ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್ ನಂತರ ಕಾವೇರಿ ಬಗ್ಗೆ ರಜನಿಕಾಂತ್ ಟ್ವೀಟ್!

By Mahesh
|
Google Oneindia Kannada News

ಚೆನ್ನೈ, ಮಾರ್ಚ್ 29: ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ ಅವರು ಕಾವೇರಿ ಮಂಡಳಿಯ ಬಗ್ಗೆ ಸೊಲ್ಲೆತ್ತಿದ ಬಳಿಕ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಕಾವೇರಿ ಮಂಡಳಿಯ ಬಗ್ಗೆ ಮಾತನಾಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |ಚುನಾವಣೆಯ ಮುಖ್ಯ ದಿನಾಂಕಗಳು

ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆ ಕೇಂದ್ರ ಸರ್ಕಾರ ಯಾವಾಗ ನಿರ್ಧಾರ ಕೈಗೊಳ್ಳವುದೋ ಗೊತ್ತಿಲ್ಲ. ಆದರೆ, ತಮಿಳುನಾಡು ಮಾತ್ರ ಈ ಬಗ್ಗೆ ಭಾರಿ ಒತ್ತಡ ಹೇರಲು ಆರಂಭಿಸಿದೆ. ಮಂಡಳಿ ರಚನೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಸಂಸದ ನವನೀತ್ ಕೃಷ್ಣ ಎಂಬುವರು ಬೆದರಿಕೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ತ.ನಾಡು ಜನ, ದೇವರು ನನ್ನ ಬೆನ್ನಿಗಿದ್ದಾರೆ, ಬಿಜೆಪಿಯಲ್ಲ: ರಜನಿ ಪಂಚ್ತ.ನಾಡು ಜನ, ದೇವರು ನನ್ನ ಬೆನ್ನಿಗಿದ್ದಾರೆ, ಬಿಜೆಪಿಯಲ್ಲ: ರಜನಿ ಪಂಚ್

ರಜನಿಕಾಂತ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕಾವೇರಿ ವಿವಾದದ ವಿಷಯದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಯೊಂದೆ ಪರಿಹಾರವೆಂದು ತೋರುತ್ತಿದೆ. ನ್ಯಾಯ ಸಿಗುವ ಆಶಾಭಾವನೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ಹಾಗೂ ಮಂಡಳಿ ರಚನೆ ಬಗ್ಗೆ ಫೆಬ್ರವರಿ 16ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ 6 ವಾರಗಳೊಳಗೆ ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ತೀರ್ಪಿನ ಪ್ರಕಟಿಸಬೇಕಿದೆ. ಮಾರ್ಚ್ 29ರಂದು ಇದಕ್ಕೆ ಕೊನೆ ದಿನಾಂಕವಾಗಿದ್ದು, ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಬಗ್ಗೆ ಕೇಂದ್ರ ಸರ್ಕಾರ ಉತ್ತಮ ನಿರ್ಣಯ ಕೈಗೊಳ್ಳುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಹೇಳಿದ್ದಾರೆ.

English summary
Superstar Rajinikanth on Thursday batted for setting up of the Cauvery Management Board (CMB), saying it was the "only acceptable just solution for us" in the interstate river water dispute involving Tamil Nadu and Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X