ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಸ್ಫೋಟ: ಮದ್ವೆ ಕನಸು ಕಂಡಿದ್ದ ಟೆಕ್ಕಿ ಮಸಣ ಸೇರಿದ್ಳು

By Mahesh
|
Google Oneindia Kannada News

ಚೆನ್ನೈ, ಮೇ.1: ಟಾಟಾ ಕನ್ಸಲ್ಟೆನ್ಸಿ ಸಾಫ್ಟ್ ವೇರ್ ಸರ್ವೀಸಸ್ ಸಂಸ್ಥೆ ಉದ್ಯೋಗಿ ಪಿ ಸ್ವಾತಿ ಭಯೋತ್ಪಾದಕರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಮದುವೆ, ವಾರಾಂತ್ಯದಲ್ಲಿ ತನ್ನವರ ಜತೆ ಕಾಲ ಕಳೆಯುವ ನಿರೀಕ್ಷೆಯಲ್ಲಿದ್ದ ಸ್ವಾತಿ ಚೆನ್ನೈ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅಸುನೀಗಿದ್ದು ಎಲ್ಲೆಡೆಯಿಂದ ಆಕೆಯ ದುರಂತ ಸಾವಿಗೆ ಕಂಬನಿ ಹನಿ ಸುರಿಯುತ್ತಿದೆ.

ವಿಶ್ವ ಕಾರ್ಮಿಕ ದಿನಾಚರಣೆಯ ದಿನ ಬೆಳಗ್ಗೆ 7.30ರ ಸುಮಾರಿಗೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬೆಂಗಳೂರು-ಗುವಹಾಟಿ ಎಕ್ಸ್ ಪ್ರೆಸ್ ರೈಲಿನ ಎಸ್ 4 ಹಾಗೂ ಎಸ್ 5 ಕೋಚ್ ಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ.

ಗಾಯಗೊಂಡವರನ್ನು ಸುಮಂತ್ ದೇವನಾಥ್, ಸೈಫುಲ್ ಹಕ್, ಆಂಜನೇಯುಡು, ವಿಮಲ್ ಕುಮಾರ್ ದಾಸ್, ಶಗುನ್ ಕುಮಾರ್ ರೈ, ಅಲ್ತಾಫ್ ಖಾನ್, ಉಮಾ, ಜಿತೇಂದ್ರ ಮಹಾಂತೋ ದೆಕಾ, ಸಾರಿ, ಮುರಳಿ, ಬಿಜಯ್ ಕುಮಾರ್, ಸುದನ್ ಚಂದ್ ದೇವನಾಥ್, ಸುರೇಂದ್ರ ವರ್ಮ ಎಂದು ಗುರುತಿಸಲಾಗಿದೆ.

ಈ ಘಟನೆಯಲ್ಲಿ 14ಕ್ಕೂ ಅಧಿಕ ಜನ ತೀವ್ರವಾಗಿ ಗಾಯಗೊಂಡರೆ, ಸ್ವಾತಿ ಪರುಚುರಿ ಸಾವನ್ನಪ್ಪಿದ್ದರು. ಸ್ವಾತಿ ಕುಳಿತ್ತಿದ್ದ ಸೀಟಿನ ಕೆಳಗೆ ಟೈಮರ್ ಬಾಂಬ್ ಫಿಕ್ಸ್ ಮಾಡಲಾಗಿತ್ತು. ಜೀವನದ ಬಗ್ಗೆ ಅಪಾರ ಆಸೆ ನಿರೀಕ್ಷೆ ಹೊಂದಿದ್ದ 22 ವರ್ಷ ವಯಸ್ಸಿನ ಟಿಸಿಎಸ್ ಟೆಕ್ಕಿ ಸ್ವಾತಿ ಕನಸು ಅಲ್ಲಿಗೆ ನುಚ್ಚು ನೂರಾಗಿತ್ತು. ಈ ಸಾಲುಗಳನ್ನು ಓದುಗರು ಓದುವ ಹೊತ್ತಿಗೆ ಸ್ವಾತಿ ಮನೆ ಸೇರಬೇಕಿತ್ತು. ಆದರೆ, ವಿಧಿ ಬೇರೆಯದ್ದೇ ಕಥೆ ಬರೆದಿತ್ತು. ಸ್ವಾತಿ ನಿರೀಕ್ಷೆಯಲ್ಲಿದ್ದ ಅಜ್ಜಿ ರಾಜಲಕ್ಷ್ಮಿ ದುಃಖಭರಿತರಾಗಿ ಮೊಮ್ಮಗಳ ಬಗ್ಗೆ ಏನು ಹೇಳಿದರು ಮುಂದೆ ಓದಿ..

