ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CAA ಪ್ರತಿಭಟನೆ, ಹಿಂಸಾಚಾರದ ಬಗ್ಗೆ ಸೂಪರ್ ಸ್ಟಾರ್ ರಜನಿ ಕಳವಳ

|
Google Oneindia Kannada News

ಚೆನ್ನೈ, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದೆಲ್ಲೆಡೆ ನಡೆದಿರುವ ಪ್ರತಿಭಟನೆ ಹಿಂಸಾಚಾರ ರೂಪ ತಳೆದಿರುವುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆ ಬಗ್ಗೆ ರಜನಿಕಾಂತ್ ಪ್ರತಿಕ್ರಿಯಿಸುತ್ತಿದ್ದಂತೆ ರಜನಿ ಹೇಳಿಕೆ ಪರ-ವಿರೋಧ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿ ಜೋರಾಗಿ ನಡೆದಿದೆ.

"ಈ ಪ್ರತಿಭಟನೆ, ಹಿಂಸಾಚಾರದಿಂದ ನನಗೆ ತೀವ್ರವಾಗಿ ನೋವಾಗಿದೆ. ಹಿಂಸೆಯ ಮೂಲಕ ಸಮಸ್ಯೆಗೆ ಪರಿಹಾರ ಎಂದಿಗೂ ನೀಡುವುದಿಲ್ಲ. ಭಾರತದ ಏಕತೆ, ಸುರಕ್ಷತೆ, ಸೌಹಾರ್ದತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ" ಎಂದು ರಜನಿ ಹೇಳಿದ್ದಾರೆ.

ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಸಾವು-ನೋವು ಸಂಭವಿಸಿದ ಬಳಿಕ ಮನನೊಂದು ರಜನಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

CAA protests: Rajinikanth expresses concern over violence in the country

ಆದರೆ, ಟ್ವಿಟ್ಟರಲ್ಲಿ #IStandWithRajnikanth ಹಾಗೂ #ShameOnYouSanghiRajini ಎಂಬ ಎರಡು ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.

CAA ಮತ್ತು NRC ವಿರುದ್ಧ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವುದರ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ಪ್ರತಿಭಟನೆ ಮಾಡುವುದು ಸಾಂವಿಧಾನಿಕ ಹಕ್ಕಿ, ರಾಜ್ಯ ಸರ್ಕಾರಗಳು ಜನರ ಈ ಹಕ್ಕನ್ನು ಹತ್ತಿಕ್ಕುತ್ತಿರುವುದು ಖಂಡನಾರ್ಹ ಹಾಗೂ ಕಾನೂನು ಅಸಮ್ಮತ ಎಂಬ ವಾದ ಕೇಳಿ ಬರುತ್ತಿದೆ.

ಇದು ಭಾರತವನ್ನು ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ, ಏರುತ್ತಿರುವ ಬೆಲೆ, ಕುಸಿಯುತ್ತಿರುವ ಆರ್ಥಿಕತೆ ಹಾಗೂ ಕೇಂದ್ರ ಸರ್ಕಾರದ ಸೋಲುಗಳ ಬಗ್ಗೆ ಜನರ ದಿಕ್ಕು ತಪ್ಪಿಸುವ ಹುನ್ನಾರ ಎಂಬ ಇನ್ನೊಂದು ವಾದವೂ ಕೇಳಿ ಬಂದಿದೆ.

English summary
Superstar Rajinikanth expressed concern over violence in various parts of the country over the Citizenship (Amendment) Act, saying violence and rioting cannot be a way to find solution to any issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X