ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಪಾದ್ರಿ ಬಂಧನ

|
Google Oneindia Kannada News

ಮಧುರೈ, ಜುಲೈ 24: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇರೆಗೆ ಮಧುರೈನಲ್ಲಿ ಪಾದ್ರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ಯಾಕುಮಾರಿ ಪೊಲೀಸರು ರೋಮನ್ ಕ್ಯಾಥೊಲಿಕ್ ಪಾದ್ರಿ ಜಾರ್ಜ್ ಪೊನ್ನಿಯಾರನ್ನು ಮದುರೈನಲ್ಲಿ ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು ಮತ್ತು ಹಲವರು ದೂರುಗಳನ್ನು ನೀಡಿದ್ದು ಅರುಮಾನೈ ಪೊಲೀಸರು ಪೊನ್ನಯ್ಯ ವಿರುದ್ಧ 143, 153 ಎ, 269, 295 ಎ, 505(2), ಐಪಿಸಿಯ 506(1) ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ ಸೆಕ್ಷನ್ 3, 1897 ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಜುಲೈ 20ರಂದು ಪ್ರಕರಣ ದಾಖಲಿಸಿದ್ದರು.

ಪಾದ್ರಿ ಕಾರಿನಲ್ಲಿ ಚೆನ್ನೈಗೆ ಪರಾರಿಯಾಗಲು ಯತ್ನಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಪಾಂಡಿ ಕೋವಿಲ್ ಬಳಿ ಸಿಲೈಮನ್ ಪೊಲೀಸರು ಬಂಧಿಸಿದ್ದರು. ಇದೀಗ ಅವರನ್ನು ಕನ್ಯಾಕುಮಾರಿ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.

Catholic Priest Arrested Over Controversial Remarks Against PM Modi

ಜುಲೈ 18ರಂದು ಅರುಮಾನೈನಲ್ಲಿ ನಡೆದ ಸಭೆಯಲ್ಲಿ ಪೊನ್ನಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ 'ಭಾರತ ಮಾತೆ'ಯನ್ನು ಅವಮಾನಿಸಿದ್ದು, ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹರಡಲು ಯತ್ನ ಹಿನ್ನೆಲೆಯಲ್ಲಿ ಪಾದ್ರಿ ವಿರುದ್ಧ ಪ್ರಕರಣ ದಾಖಲಾಗಿತ್ತು.

English summary
After making controversial remarks against PM Narendra Modi and other ministers, a Catholic Priest was arrested in Madurai's Kallikudi on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X