ನನ್ನ ಮೊಮ್ಮಗಳು ತುಂಬಾ ಮುಗ್ಧೆ : ರಾಜಲಕ್ಷ್ಮಿ

ನನ್ನ ಮೊಮ್ಮಗಳು ತುಂಬಾ ಮುಗ್ಧೆ : ರಾಜಲಕ್ಷ್ಮಿ

ದೇವರು ನಮಗೆ ಇಂಥ ಮೋಸ ಮಾಡಬಾರದಿತ್ತು. ಆಕೆ ತುಂಬಾ ಮುಗ್ಧೆ. ಮನೆ, ಮನೆ ಮಂದಿ ಬಗ್ಗೆ ತುಂಬಾ ಕಾಳಜಿ ವಹಿಸಿಕೊಳ್ಳುತ್ತಿದ್ದಳು. ಆಕೆಗೆ ಇಂಥ ಸಾವು ಬಂದಿರುವುದು ನಮಗೆಲ್ಲ ಆಘಾತವಾಗಿದೆ ಎಂದು ಗುಂಟೂರಿನಲ್ಲಿರುವ ಅಜ್ಜಿ ರಾಜಲಕ್ಷ್ಮಿ ಹೇಳಿದ್ದಾರೆ.

ಚೆನ್ನೈ ರಾಜಕೀಯ ಮುಖಂಡರ ಭೇಟಿ

ಚೆನ್ನೈ ರಾಜಕೀಯ ಮುಖಂಡರ ಭೇಟಿ

ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬೆಂಗಳೂರು-ಗುವಹಾಟಿ ಎಕ್ಸ್ ಪ್ರೆಸ್ ನಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಮೃತಪಟ್ಟ ಸ್ವಾತಿ ಮೃತದೇಹವನ್ನು ದರ್ಶಿಸಲು ಬಹುಸಂಖ್ಯೆಯಲ್ಲಿ ರಾಜಕೀಯ ಮುಖಂಡರು ಆಗಮಿಸುತ್ತಿದ್ದಾರೆ.

ಮಂತ್ರಿ ಬಿ ವಳರ್ ಮತಿ ಹಾಗೂ ಸಚಿವ ಅಬ್ದುಲ್ ರಕೀಮ್ ಅವರು ಸ್ವಾತಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಟಿಸಿಎಸ್ ಕಂಪನಿ ಇತ್ತೀಚೆಗೆ ಸೇರಿದ್ದು

ಟಿಸಿಎಸ್ ಕಂಪನಿ ಇತ್ತೀಚೆಗೆ ಸೇರಿದ್ದು

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ನಲ್ಲಿ ಬಿ.ಟೆಕ್ ಮುಗಿಸಿದ ಸ್ವಾತಿ ಪರುಚುತಿ, ಕಳೆದ ಡಿಸೆಂಬರ್ ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆಯ EIS ವಿಭಾಗದಲ್ಲಿ ಸಾಫ್ಟ್ ವೇರ್ ಪೋಗ್ರಾಮರ್ ಆಗಿ ಉದ್ಯೋಗ ಪಡೆದುಕೊಂಡಿದ್ದರು. ಜನವರಿಯಲ್ಲಿ ಮೊದಲ ಸಂಬಳ ಪಡೆದ ಸ್ವಾತಿ ಪ್ರತಿಭಾವಂತೆಯಾಗಿದ್ದರು.

