• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಬಿಐ ದಾಳಿ ವೇಳೆ ಏನೂ ಸಿಕ್ಕಿಲ್ಲ: ಪಿ.ಚಿದಂಬರಂ

|
Google Oneindia Kannada News

ಚೆನ್ನೈ, ಮೇ 17: 2011ರಲ್ಲಿ ಅಕ್ರಮವಾಗಿ 50 ಲಕ್ಷ ರೂಪಾಯಿ ಪಡೆದು 250 ಚೀನಿ ಪ್ರಜೆಗಳಿಗೆ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಆರೋಪಿಸಿದ್ದು, ಚಿದಂಬರಂ ಪುತ್ರ ಕಾರ್ತಿ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ ಬೆಳಗ್ಗೆ ಪಿ. ಚಿದಂಬರಂ ಮತ್ತು ಪುತ್ರ ಕಾರ್ತಿ ಚಿದಂಬರಂಗೆ ಸೇರಿದ ಚೆನ್ನೈ ಮತ್ತು ದೆಹಲಿ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದರು.

Breaking news: ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ದೆಹಲಿ, ಮುಂಬೈ, ಚೆನ್ನೈ ಆಸ್ತಿಗಳ ಮೇಲೆ ಸಿಬಿಐ ದಾಳಿ!Breaking news: ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ದೆಹಲಿ, ಮುಂಬೈ, ಚೆನ್ನೈ ಆಸ್ತಿಗಳ ಮೇಲೆ ಸಿಬಿಐ ದಾಳಿ!

ಚೆನ್ನೈ ಮತ್ತು ದೆಹಲಿಯ ಕಚೇರಿ ಮತ್ತು ನಿವಾಸಗಳಲ್ಲಿ ಸಿಬಿಐ ಅಧಿಕಾರಿಗಳ ತಂಡ ಶೋಧಕಾರ್ಯ ನಡೆಸಿದ್ದು, ಸಿಬಿಐ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಸ್ಪಷ್ಟನೆ ನೀಡಿದ್ದಾರೆ.

ಸಿಬಿಐ ಶೋಧ ಕಾರ್ಯ ಕುರಿತಂತೆ ಟ್ವೀಟ್ ಮಾಡಿರುವ ಚಿದಂಬರಂ, "ಸಿಬಿಐ ಅಧಿಕಾರಿಗಳು ನನಗೆ ತೋರಿಸಿದ ಎಫ್‌ಐಆರ್‌ನಲ್ಲಿ ನನ್ನನ್ನು ಆರೋಪಿ ಎಂದು ಹೆಸರಿಸಿಲ್ಲ, ಶೋಧಕಾರ್ಯದ ವೇಳೆ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ, ಆದರೆ ಅಧಿಕಾರಿಗಳ ಶೋಧನೆಯ ಕಾರ್ಯಾಚರಣೆ ಆಸಕ್ತಿಕರವಾಗಿತ್ತು ಎಂದಷ್ಟೇ ಹೇಳಬಲ್ಲೆ" ಎಂದು ತಿಳಿಸಿದ್ದಾರೆ.

ಸಿಬಿಐ ದಾಳಿ ಕುರಿತಂತೆ ಕಾರ್ತಿ ಚಿದಂಬರ್ ಟ್ವೀಟ್ ಮಾಡಿದ್ದು "2015ರಲ್ಲಿ ಎರಡು ಬಾರಿ, 2017ರಲ್ಲಿ ಒಮ್ಮೆ, 2018ರಲ್ಲಿ ಎರಡು ಬಾರಿ ಮತ್ತು ಇಂದು, ಅದೆಷ್ಟು ಬಾರಿ ನನ್ನ ಮೇಲೆ ಸಿಬಿಐ ದಾಳಿ ಆಗಿದೆಯೋ? ನನಗೆ ಎಣಿಕೆಗೆ ಸಿಗುತ್ತಿಲ್ಲ, ಬಹುಶಃ ಇದು ದಾಖಲೆಯೇ ಇರಬೇಕು ಎಂದು" ಹೇಳಿದ್ದಾರೆ.

CBI Registeres New Case Against Karti Chidambaram

ಐಎನ್‌ಎಕ್ಸ್ ಮೀಡಿಯಾ ಮತ್ತು ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣಗಳಲ್ಲಿ ಕಾರ್ತಿ ಚಿದಂಬರಂ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐಗೆ ಈ ಪ್ರಕರಣದ ಸುಳಿವು ಸಿಕ್ಕಿದೆ.

English summary
CBI has registered a new case against senior leader P. Chidambaram son Karti Chidambaram for allegedly facilitating visa of 250 Chinese nationals after receiving Rs 50 lakh bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X