ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ತಿ, ಚಿದಂಬರಂ ವಿರುದ್ಧ ಇರೋ ಆರೋಪಗಳೇನು?

ಕಾರ್ತಿ ಚಿದಂಬರಂಗೆ ಸೇರಿದ ಐಎನ್ಎಕ್ಸ್ ಮೀಡಿಯಾ ವಿರುದ್ಧ ಈಗಾಗಲೇ ಅವ್ಯವಹಾರದ ಆರೋಪಗಳು ಕೇಳಿಬಂದಿದ್ದವು. ವಿದೇಶಿ ಬಂಡವಾಳ ನಿಯಮಗಳಿಗೆ ವಿರುದ್ಧವಾಗಿ ಐಎನ್ಎಕ್ಸ್ ನಲ್ಲಿ ಹೂಡಿಕೆಗಳಾಗಿವೆ ಎಂಬುದೇ ಪ್ರಮುಖ ಆರೋಪ.

|
Google Oneindia Kannada News

ನವದೆಹಲಿ, ಮೇ 16: ಮಂಗಳವಾರ ಬೆಳಗ್ಗೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಪಟ್ಟ ನಿವಾಸ ಹಾಗೂ ಕಚೇರಿಗಳು ಸೇರಿದಂತೆ ಸುಮಾರು 16 ಕಡೆ ಸಿಬಿಐ ರೈಡ್ ಆಗಿದೆ.

ಕಾರ್ತಿ ಚಿದಂಬರಂಗೆ ಸೇರಿದ ಐಎನ್ಎಕ್ಸ್ ಮೀಡಿಯಾ ವಿರುದ್ಧ ಈಗಾಗಲೇ ಅವ್ಯವಹಾರದ ಆರೋಪಗಳು ಕೇಳಿಬಂದಿದ್ದವು. ವಿದೇಶಿ ಬಂಡವಾಳ ನಿಯಮಗಳಿಗೆ ವಿರುದ್ಧವಾಗಿ ಐಎನ್ಎಕ್ಸ್ ನಲ್ಲಿ ಹೂಡಿಕೆಗಳಾಗಿವೆ ಎಂಬುದು ಆ ಆರೋಪದ ಮುಖ್ಯ ತಿರುಳು.[ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರನ ನಿವಾಸಗಳ ಮೇಲೆ ಸಿಬಿಐ ದಾಳಿ]

Allegations against Karthi Chidambaram

ಇದಲ್ಲದೆ, ಹಲವಾರು ಲೋಪಗಳ ಮಧ್ಯೆಯೂ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯ ನಿರಾಕ್ಷೇಪಣಾ ಪತ್ರವು ಐಎನ್ಎಕ್ಸ್ ಗೆ ಸಿಕ್ಕಿದ್ದು ಪ್ರಶ್ನಾರ್ಹವಾಗಿತ್ತು. ಹಾಗಾಗಿ, ಈ ಪ್ರಕರಣ ಸಿಬಿಐ ಮೆಟ್ಟಿಲೇರಿ, ಸಿಬಿಐ ಆ ಬಗ್ಗೆ ಎಫ್ ಐಆರ್ ಅನ್ನೂ ದಾಖಲಿಸಿತ್ತು.

ಅಲ್ಲದೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ (ಇಡಿ) ಕೂಡ ಐಎನ್ಎಕ್ಸ್ ವಿರುದ್ಧ ತನಿಖೆ ಕೈಗೆತ್ತಿಕೊಂಡಿದೆ.

ಇದೊಂದೇ ಅಲ್ಲ, ಕಾರ್ತಿ ಚಿದಂಬರಂ ಅವರಿಗೆ ಸಂಬಂಧಪಟ್ಟ ಕೆಲ ಕಂಪನಿಗಳಲ್ಲಿ ಇಂಥ ಅವ್ಯವಹಾರಗಳು ಆಗಿರುವುದು ಸರ್ವೇ ಸಾಮಾನ್ಯವಾಗಿರುವುದನ್ನು ಸಿಬಿಐ ತನ್ನ ತನಿಖೆಯ ವೇಳೆ ಗಮನಿಸಿದೆ.

ಇದರ ಜಾಡು ಹಿಡಿದು ಹೋಗಿದ್ದ ಸಿಬಿಐಗೆ ಕಾರ್ತಿಗೆ ಸೇರಿದ್ದ ಕಂಪನಿಯೊಂದರಲ್ಲಿ ಸುಮಾರು 45 ಕೋಟಿ ರು. ಅವ್ಯವಹಾರವಾಗಿರುವುದು ತಿಳಿದುಬಂದಿತ್ತು. ಹಾಗಾಗಿ, ಆ ಕಂಪನಿಯ ನಿರ್ದೇಶಕರುಗಳ ಮಂಡಳಿಗೆ ಹಾಗೂ ಕಾರ್ತಿ ಚಿದಂಬರಂ ಅವರಿಗೆ ಸಿಬಿಐ ಕಳೆದ ತಿಂಗಳು ನೋಟಿಸ್ ಜಾರಿಗೊಳಿಸಿತ್ತು.

ಈ ಎಲ್ಲಾ ಕಂಪನಿಗಳ ಅವ್ಯವಹಾರಗಳ ನೇರ ಲಾಭ ಕಾರ್ತಿ ಚಿದಂಬರಂ ಅವರಿಗೆ ಆಗಿದೆ ಎಂದು ಸಿಬಿಐ ಹೇಳುತ್ತಿದೆ. ಹೀಗಾಗಿ, ಕಾರ್ತಿ ಬೆನ್ನು ಬಿದ್ದಿರುವ ಸಿಬಿಐ, ಅವರಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳ ಬಗ್ಗೆ ತನಿಖೆ ಆರಂಭಿಸಿತ್ತು. ಅದರಲ್ಲೊಂದು ಏರ್ ಸೆಲ್ - ಮ್ಯಾಕ್ಸಿಕ್ ಅವ್ಯವಹಾರವೂ ಒಂದು.

ಕಳೆದ ವರ್ಷ ಆಗಸ್ಟ್ ನಲ್ಲೂ ಕಾರ್ತಿಗೆ ಸಂಬಂಧಪಟ್ಟ ಕಂಪನಿಗಳ ಮೇಲೆ ಕೇಂದ್ರ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಆಗ, ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಂಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಇತರ ಕಂಪನಿಗಳ ಮೇಲೂ ದಾಳಿ ನಡೆದಿತ್ತು.

English summary
The CBI has registered an FIR in relation to the irregularities Foreign Investment Promotion Board Clearance given to the INX media. It may be recalled that the ED too had probed INX media for forex violations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X