ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಚುನಾವಣೆ: ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಎಐಎಡಿಎಂಕೆ

|
Google Oneindia Kannada News

ಚೆನ್ನೈ, ಮಾರ್ಚ್ 9: ಏಪ್ರಿಲ್ ತಿಂಗಳಲ್ಲಿ ರಾಜ್ಯಸಭೆಯ 51 ಸ್ಥಾನಗಳು ತೆರವುಗೊಳ್ಳಲಿದ್ದು, ಮಾರ್ಚ್ 26ಕ್ಕೆ ಚುನಾವಣೆ ಘೋಷಣೆಯಾಗಿದೆ. ಈ 51 ಸ್ಥಾನಗಳ ಮೇಲೆ ರಾಜಕೀಯ ಪಕ್ಷಗಳು ಕಣ್ಣಿಟ್ಟಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿದೆ.

ಇದೀಗ, ತಮಿಳುನಾಡಿನ ಎಐಎಡಿಎಂಕೆ ಪಕ್ಷ ರಾಜ್ಯಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ತಮಿಳುನಾಡಿನಲ್ಲಿ ಒಟ್ಟು ಆರು ಸ್ಥಾನಗಳು ತೆರವುಗೊಳ್ಳುತ್ತಿದ್ದು, ಮೊದಲ ಪಟ್ಟಿಯಲ್ಲಿ ಮೂರು ಅಭ್ಯರ್ಥಿಗಳನ್ನು ಎಐಎಡಿಎಂಕೆ ಘೋಷಿಸಿದೆ.

ರಾಜ್ಯಸಭೆಯಿಂದ 51 ಸಂಸದರು ನಿವೃತ್ತಿ, ಯಾರಿಗೆ ಲಾಭ?ರಾಜ್ಯಸಭೆಯಿಂದ 51 ಸಂಸದರು ನಿವೃತ್ತಿ, ಯಾರಿಗೆ ಲಾಭ?

ಕೆಪಿ ಮುನಿಸ್ವಾಮಿ, ಎಂ ತಂಬಿದೊರೈ ಮತ್ತು ತಮಿಳ್ ಮಾನಿಲಾ ಕಾಂಗ್ರೆಸ್ ಪಕ್ಷದ ಜಿಕೆ ವಾಸನ್ ಅವರನ್ನು ರಾಜ್ಯಸಭೆ ಅಭ್ಯರ್ಥಿಗಳಾಗಿ ಎಐಎಡಿಎಂಕೆ ಪಕ್ಷ ಅಧಿಕೃತವಾಗಿ ಘೋಷಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಮೂರು ಮತ್ತು ಎಐಎಡಿಎಂಕೆ ಎರಡೂ ಪಕ್ಷವೂ ತಲಾ ಮೂರು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ.

AIADMK Nominate Candidates For Rajya Sabha elections

ಇನ್ನುಳಿದಂತೆ ಮಹಾರಾಷ್ಟ್ರದಲ್ಲಿ ಏಳು, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ತಲಾ ಐದು, ಆಂಧ್ರಪ್ರದೇಶ, ಒಡಿಶಾ, ಗುಜರಾತ್‌ನಲ್ಲಿ ತಲಾ ನಾಲ್ಕು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಅಸ್ಸಾಂನಲ್ಲಿ ತಲಾ ಮೂರು, ಛತ್ತೀಸ್‌ಘಡ್, ತೆಲಂಗಾಣ, ಹರಿಯಾಣ, ಜಾರ್ಖಂಡ್್ನಲ್ಲಿ ತಲಾ ಎರಡು, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯದಲ್ಲಿ ಒಂದು ಸ್ಥಾನ ತೆರವುಗೊಳ್ಳಲಿದೆ.

ರಾಜ್ಯಸಭೆಯ 55 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟರಾಜ್ಯಸಭೆಯ 55 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟ

ರಾಜ್ಯಸಭೆಯಲ್ಲಿ ಒಟ್ಟು 81 ಸ್ಥಾನಗಳನ್ನು ಹೊಂದಿರುವ ಬಿಜೆಪಿ ತೆರವುಗೊಳ್ಳಲಿರುವ 51 ಸ್ಥಾನಗಳ ಪೈಕಿ 13 ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿದೆ. 46 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ 10 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.

English summary
AIADMK announces the names of KP Munusamy, M Thambi Durai and GK Vasan of Tamil Maanila Congress as the nominees for the upcoming Rajya Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X