ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ಸಮಯದಲ್ಲಿ ಬಡವರ ಬಂಧುವಾದ ಅಮ್ಮ ಕ್ಯಾಂಟೀನ್‌

|
Google Oneindia Kannada News

ಚೆನ್ನೈ, ಏಪ್ರಿಲ್‌ 23: ಲಾಕ್‌ಡೌನ್‌ನಿಂದ ಒಂದು ಹೊತ್ತಿನ ಊಟಕ್ಕೂ ಸಾಕಷ್ಟು ಮಂದಿ ಕಷ್ಟಪಡುತ್ತಿದ್ದಾರೆ. ಅಂತಹವರ ನೆರವಿಗೆ ಚೆನ್ನೈ ಪಾಲಿಕೆ ಮುಂದಾಗಿದ್ದು, ಅಮ್ಮ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡುವುದಾಗಿ ತಿಳಿಸಿದೆ.

ಚೆನ್ನೈನಲ್ಲಿ 407 ಅಮ್ಮ ಕ್ಯಾಂಟೀನ್‌ಗಳು ಇದ್ದು, ಎಲ್ಲ ಕಡೆಯೂ ಬಡವರಿಗೆ ಉಚಿತ ಊಟ ಸಿಗುವ ವ್ಯವಸ್ಥೆ ಮಾಡಲಾಗಿದೆ. ಪೊಂಗಲ್, ಚಪಾತಿ, ರೈಸ್‌ ಬಾತ್‌, ಇಡ್ಲಿ ಈ ಆಹಾರ ಪದಾರ್ಥ ಎಲ್ಲ ಅಮ್ಮ ಕ್ಯಾಂಟೀನ್‌ಗಳಲ್ಲಿ ದೊರೆಯಲಿದೆ. ಈ ಮೂಲಕ ನಿರಾಶ್ರಿತರ ಹೊಟ್ಟೆ ತುಂಬಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ ನೀಡಿ ಎಎಪಿ ಒತ್ತಾಯಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ ನೀಡಿ ಎಎಪಿ ಒತ್ತಾಯ

ಚೆನ್ನೈ ಪಾಲಿಕೆ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸಾರ್ವಜನಿಕರಿಂದ ಹಾಗೂ ಕಂಪನಿಗಳಿಂದ ದೇಣಿಗೆ ಪಡೆದಿತ್ತು. ಈ ದೇಣಿಗೆಯ ಹಣವನ್ನು ಈಗ ಅಮ್ಮ ಕ್ಯಾಂಟೀನ್‌ಗೆ ಬಳಕೆ ಮಾಡಲಾಗುತ್ತಿದೆ. ಲಾಕ್‌ಡೌನ್ ಮುಗಿಯುವವರೆಗೆ ಅಂದರೆ, ಮೇ 3ರ ತನಕ ಉಚಿತವಾಗಿ ಆಹಾರ ದೊರೆಯಲಿದೆ.

Amma Canteens To Provide Free Food Till The Lockdown Ends

ಅಮ್ಮ ಕ್ಯಾಂಟೀನ್‌ನಲ್ಲಿ ಒಂದು ದಿನಕ್ಕೆ ಆಹಾರ ನೀಡಲು 17 ಲಕ್ಷ ಖರ್ಚಾಗುತ್ತದೆ. ದೇಣಿಗೆ ಹಣದಿಂದ ಲಾಕ್‌ಡೌನ್ ಮುಗಿಯುವವರೆಗೆ ಸುಲಭವಾಗಿ ಉಚಿತ ಊಟ ನೀಡಬಹುದು ಎಂದು ಚೆನ್ನೈ ಪಾಲಿಕೆ ತಿಳಿಸಿದೆ.

ತಮಿಳುನಾಡಿನಲ್ಲಿ 1204 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 12 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ.

English summary
Amma Canteens to provide free food till May 3 in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X