• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್

|

ಚೆನ್ನೈ, ಸೆ. 12: ತಮಿಳುನಾಡಿನ 80 ವರ್ಷ ವಯಸ್ಸಿನ ಅಜ್ಜಿಯೊಬ್ಬರ ಬಾಳಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಮಾಡಿದ ಟ್ವೀಟ್ ಇಂದು ಬೆಳಕು ಮೂಡಿಸಿದೆ. ಕಳೆದ 30 ವರ್ಷಗಳಿಂದ 1 ರು ಗಳಿಗೆ 1 ಇಡ್ಲಿಯಂತೆ ಮಾರಾಟ ಮಾಡುತ್ತಾ ಬಡವರ, ದುರ್ಬಲರ ಪಾಲಿಗೆ 'ಆನ್ನಪೂರ್ಣೆ' ಯಾಗಿದ್ದ ಅಜ್ಜಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದರು.

ಕಟ್ಟಿಗೆ ಬಳಸಿ ಅಡುಗೆ ಮಾಡುವ ಅಜ್ಜಿ ಕಮಲಾತಾಳ್ ಅವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿದ್ದ ಪರಿಚಯಾತ್ಮಕ ವಿಡಿಯೋವೊಂದನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದರು.

ಅಜ್ಜಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಪೊಲೀಸರು: ಮಾನವೀಯ ಘಟನೆಅಜ್ಜಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಪೊಲೀಸರು: ಮಾನವೀಯ ಘಟನೆ

ಜೊತೆಗೆ ಆಕೆ ಬಳಸುವ ಕಟ್ಟಿಗೆ ಅಡುಗೆ ವಿಧಾನ ಬದಲಾಯಿಸಬೇಕಿದೆ. ಯಾರಾದರೂ ಆಕೆಯ ಬಗ್ಗೆ ತಿಳಿದಿದ್ದಾರೆ ನನಗೆ ತಿಳಿಸಿ, ನಾನು ಆಕೆಯ ಉದ್ಯಮದಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ. ಆಕೆಗೆ ಎಲ್ ಪಿಜಿ ಸ್ಟವ್ ನೀಡಬೇಕಿದೆ ಎಂದು ಸೆಪ್ಟೆಂಬರ್ 10ರಂದು ಟ್ವೀಟ್ ಮಾಡಿದ್ದರು.

ಕಮಲಾಪಾಟಿ(ಕಮಲಾ ಅಜ್ಜಿ) ಎಂದೇ ಕೊಯಮತ್ತೂರಿನ ವಡಿವೇಲಂ ಪಾಲಯಂ ಗ್ರಾಮಸ್ಥರಿಗೆ ಚಿರಪರಿಚಿತರಾಗಿದ್ದಾರೆ. ಎಲ್ ಪಿಜಿ ಸ್ಟವ್ ಸಿಕ್ಕ ಬಳಿಕ ಅಜ್ಜಿ ಮೊಗದಲ್ಲೂ ಸಂತಸ ಕಂಡು ಬಂದಿದೆ.

ಕಟ್ಟಿಗೆ ಬಳಸಿ ಅಡುಗೆ ಮಾಡುತ್ತಿದ್ದ ಅಜ್ಜಿ

ಕಟ್ಟಿಗೆ ಬಳಸಿ ಅಡುಗೆ ಮಾಡುವ ಅಜ್ಜಿ ಕಮಲಾತಾಳ್ ಅವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿದ್ದ ಪರಿಚಯಾತ್ಮಕ ವಿಡಿಯೋವೊಂದನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದರು. ಜೊತೆಗೆ ಆಕೆ ಬಳಸುವ ಕಟ್ಟಿಗೆ ಅಡುಗೆ ವಿಧಾನ ಬದಲಾಯಿಸಬೇಕಿದೆ. ಯಾರಾದರೂ ಆಕೆಯ ಬಗ್ಗೆ ತಿಳಿದಿದ್ದಾರೆ ನನಗೆ ತಿಳಿಸಿ, ನಾನು ಆಕೆಯ ಉದ್ಯಮದಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ. ಆಕೆಗೆ ಎಲ್ ಪಿಜಿ ಸ್ಟವ್ ನೀಡಬೇಕಿದೆ ಎಂದು ಸೆಪ್ಟೆಂಬರ್ 10ರಂದು ಟ್ವೀಟ್ ಮಾಡಿದ್ದರು.

