಮಾಸಿಕ ಪತ್ರಿಕೆ ಸೇರಿಕೊಂಡು ತಮ್ಮ ಭವಿಷ್ಯ ರೂಪಸಿಕೊಂಡರು.

English summary
Legendary artist KC Sivasankar who has contributed to the field of art for over 60 years, illustrating for popular children’s magazine Chandamama aka Ambulimama, passed away at his residence in Chennai on September 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X