• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮಿತ್ ಶಾ ತಮಿಳುನಾಡು ಭೇಟಿ: 'ಗೋಬ್ಯಾಕ್ ಅಮಿತ್ ಶಾ' ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡಿಂಗ್

|

ಚೆನ್ನೈ, ನ 21: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ (ನ 21) ಚೆನ್ನೈಗೆ ಭೇಟಿ ನೀಡಲಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, 'ಗೋಬ್ಯಾಕ್ ಅಮಿತ್ ಶಾ' ಹ್ಯಾಷ್ ಟ್ಯಾಗ್ ಒಂದು ದಿನದ ಹಿಂದಿನಿಂದಲೇ ಟ್ರೆಂಡಿಂಗ್ ನಲ್ಲಿದೆ.

ಅಸಲಿಗೆ ಕೇಂದ್ರದ ಮೋದಿ ಸರಕಾರದ ಸಚಿವರುಗಳಿಗೆ ಈ ರೀತಿಯ ಟ್ರೆಂಡಿಂಗ್ ಹೊಸ ವಿಚಾರವೇನೂ ಇಲ್ಲ. ಪ್ರಧಾನಿ ಮೋದಿ ತಮಿಳುನಾಡು ಅಥವಾ ಕೇರಳಕ್ಕೆ ಭೇಟಿ ನೀಡಿದಾಗ, ಕಪ್ಪುಪಟ್ಟಿ ಪ್ರದರ್ಶನ ಮತ್ತು ಸಾಮಾಜಿಕ ತಾಣದಲ್ಲಿ ವಿರೋಧ ವ್ಯಕ್ತದ ಘಟನೆ ಹಲವಾರು ಬಾರಿ ನಡೆದಿದೆ.

ಅಮಿತ್ ಶಾ ಚೆನ್ನೈ ಭೇಟಿ: ರಜನೀಕಾಂತ್ ಭೇಟಿಯಾಗುತ್ತಾರೋ, ತಪ್ಪಿಸಿಕೊಳ್ಳುತ್ತಾರೋ?

ಮುಂದಿನ ವರ್ಷ ತಮಿಳುನಾಡಿನ ಅಸೆಂಬ್ಲಿ ಚುನಾವಣೆ ಎದುರಾಗುತ್ತಿರುವುದರಿಂದ ಅಮಿತ್ ಶಾ ಅವರ ಭೇಟಿ ಮಹತ್ವವನ್ನು ಪಡಿದಿದೆ. ಅಮಿತ್ ಶಾ ಈ ಭೇಟಿಯ ವೇಳೆ, ಹಲವು ಸರಕಾರೀ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ಮುಖಂಡರ ಜೊತೆಯೂ ಮೀಟಿಂಗ್ ನಡೆಯಲಿದೆ.

ಜೊತೆಗೆ, ತಲೈವಾ ರಜನೀಕಾಂತ್ ಅವರನ್ನು ಮತ್ತು ಸದ್ಯ ಡಿಎಂಕೆಯಲ್ಲಿರುವ, ಹೊಸ ಪಕ್ಷ ಕಟ್ಟುವ ತಯಾರಿಯಲ್ಲಿರುವ ಮಾಜಿ ಸಿಎಂ ಕರುಣಾನಿಧಿಯವರ ಪುತ್ರ ಎಂ.ಕೆ.ಅಳಗಿರಿಯನ್ನೂ ಅಮಿತ್ ಶಾ ಭೇಟಿಯಾಗುವ ಸಾಧ್ಯತೆಯಿದೆ.

ಅಮಿತ್ ಶಾ ಭೇಟಿಯ ವಿರುದ್ದ ತರಹೇವಾರಿ ಮೀಮ್ಸ್, ಕಾಮೆಂಟುಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಅಲ್ಲಲ್ಲಿ ಇದಕ್ಕೆ ಕೌಂಟರ್ ಕೊಡುವ ಪೋಸ್ಟ್ ಗಳಿಗೂ ಬರವೇನೂ ಇಲ್ಲ. ನಿಮ್ಮ ದ್ವೇಷ ರಾಜಕಾರಣವನ್ನು ತಮಿಳುನಾಡಿನಲ್ಲಿ ಪ್ರದರ್ಶಿಸಬೇಡಿ ಎನ್ನುವ ಕಾಮೆಂಟುಗಳೂ ಬರುತ್ತಿವೆ.

ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಡಿಎಂಕೆಯ ಕರುಣಾನಿಧಿ ಮತ್ತು ಎಐಎಡಿಎಂಕೆಯ ಜಯಲಲಿತಾ ಅವರಿಲ್ಲದ ಅಸೆಂಬ್ಲಿ ಚುನಾವಣೆ ಎದುರಾಗುತ್ತಿರುವುದರಿಂದ, ಬಿಜೆಪಿ ಇಲ್ಲಿ ತನ್ನ ನೆಲೆಯನ್ನು ಕಾಣಲು ಪ್ರಯತ್ನಿಸುತ್ತಿದೆ.

English summary
Ahead Of Union Home Minister Amit Shah Visit To Tamilnadu, Go Back Amit Shah Trending in Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X