ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಸದ ಬುಗ್ಗೆಯಂತಿದ್ದ ಮಗುವೀಗ ಆಸ್ಪತ್ರೆಯ ಐಸಿಯುನಲ್ಲಿ

Google Oneindia Kannada News

ದನಶ್ರೀ ಬಹಳ ತುಂಟ ಹುಡುಗಿ. ಅವಳ ಆಟ ಹಾಗೂ ಒಡನಾಟ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಗಂಟೆಗಳ ಕಾಲ ಅವಳು ಆಡುತ್ತಲಿದ್ದರೂ ಯಾವುದೇ ರೀತಿಯ ದಣಿವನ್ನು ತೋರುತ್ತಿರಲಿಲ್ಲ. ಆದರೆ ಈಗ ಅವಳು ಮೊದಲಿನಂತೆ ಇಲ್ಲ, ಆಟವಾಡುತ್ತಲೂ ಇಲ್ಲ, ಸಂತೋಷ ನೀಡುತ್ತಲೂ ಇಲ್ಲ. ಇರುವುದು ಆಸ್ಪತ್ರೆಯಲ್ಲಿ.

ಅವಳಿಲ್ಲದ ಮನೆ ಒಂದು ಸ್ಮಶಾನದಂತೆ ಭಾಸವಾಗುತ್ತಿದೆ. ಅವಳ ಒಂದು ನಗುವು ನಮಗೆ ಸಂತೋಷ ಹಾಗೂ ತೃಪ್ತಿಯ ಭಾವನೆಯನ್ನು ನೀಡುತ್ತಿತ್ತು. ಅವಳ ಒಡನಾಟ ನಮಗೆ ಸದಾ ಕಾಲ ಬೇಕು, ಆಕೆ ಬೇಗ ಗುಣಮುಖವಾಗಿ ಸಂತಸ ನೀಡಬೇಕು ಎಂದು ವಿಶ್ವಾಸಪ್ರಿಯ ಅವರು ಕಣ್ಣೀರು ಇಡುತ್ತಾರೆ.

ಕಳೆದ 5 ತಿಂಗಳಿಂದ ದನಶ್ರೀ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ವರ್ಷಗಳ ಕಾಲ ಮಗುವನ್ನು ಪಡೆಯಬೇಕು ಎಂದು ಹಂಬಲಿಸುತ್ತಿದ್ದ ವಿಶ್ವಾಸ ಪ್ರಿಯಾ ಅವರಿಗೆ ದನಶ್ರೀ ಮಗಳಾಗಿ ಹುಟ್ಟಿ ಸಂತೋಷವನ್ನು ತಂದುಕೊಟ್ಟಿದ್ದಳು. 34 ವರ್ಷದಲ್ಲಿ ಅವಳನ್ನು ಮಗಳಾಗಿ ಪಡೆದ ನಮಗೆ ದೇವರು ಆಶೀರ್ವದಿಸಿದ್ದಾನೆ ಎಂದು ಅಂದುಕೊಂಡಿದ್ದವು. ಅಲ್ಲದೆ ತುಂಬಾ ಖುಷಿಯನ್ನು ಅನುಭವಿಸುತ್ತಿದ್ದೆವು. ಆದರೆ ಇದೀಗ ದೇವರು ನಮಗೆ ಕಷ್ಟವನ್ನು ನೀಡಿದ್ದಾನೆ. ಇದೀಗ ನನ್ನ ಮಗು ಶ್ವಾಸನಾಳದ ಕವಾಟದ ಕುಸಿತದಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

