ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು; ನೀಟ್ ವಿರೋಧಿ ಮಸೂದೆ ರಾಷ್ಟ್ರಪತಿಗೆ ರವಾನೆ

|
Google Oneindia Kannada News

ಚೆನ್ನೈ, ಮೇ 4: ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (NEET) ವ್ಯಾಪ್ತಿಯಿಂದ ತಮಿಳುನಾಡು ರಾಜ್ಯಕ್ಕೆ ವಿನಾಯಿತಿ ನೀಡುವ ಮಸೂದೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಪ್ಪಿಗೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ ನೀಟ್ ವಿರೋಧಿ ಮಸೂದೆಯನ್ನು ರಾಜ್ಯಪಾಲ ಆರ್‌. ಎನ್. ರವಿ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ರವಾನಿಸಿದ್ದಾರೆ. ಈ ಕುರಿತು ಬುಧವಾರ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹೇಳಿಕೆ ನೀಡಿದ್ದಾರೆ.

NEET 2022 : ನೀಟ್ ನೋಂದಣಿ ಪ್ರಕ್ರಿಯೆ ಮುನ್ನ ಈ ಮಾಹಿತಿ ಗೊತ್ತಿರಲಿ!NEET 2022 : ನೀಟ್ ನೋಂದಣಿ ಪ್ರಕ್ರಿಯೆ ಮುನ್ನ ಈ ಮಾಹಿತಿ ಗೊತ್ತಿರಲಿ!

"ರಾಷ್ಟ್ರಪತಿಗಳ ಒಪ್ಪಿಗೆಯನ್ನು ಶಕ್ತಗೊಳಿಸಲು ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರ ಕಾರ್ಯದರ್ಶಿಯಿಂದ ತಮಗೆ ಈ ಮಾಹಿತಿ ನೀಡಲಾಗಿದೆ" ಎಂದು ವಿಧಾನಸಭೆಗೆ ಮುಖ್ಯಮಂತ್ರಿಗಳು ತಿಳಿಸಿದರು.

Anti-NEET Bill: Tamil Nadu Governor sends bill To Presidential Assent says MK Stalin

ನೀಟ್ ವಿನಾಯಿತಿಗಾಗಿ ಜಂಟಿ ಪ್ರಯತ್ನ: "ನೀಟ್ ವಿನಾಯಿತಿಗಾಗಿ ನಮ್ಮ ಹೋರಾಟವನ್ನು ಮುಂದುವರಿಸಬೇಕಿದೆ. ಮುಂದಿನ ಹಂತದಲ್ಲಿ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆದುಕೊಳ್ಳಲು ಕೇಂದ್ರವನ್ನು ಒತ್ತಾಯಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಜಂಟಿಯಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಿದೆ" ಎಂದು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹೇಳಿದರು.

Anti-NEET Bill: Tamil Nadu Governor sends bill To Presidential Assent says MK Stalin

ಎರಡನೇ ಬಾರಿ ಅಂಗೀಕಾರ; ಕಳೆದ ವರ್ಷ ವಿಧಾನಸಭೆಯಲ್ಲಿ ಇತ್ಯರ್ಥಗೊಂಡಿದ್ದನ್ನು ರಾಜ್ಯಪಾಲರು ತಿರಸ್ಕಾರ ಮಾಡಿದ್ದರು. ನಂತರ ವಿಧಾನಸಭೆಯುಲ್ಲಿ ಡಿಎಂಕೆ ಸರ್ಕಾರವು ಈ ವರ್ಷದ ಫೆಬ್ರವರಿಯಲ್ಲಿ ತಿಂಗಳಿನಲ್ಲಿ ಮಸೂದೆಯನ್ನು ಎರಡನೇ ಬಾರಿಗೆ ಅಂಗೀಕರಿಸಿತ್ತು.

English summary
Anti-NEET Bill: Tamil Nadu Governor Has sends bill To Centre For Presidential Assent, says chief minister M. K. Stalin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X