ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮತ್ರ ದುಡ್ಡಿಲ್ಲ, ನಮ್ಮನ್ನು ಕರೆಸಿಕೊಳ್ಳಿ: ಚೆನ್ನೈನಲ್ಲಿ ಅಸ್ಸಾಂ ಜನರು ಮನವಿ

|
Google Oneindia Kannada News

ಚೆನ್ನೈ, ಮೇ 14: ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರ ಬದುಕು ಭಾರಿ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಕೈಯಲ್ಲಿ ಕೆಲಸ ಇಲ್ಲ, ದುಡ್ಡು ಇಲ್ಲ, ಒಂದೊತ್ತಿನ ಊಟಕ್ಕೂ ವ್ಯವಸ್ಥೆ ಇಲ್ಲ. ಇದೆಲ್ಲದರ ನಡುವೆ ಊರು ಸೇರಬೇಕೆಂಬ ಹಠ.

Recommended Video

ವಿದೇಶದಲ್ಲಿ ಸಿಲುಕಿದ್ದ ನಟಿ ಜಯಮಾಲಾ ಮಗಳ ಕಥೆ ಏನಾಯ್ತು ಗೊತ್ತಾ..? | Jayamala daughter return to Bangalore

ಈ ಕಡೆ ಇರೋದಕ್ಕೆ ಆಗದೆ, ಆ ಕಡೆ ಊರಿಗೂ ಹೋಗಲು ಸಾಧ್ಯವಾಗದೆ ರಸ್ತೆಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಒದ್ದಾಡುವಂತಾಗಿದೆ.

ಮಾಸ್ಕ್ ಇಲ್ಲ, ಅಂತರವೂ ಇಲ್ಲ: ಜೈನ ಮುಖಂಡನ ಸ್ವಾಗತಕ್ಕೆ ಜನವೋ ಜನಮಾಸ್ಕ್ ಇಲ್ಲ, ಅಂತರವೂ ಇಲ್ಲ: ಜೈನ ಮುಖಂಡನ ಸ್ವಾಗತಕ್ಕೆ ಜನವೋ ಜನ

ಚೆನ್ನೈನಲ್ಲಿ ನೂರಾರು ಸಂಖ್ಯೆಯ ಅಸ್ಸಾಂ ಜನರು ತಮ್ಮ ರಾಜ್ಯಕ್ಕೆ ಹೋಗಲಾಗದೆ ಕಷ್ಟ ಪಡುತ್ತಿದ್ದಾರೆ. ತಮಿಳುನಾಡು ಸರ್ಕಾರವೂ ಈ ಬಗ್ಗೆ ಯಾವುದೇ ಸಹಾಯ ಮಾಡ್ತಿಲ್ಲ ಎಂಬ ಆರೋಪವೂ ಕೇಳಿ ಬರ್ತಿದೆ.

Assamese Migrant Workers Appeal Govt To Facilitate Their Return To State

ತಮ್ಮ ಲಗೇಜ್ ಎಲ್ಲವೂ ಪ್ಯಾಕ್ ಮಾಡಿಕೊಂಡು ಊರಿಗೆ ಹೋಗಲು ಸಜ್ಜಾಗಿ ನಿಂತಿರುವ ಜನರು, ಅಸ್ಸಾಂ ಸರ್ಕಾರಕ್ಕೆ ಮನವಿ ಮಾಡಿದೆ. ''ನಮ್ಮತ್ರ ದುಡ್ಡಿಲ್ಲ, ಕೇಂದ್ರ ಸರ್ಕಾರ ಮತ್ತು ಅಸ್ಸಾಂ ಸರ್ಕಾರ ದಯವಿಟ್ಟು ನಮ್ಮ ಬಗ್ಗೆ ಯೋಚನೆ ಮಾಡಿ. ನಮಗಾಗಿ ಏನಾದರೂ ಮಾಡಿ'' ಎಂದು ವಿನಂತಿಸಿಕೊಂಡಿದ್ದಾರೆ.

ದೇಶಾದ್ಯಂತ ವಲಸೆ ಕಾರ್ಮಿಕರು ಸಂಚರಿಸಲು ರೈಲ್ವೆ ಇಲಾಖೆ ಶ್ರಮಿಕ್ ರೈಲುಗಳಿಗೆ ಅವಕಾಶ ಕೊಟ್ಟಿದೆ. ಆದರೆ, ಟಿಕೆಟ್ ಬುಕ್ ಮಾಡಲು ದುಡ್ಡು ಇಲ್ಲ ಅಂದ್ರೆ ಏನು ಮಾಡೋದು? ದುಡ್ಡಿಲ್ಲದ ಅನೇಕ ವಲಸೆ ಕಾರ್ಮಿಕರು ಏನು ಮಾಡಬೇಕು? ಎನ್ನುವುದು ಯೋಚಿಸಬೇಕಿದೆ.

English summary
Assamese migrant workers in Chennai appeal to the Assam government to facilitate their return to the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X