ದನಶ್ರೀಯ ತಾಯಿ ಹೇಳುವ ಪ್ರಕಾರ, ಮಗುವು 7 ತಿಂಗಳಗಳ ಕಾಲ ಆರೋಗ್ಯವಂತ ಮಗುವಾಗಿತ್ತು. ಒಂದು ದಿನ ದನಶ್ರೀ ವಾಂತಿಯನ್ನು ಮಾಡಲು ಪ್ರಾರಂಭಿಸಿದಳು. ಆಗ ಉಸಿರಾಟದ ತೊಂದರೆಯನ್ನು ಅನುಭವಿಸಿದಳು. ಇದೇನೋ ಒಂದು ಬಗೆಯ ಗಂಭೀರ ಸಮಸ್ಯೆ ಎನ್ನುವುದು ನಮ್ಮ ಗಮನಕ್ಕೆ ಬಂತು. ಜೊತೆಗೆ ಮಗು ನೋವಿನಿಂದ ಅಳಲು ಪ್ರಾರಂಭಿಸಿದಳು. ನಮ್ಮ ತವರು ಮನೆಯಾದ ತಿರುಪೂರ್ನಿಂದ ಎರಡು ಗಂಟೆಗಳ ಕಾಲ ದೂರ ಇರುವ ಸೇಲಂನ ಆಸ್ಪತ್ರೆಗೆ ಕರೆದೊಯ್ದೆವು.

ದನಶ್ರೀಯ ಆರೋಗ್ಯ ತಪಾಸಣೆ ಮಾಡಿದ ಬಳಿಕ 2 ತಿಂಗಳಗಳ ಕಾಲ ಐಸಿಯುದಲ್ಲಿ ಇಡಲಾಯಿತು. ಜೊತೆಗೆ 3 ಶಸ್ತ್ರಚಿಕಿತ್ಸೆಗಳನ್ನು ನಡೆಸಿದರೆ ಮಾತ್ರ ಮಗು ಆರೋಗ್ಯದಿಂದ ಇರಲು ಸಾಧ್ಯ ಎಂದು ಹೇಳಿದ್ದಾರೆ. ಈಗ ಅವಳ ಚಿಕಿತ್ಸೆಗಾಗಿ ಸುಮಾರು 15-20 ಲಕ್ಷ ರೂಪಾಯಿ ಬೇಕಾಗಿದೆ. ಈಗಾಗಲೇ ಸ್ವಲ್ಪ ಹಣವನ್ನು ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಸಹಾಯದಿಂದ ಪಡೆದುಕೊಂಡಿದ್ದೇವೆ. ಆದರೆ ಅವಳ ಚಿಕಿತ್ಸೆಗೆ ಸಾಕಾಗುವಷ್ಟು ಹಣದ ಸಂಗ್ರಹ ಆಗಲಿಲ್ಲ. ನಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರದೆ ಇರುವುದರಿಂದ ಅಷ್ಟು ಹಣವನ್ನು ನಾವು ಭರಿಸಲು ಸಾಧ್ಯವಾಗುತ್ತಿಲ್ಲ.

ದನಶ್ರೀಗೆ ನಿತ್ಯವೂ ಆಮ್ಲಜನಕದ ಬೆಂಬಲ ಕೊಡಬೇಕಾಗಿದೆ. ಜೊತೆಗೆ ಎರಡು ತಿಂಗಳಗಳ ಕಾಲ ಆಸ್ಪತ್ರೆಯಲ್ಲಿಯೇ ಇಡಬೇಕಾಗುವುದು ಎಂದು ವೈದ್ಯರು ಹೇಳಿದ್ದಾರೆ. ಅವಳ ಹೆಚ್ಚುವರಿ ಚಿಕಿತ್ಸೆಗಾಗಿ ಇನ್ನೂ 5 ಲಕ್ಷ ರೂಪಾಯಿಯ ಅಗತ್ಯವಿದೆ. ಹಾಗಾಗಿ ದನಶ್ರೀಯ ಕುಟುಂಬದವರು ಜನರಲ್ಲಿ ಸಹಾಯವನ್ನು ಯಾಚಿಸುತ್ತಿದ್ದಾರೆ. ನೀವು ದನಶ್ರೀಯ ಚಿಕಿತ್ಸೆಗೆ ಸಹಾಯ ಮಾಡಲು ಸಹಾಯ ನಿಧಿಗೆ ಹಣವನ್ನು ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X