ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶವರ್ಮಾ ತಿನ್ನಬೇಡಿ, ಅದು ನಮ್ಮ ಆಹಾರ ಅಲ್ಲ: ತಮಿಳುನಾಡು ಆರೋಗ್ಯ ಸಚಿವ

|
Google Oneindia Kannada News

ಚೆನ್ನೈ, ಮೇ10: ಮಾಂಸಾಹಾರಿಯ ಆಹಾರ ಶವರ್ಮಾ ಪುಡ್ ತಿಂದು ಆಸ್ಪತ್ರೆಗೆ ದಾಖಲಾಗಿದ್ದ ಮೂವರ ವಿದ್ಯಾರ್ಥಿಗಳ ಪ್ರಕರಣದ ಬಳಿಕ ತಮಿಳುನಾಡಿನ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಂಸಾಹಾರಿ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಶವರ್ಮಾ ತಿನ್ನಬೇಡಿ ಎಂದು ಜನರಿಗೆ ಜನರಿಗೆ ಸಲಹೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿರುವ ತಮಿಳುನಾಡು ಆರೋಗ್ಯ ಸಚಿವ, "ಶವರ್ಮಾ ಮಾಂಸಾಹಾರಿ ಆಹಾರವು ಪಾಶ್ಚಿಮಾತ್ಯ ಆಹಾರವಾಗಿದೆ. ಇಲ್ಲಿ ನಮ್ಮಲ್ಲಿ ಸ್ಟೈಲಿಶ್ ಪುಡ್ ಎಂದು ಈ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಇಂತಹ ಷಾವರ್ಮಾ ಪದಾರ್ಥಗಳಂತಹ ಆಹಾರವನ್ನು ಸೇವಿಸಬೇಡಿ. ನಮ್ಮಲ್ಲಿ ದೇಶೀಯವಾಗಿ ಅನೇಕ ಅಹಾರ ಪದಾರ್ಥಗಳಿವೆ. ಇಂತಹ ಆಹಾರವನ್ನು ತಿನ್ನುವುದುರಿಂದ ಆರೋಗ್ಯವಾಗಿ ಬದುಕುಬಹುದು," ಎಂದು ಅವರು ಕರೆ ನೀಡಿದ್ದಾರೆ.

ಶವರ್ಮಾ ಸೇವಿಸಿದ ತಂಜಾವೂರಿನ ಒರತನಾಡುನಲ್ಲಿರುವ ಪಶುವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 3 ಜನ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರ ಬೆನ್ನಲ್ಲೇ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

Avoid eating shawarma:TN Health Minister says after food poisoning cases

ಶವರ್ಮಾ ಅರೇಬಿಕ್ ಮೂಲದ ಖಾದ್ಯವಾಗಿದ್ದು, ಮ್ಯಾರಿನೇಡ್ ಮಾಂಸದ ತೆಳುವಾಗಿ ಕತ್ತರಿಸಿದ ತುಂಡುಗಳನ್ನು ಫ್ಲಾಟ್ ಬ್ರೆಡ್ ಆಗಿ ಸುತ್ತಿಕೊಂಡು ತಿನ್ನಲಾಗುತ್ತದೆ.

"ಶಾವರ್ಮಾ ಪಾಶ್ಚಿಮಾತ್ಯ ಆಹಾರ. ಕೊಯ್ದ ಮಾಂಸ ವಿದೇಶದಲ್ಲಿ ಹಾಳಾಗುವುದಿಲ್ಲ. ಏಕೆಂದರೆ ಆ ದೇಶಗಳಲ್ಲಿ ತಾಪಮಾನವು ಶೂನ್ಯಕ್ಕಿಂತ ಕೆಳಕ್ಕೆ ಹೋಗಬಹುದು. ಆದರೆ ಸರಿಯಾದ ಘನೀಕರಿಸುವ ತಂತ್ರಜ್ಞಾನವಿಲ್ಲದೆ ಅದು ಹಾಳಾಗುತ್ತದೆ. ಈ ಹಾಳಾದ ಆಹಾರಗಳನ್ನು ಸೇವಿಸುವುದರಿಂದ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ" ಎಂದು ಆರೋಗ್ಯ ಸುದ್ದಿಗಾರರಿಗೆ ತಿಳಿಸಿದರು.

Avoid eating shawarma:TN Health Minister says after food poisoning cases

ಕೇರಳದಲ್ಲೂ ಅಸ್ವಸ್ಥರಾಗಿದ್ದರು:
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಮೇ 1ರಂದು ಶವರ್ಮಾ ಸೇವಿಸಿ 58 ಮಂದಿ ಆಸ್ವಸ್ಥಗೊಂಡಿದ್ದರು ಹಾಗೂ ಯುವತಿಯೊಬ್ಬಳು ಸಾವನಪ್ಪಿದ ಘಟನೆ ನಡೆದಿತ್ತು.

ಶವರ್ಮಾ ತಿನ್ನುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಯುವಕರಲ್ಲಿ ಆಹಾರವು ಜನಪ್ರಿಯವಾಗಿದೆ. ಹಾಗಾಗಿ ಮಾರಾಟಗಾರರು ಈ ಆಹಾರವನ್ನು ಮಾರಾಟ ಮಾಡುತ್ತಾರೆ. ಆದರೆ ನಾವೇ ಈ ಆಹಾರವನ್ನು ತಿನ್ನುವುದನ್ನು ಬಿಟ್ಟರೆ ಶವರ್ಮಾ ಪುಡ್ ಮಾರಾಟ ನಿಲ್ಲುತ್ತದೆ ಹಾಗಾಗಿ ಈ ಆಹಾರದ ಬಗ್ಗೆ ಎಲ್ಲರು ಜಾಗೃತಿವಹಿಸಬೇಕೆಂದು ಅವರು ಆರೋಗ್ಯ ಸಲಹೆ ನೀಡಿದರು.

English summary
The minister’s statement came days after three students were admitted to a hospital in Thanjavur due to food poisoning after eating shawarma,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X