ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ ರದ್ದುಗೊಳಿಸಿ; ಮೋದಿಗೆ ಪನ್ನೀರ್‌ಸೆಲ್ವಂ ಪತ್ರ

|
Google Oneindia Kannada News

ಚೆನ್ನೈ, ಜೂನ್ 07: ನೀಟ್ ಪರೀಕ್ಷೆ ಒಳಗೊಂಡಂತೆ ಎಲ್ಲಾ ವೃತ್ತಿಪರ ಹಾಗೂ ಇತರೆ ಕೋರ್ಸ್‌ಗಳ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಕೋರಿ ಎಐಎಡಿಎಂಕೆ ನಾಯಕ ಪನ್ನೀರ್‌ಸೆಲ್ವಂ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ನೀಟ್ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭಾನುವಾರ ಪತ್ರ ಬರೆದಿದ್ದರು. ನೀಟ್ ಪರೀಕ್ಷೆ ಬದಲಿಗೆ ಪಿಯುಸಿ ಅಂಕಗಳ ಮೆರಿಟ್ ಆಧಾರದಲ್ಲಿ ವೈದ್ಯಕೀಯ ಸೀಟ್‌ಗಳನ್ನು ಹಂಚಿಕೆ ಮಾಡುವಂತೆ ಸಲಹೆ ನೀಡಿದ್ದರು. ಈ ಬೆನ್ನಲ್ಲೇ ಪನ್ನೀರ್ ಸೆಲ್ವಂ ಮತ್ತೊಮ್ಮೆ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚಳ: ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆಕೊರೊನಾ ಸೋಂಕು ಹೆಚ್ಚಳ: ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ

"2016ರವರೆಗೂ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೇಳಿಕೊಂಡಿದ್ದರು. ಎಐಎಡಿಎಂಕೆ ಕೂಡ ಇದನ್ನು ತೀವ್ರ ವಿರೋಧಿಸಿ 2017ರಲ್ಲಿ ವಿಧಾನಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಿತ್ತು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ" ಎಂದು ಪತ್ರದಲ್ಲಿ ಪನ್ನೀರ್ ಸೆಲ್ವಂ ಉಲ್ಲೇಖಿಸಿದ್ದಾರೆ.

AIADMK Leader Panneerselvam Urges PM To Abolish Neet Exam

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಡಿಎಂಕೆ, ಎಐಎಡಿಎಂಕೆ ಸೇರಿದಂತೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ನೀಟ್ ಅನ್ನು ದೀರ್ಘಕಾಲದಿಂದ ವಿರೋಧಿಸುತ್ತಿವೆ.

"ತಮಿಳುನಾಡಿಗೆ 11 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಸಿಬಿಎಸ್‌ಸಿ 12ನೇ ತರಗತಿ ಪರೀಕ್ಷೆಗಳ ರದ್ದತಿ ಮಾಡಿರುವುದು ಉತ್ತಮ ಬೆಳವಣಿಗೆ" ಎಂದು ಪನ್ನೀರ್‌ ಸೆಲ್ವಂ ಹೇಳಿದ್ದಾರೆ.

ನೀಟ್ ಪರೀಕ್ಷೆ ಮಾತ್ರವಲ್ಲ, ಎಲ್ಲಾ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನೂ ರದ್ದುಗೊಳಿಸಲು ಏಕರೂಪದ ನೀತಿ ನಿರ್ಧಾರ ಕೈಗೊಳ್ಳುವಂತೆ ಪತ್ರದಲ್ಲಿ ವಿನಂತಿಸಿದ್ದಾರೆ.
ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶ ಪಡೆಯುವ ಸಂಬಂಧ ನಿರ್ಧಾರ ಕೈಗೊಳ್ಳಲು ರಾಜ್ಯಗಳಿಗೆ ಕೇಂದ್ರ ಅವಕಾಶ ನೀಡಬೇಕು. ಆಗ ತಮಿಳುನಾಡು ನಿಮಗೆ ಕೃತಜ್ಞರಾಗಿರುತ್ತದೆ ಎಂದು ಹೇಳಿದ್ದಾರೆ.

English summary
AIADMK leader O Panneerselvam urged PM Narendra Modi to abolish NEET Exam and other similar exams for all professional and other courses
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X