ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಸೀಟು ಹಂಚಿಕೊಂಡ ಎಐಎಡಿಎಂಕೆ-ಪಿಎಂಕೆ

|
Google Oneindia Kannada News

ಚೆನ್ನೈ, ಫೆಬ್ರವರಿ 19: ಹಲವಾರು ಊಹಾಪೊಹಗಳ ಬಳಿಕ ತಮಿಳುನಾಡಿನ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿವೆ.

ಎಐಎಡಿಎಂಕೆ-ಬಿಜೆಪಿ ಜೊತೆ ಮೈತ್ರಿ ಘೋಷಣೆಗೂ ಮುನ್ನವೇ ಈ ಎರಡೂ ಪಕ್ಷಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದವು.

ಬಿಜೆಪಿ ಜತೆ ಕೈಜೋಡಿಸಲಿದೆಯೇ ಎಐಎಡಿಎಂಕೆ?: ಸುಳಿವು ನೀಡಿದ ಉಪಮುಖ್ಯಮಂತ್ರಿ ಬಿಜೆಪಿ ಜತೆ ಕೈಜೋಡಿಸಲಿದೆಯೇ ಎಐಎಡಿಎಂಕೆ?: ಸುಳಿವು ನೀಡಿದ ಉಪಮುಖ್ಯಮಂತ್ರಿ

ತಮಿಳುನಾಡಿನ 39 ಮತ್ತು ಪುದುಚೆರಿಯ ಒಂದು ಲೋಕಸಭೆ ಕ್ಷೇತ್ರಗಳಲ್ಲಿ ಪಿಎಂಕೆ ಒಂದು ರಾಜ್ಯಸಭೆ ಮತ್ತು 7 ಲೋಕಸಭೆ ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಎಐಎಡಿಎಂಕೆ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ತಿಳಿಸಿದರು. ತಮಿಳುನಾಡಿನ ವಿಧಾನಸಭೆ ಉಪಚುನಾವಣೆಗೂ ಈ ಮೈತ್ರಿ ಇರಲಿದೆ.

AIADMK-PMK form alliance in Tamil Nadu for Lok Sabha polls

ಪಿಎಂಕೆ ಸಂಸ್ಥಾಪಕ ಡಾ. ಎಸ್. ರಾಮದಾಸ್ ಮತ್ತು ಅವರ ಮಗ, ಸಂಸದ ಅನ್ಬುಮಣಿ ರಾಮದಾಸ್, ಹಿರಿಯ ಮುಖಂಡ ಜಿಕೆ ಮಣಿ, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಮೈತ್ರಿ ಒಪ್ಪಂದವನ್ನು ಮಾಡಿಕೊಂಡರು.

ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಇಂದು ಘೋಷಣೆ ಸಾಧ್ಯತೆ ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಇಂದು ಘೋಷಣೆ ಸಾಧ್ಯತೆ

ಪಿಎಂಕೆಯನ್ನು ತಮ್ಮತ್ತ ಸೆಳೆದುಕೊಳ್ಳಲು ಕಳೆದ ಒಂದು ತಿಂಗಳಿನಿಂದ ಡಿಎಂಕೆ ಮತ್ತು ಎಐಎಡಿಎಂಎಕೆ ಎರಡೂ ಪಕ್ಷಗಳು ಓಲೈಕೆಯ ಪ್ರಯತ್ನ ನಡೆಸಿದ್ದವು.

ಬಿಜೆಪಿ ಕೂಡ ಎಐಎಡಿಎಂಕೆ ಮೈತ್ರಿಕೂಟವನ್ನು ಸೇರಿಕೊಳ್ಳಲಿದ್ದು, ಅದರ ಜತೆಗೆ ವಿಜಯಕಾಂತ್ ಅವರ ಡಿಎಂಡಿಕೆ ಸಹ ಕೈಜೋಡಿಸಲಿದೆ. ಇದರಿಂದ ತಮಿಳುನಾಡಿನಲ್ಲಿ ಮಹಾಮೈತ್ರಿಕೂಟದಂತೆಯೇ ಅದಕ್ಕೆ ಪ್ರತಿಸ್ಪರ್ಧಿಯಾಗಿ ಬಿಜೆಪಿ-ಎಐಎಡಿಎಂಕೆ-ಪಿಎಂಕೆ-ಡಿಎಂಡಿಕೆಯ ಮತ್ತೊಂದು ಬೃಹತ್ ಮೈತ್ರಿಕೂಟ ರಚನೆಯಾಗಲಿದೆ.

English summary
After much speculation, the PMK has signed an alliance with the Tamil Nadu's ruling AIADMK that constitutes for 17 seats in the upcoming Lok Sabha Elections 2019 due in May. The PMK will contest on six Lok Sabha seats and will be given one Rajya Sabha seat, AIADMK chief and deputy CM O Panneerselvam announced at a press conference with PMK leadership on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X