ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಗಂಟೆ 50 ನಿಮಿಷದಲ್ಲಿ 190 ಕಿ.ಮೀ ತಲುಪಿದ ಆಂಬ್ಯುಲೆನ್ಸ್ ಚಾಲಕ

|
Google Oneindia Kannada News

ತಮಿಳುನಾಡು, ಮಾರ್ಚ್ 4: ಮಂಗಳೂರಿನಿಂದ ಬೆಂಗಳೂರಿಗೆ 400 ಕಿ.ಮೀ ದೂರವನ್ನು 4 ಗಂಟೆ 20 ನಿಮಿಷದಲ್ಲಿ ತಲುಪಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ರಕ್ಷಿಸುವಲ್ಲಿ ಆಂಬ್ಯುಲೆನ್ಸ್ ಚಾಲಕ ಯಶಸ್ವಿಯಾಗಿದ್ದರು.

ಇದೀಗ, ಇಂತಹದ್ದೇ ಮತ್ತೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ 25 ವರ್ಷದ ಯುವತಿ ತಂಜಾವೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು. ಆ ಯುವತಿಯ ಅಂಗಾಂಗವನ್ನು ದಾನ ಮಾಡಲು ಪೋಷಕರು ನಿರ್ಧರಿಸಿದರು.

ಮಗುವಿನ ಜೀವ ರಕ್ಷಣೆಗೆ ಬೆಳಗಾವಿಯಲ್ಲಿ ಝೀರೋ ಟ್ರಾಫಿಕ್ಮಗುವಿನ ಜೀವ ರಕ್ಷಣೆಗೆ ಬೆಳಗಾವಿಯಲ್ಲಿ ಝೀರೋ ಟ್ರಾಫಿಕ್

ಮಧುರೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಲಿವರ್ ಕಸಿ ಮಾಡುವ ಅವಶ್ಯಕತೆ ಇದೆ ಎಂಬ ಸುದ್ದಿ ತಿಳಿದ ಆಸ್ಪತ್ರೆಯ ಸಿಬ್ಬಂದಿ ಲಿವರ್ ಸಾಗಿಸಲು ಮುಂದಾದರು. 190 ಕಿಲೋಮೀಟರ್ ದೂರವನ್ನು ವೇಗವಾಗಿ ತಲುಪಿಸಲು ಎಲ್ಲ ಸಿದ್ಧತೆ ಮಾಡಿಕೊಂಡು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.

 Ambulance Driver Reach Thanjavur To Madurai In 1 hour 50 Minute

ರಸ್ತೆ ಮಾರ್ಗವಾಗಿ 190 ಕಿಲೋಮೀಟರ್ ದೂರವನ್ನು ಕೇವಲ 1 ಗಂಟೆ 50 ನಿಮಿಷದಲ್ಲಿ ತಲುಪಿ, ಅಂದುಕೊಂಡಂತೆ ಆ ಜೀವ ಉಳಿಸುವ ಕೆಲಸ ಮಾಡುವಲ್ಲಿ ಆಂಬ್ಯುಲೆನ್ಸ್ ಚಾಲಕ ಸುಬ್ರಮಣ್ಯಂ ಯಶಸ್ವಿಯಾಗಿದ್ದಾರೆ.

ಮಗುವಿಗಾಗಿ 'ಮಿಂಚಿನ ಓಟ'; ಹೀರೋ ಆದ ಆಂಬುಲೆನ್ಸ್ ಚಾಲಕಮಗುವಿಗಾಗಿ 'ಮಿಂಚಿನ ಓಟ'; ಹೀರೋ ಆದ ಆಂಬುಲೆನ್ಸ್ ಚಾಲಕ

ಆಂಬ್ಯುಲೆನ್ಸ್ ಬರುವ ಮಾಹಿತಿ ಪಡೆದ ಪೊಲೀಸರು ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿ ಸಹಕರಿಸಿದರು. ಹಾಗಾಗಿ ನಿಗದಿತ ಸಮಯದಲ್ಲಿ ಲಿವರ್ ತಲುಪಿಸಲು ಸಾಧ್ಯವಾಯಿತು. ಆಪರೇಷನ್ ಕೂಡ ಯಶಸ್ವಿಯಾಗಿದೆ. ಆಂಬ್ಯುಲೆನ್ಸ್ ಚಾಲಕನ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

English summary
Ambulance Driver reached thanjavur to madurai in 1 hour 50 minute to save one person with liver Disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X