ಸ್ಟವ್ ಕೊಟ್ಟ ಬಿಪಿಸಿಎಲ್

ಆನಂದ್ ಮಹೀಂದ್ರಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಅಜ್ಜಿಯನ್ನು ಭೇಟಿ ಮಾಡಿ ಎಲ್ ಪಿ ಜಿ ಸಿಲಿಂಡರ್ ಸ್ಟವ್ ನೀಡಿರುವುದಾಗಿ ಪ್ರತಿಕ್ರಿಯಿಸಿದೆ.

ಎಲ್ ಪಿಜಿ ಕನೆಕ್ಷನ್ ಇರುವ ಸ್ಟವ್

ಎಲ್ ಪಿಜಿ ಕನೆಕ್ಷನ್ ಇರುವ ಸ್ಟವ್

ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯ ಅಧಿಕಾರಿಗಳು ಅಜ್ಜಿಯನ್ನು ಹುಡುಕಿಕೊಂಡು ಬಂದಿದ್ದಾರೆ. ಎಲ್ ಪಿಜಿ ಕನೆಕ್ಷನ್ ಇರುವ ಸ್ಟವ್ ನೀಡಿದ್ದಾರೆ.

ಕಮಲಾಪಾಟಿಗೆ ಸಂತಸ

ಕಮಲಾಪಾಟಿ(ಕಮಲಾ ಅಜ್ಜಿ) ಎಂದೇ ಕೊಯಮತ್ತೂರಿನ ವಡಿವೇಲಂ ಪಾಲಯಂ ಗ್ರಾಮಸ್ಥರಿಗೆ ಚಿರಪರಿಚಿತರಾಗಿದ್ದಾರೆ. ಎಲ್ ಪಿಜಿ ಸ್ಟವ್ ಸಿಕ್ಕ ಬಳಿಕ ಅಜ್ಜಿ ಮೊಗದಲ್ಲೂ ಸಂತಸ ಕಂಡು ಬಂದಿದೆ.

ಸ್ಥಳೀಯರ ಪ್ರಕಾರ, ಸುತ್ತಮುತ್ತಲ ಗ್ರಾಮಸ್ಥರು ಊಟದ ಸಮಯಕ್ಕೆ ಸರಿಯಾಗಿ ಅಜ್ಜಿ ಅಂಗಡಿ ಬಳಿಗೆ ಬರುತ್ತಾರೆ. 10 ಇಡ್ಲಿ ತಿಂದು 5 ರು ಕೊಟ್ಟು ಹೋಗುವವರು ಇದ್ದಾರೆ. ದಿನಕ್ಕೆ 1000 ಇಡ್ಲಿ ಮಾಡುವ ಅಜ್ಜಿ ಈ ಮುಂಚೆ 50 ಪೈಸೆ ಒಂದು ಇಡ್ಲಿಯಂತೆ ಮಾರುತ್ತಿದ್ದರು. ಈಗ 1 ರು ನಂತೆ ನೀಡುತ್ತಿದ್ದಾರೆ. ಇಡ್ಲಿ, ವಡೆ, ಬೊಂಡಾ, ಸಾಂಬಾರು, ಚಟ್ನಿ ಮಾರುತ್ತಿದ್ದಾರೆ.

ಬಿಪಿಸಿಎಲ್ ನಿಂದ ಸ್ಟವ್ ಸಿಕ್ಕರೆ

ಬಿಪಿಸಿಎಲ್ ನಿಂದ ಸ್ಟವ್ ಸಿಕ್ಕರೆ

ಬಿಪಿಸಿಎಲ್ ನಿಂದ ಸ್ಟವ್ ಸಿಕ್ಕರೆ, ಎಚ್ ಪಿ ಸಿಎಲ್ ನಿಂದ ತವಾ, ವೆಟ್ ಗ್ರೈಂಡರ್ ನೀಡಲಾಗಿದೆ. ಈ ಬಗ್ಗೆ ಇಂಧನ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಟ್ವೀಟ್ ಮಾಡಿ, ಕಮಲಾತಾಳ್ ರಂಥ ಪರಿಶ್ರಮ ಜೀವಿಗಳಿಗೆ ಒಎಂಸಿ ನೆರವಾಗಿದ್ದಕ್ಕೆ ಸಂತಸವಾಗುತ್ತಿದೆ. ಸಮಾಜ ಇಂಥ ಪರಿಶ್ರಮಿಗಳ ಸಬಲೀಕರಣಕ್ಕೆ ಕೈ ಜೋಡಿಸಬೇಕು ಎಂದಿದ್ದಾರೆ.

English summary
Businessman Anand Mahindra tweet has brought LPG and bright life to 80 year old woman who sells idlies for Re 1 each. Both HPCL and BPCL came forward to offer LPG connection to her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X