ಮಧ್ಯಮವರ್ಗದ ಕುಟುಂಬದ ಯುವತಿ

ಮಧ್ಯಮವರ್ಗದ ಕುಟುಂಬದ ಯುವತಿ

ಮಧ್ಯಮವರ್ಗದ ಕುಟುಂಬದಿಂದ ಬಂದ ಸ್ವಾತಿ ಅವರು ಸ್ಕಾಲರ್ ಶಿಪ್ ಪಡೆದುಕೊಂಡೇ ವಿದ್ಯಾಭ್ಯಾಸ ಮಾಡಿದ ಪ್ರತಿಭಾವಂತೆ. ಸೋಮವಾರವಷ್ಟೇ ತತ್ಕಾಲ್ ಮೂಲಕ ಟಿಕೆಟ್ ಪಡೆದುಕೊಂಡ ಖುಷಿಯಲ್ಲಿ ಎಕ್ಸ್ ಪ್ರೆಸ್ ಹತ್ತಿದ್ದ ಸ್ವಾತಿ. ಮಂಗಳವಾರ ಸಂಜೆ ವೇಳೆಗೆ ಗುಂಟೂರಿನ ತನ್ನ ಮನೆಯಲ್ಲಿರಬೇಕಾಗಿತ್ತು.

ಮದುವೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಇತ್ತು

ಮದುವೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಇತ್ತು

ಸ್ವಾತಿ ಮದುವೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಇತ್ತು. ದೀರ್ಘ ವಾರಾಂತ್ಯ ಇರುವುದರಿಂದ ಕಷ್ಟ ಪಟ್ಟು ಟಿಕೆಟ್ ಸಂಪಾದಿಸಿದ್ದೇನೆ. ನಾಳೆ ಸಂಜೆಗೆ ಮನೆಗೆ ಬರುತ್ತೇನೆ ಎಂದು ನಿನ್ನೆ ಫೋನ್ ಮಾಡಿದ್ದಳು. ಪ್ರತಿ ದಿನ ನಮಗೆ ಫೋನ್ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ ಎಂದು ಅಜ್ಜಿ ರಾಜಲಕ್ಷ್ಮಿ ಕಣ್ಣೀರಿಡುತ್ತಾರೆ.

ಸ್ವಾತಿ ಬಗ್ಗೆ ಆಕೆ ಗೆಳೆತಿಯರ ಹೇಳಿಕೆ

ಸ್ವಾತಿ ಬಗ್ಗೆ ಆಕೆ ಗೆಳೆತಿಯರ ಹೇಳಿಕೆ

ಹೈದರಾಬಾದಿನ ಜೆಎನ್ ಟಿ ಯು ನಲ್ಲಿ ಹಾಗೂ ಕೆಎಲ್ ಪಿ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯಾಗಿದ್ದ ಸ್ವಾತಿ ಅವರು ಬರ್ಡ್ ವಾಚಿಂಗ್ ಹವ್ಯಾಸ ಕೂಡಾ ಬೆಳೆಸಿಕೊಂಡಿದ್ದರು. ತಕ್ಕಮಟ್ಟಿಗೆ ಫೋಟೋಗ್ರಾಫಿ ರುಚಿ ಕೂಡಾ ಇತ್ತು. ಆಕೆ ಪ್ರತಿಭಾವಂತೆ. ಮಿತಭಾಷಿ ಎಂದು ಆಕೆ ಗೆಳತಿಯರು ಹೇಳಿದ್ದಾರೆ. ಭಯೋತ್ಪಾದಕರ ದುಷ್ಕೃತ್ಯಕ್ಕೆ ಅಮಾಯಕಳೊಬ್ಬಳು ಬಲಿಯಾಗಿದ್ದಾಳೆ

ಸ್ವಾತಿ ಸಾವಿನ ಬಗ್ಗೆ ಸಾರ್ವಜನಿಕರ ಟ್ವೀಟ್

ಸ್ವಾತಿ ಸಾವಿನ ಬಗ್ಗೆ ಸಾರ್ವಜನಿಕರ ಸಂತಾಪ ಟ್ವೀಟ್

English summary
In a cruel twist of fate, 22-year-old techie Swathi fell victim to the twin bomb blasts on the Bangalore-Guwahati train just two months before she was to tie the nuptial knot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X