ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳ ಪ್ರೀತಿಗೆ ಕರಗಿದ ಅಧಿಕಾರಿಗಳು, ಶಿಕ್ಷಕನ ವರ್ಗಾವಣೆ ರದ್ದು

By Manjunatha
|
Google Oneindia Kannada News

Recommended Video

ಕೊನೆಗೂ ಮುಗ್ದ ಮಕ್ಕಳು ತಮ್ಮ ಶಿಕ್ಷಕನಿಗಾಗಿ ಇಟ್ಟ ಕಣ್ಣೀರಿಗೆ ನ್ಯಾಯ ಸಿಕ್ಕಿದೆ

ಚೆನ್ನೈ, ಜೂನ್ 23: ವರ್ಗಾವಣೆ ಆದ ಮೆಚ್ಚಿನ ಶಿಕ್ಷಕನನ್ನು ತಬ್ಬಿ ಅಳುತ್ತಿರುವ ವಿದ್ಯಾರ್ಥಿಗಳ ಪೊಟೊ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ವಿದ್ಯಾರ್ಥಿಗಳ ಪ್ರೀತಿಗೆ ಅಧಿಕಾರಿಗಳು ಕರಗಿದ್ದು, ಆ ಶಿಕ್ಷಕನ ವರ್ಗಾವಣೆಯನ್ನು ರದ್ದು ಮಾಡಿದ್ದಾರೆ.

ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ವೇಲಿಯಾಗಾರಂ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಭಗವಾನ್‌ (26) ಗೆ ವರ್ಗಾವಣೆ ಆಗಿತ್ತು. ಆದರೆ ವಿಷಯ ತಿಳಿದ ವಿದ್ಯಾರ್ಥಿಗಳು ಶಿಕ್ಷಕನನ್ನು ಹೋಗಲು ಬಿಡದೆ ತಬ್ಬಿಕೊಂಡು ಅಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಸರ್ಕಾರಿ ಹೈಸ್ಕೂಲ್‌ ಮಕ್ಳು ಇಂಗ್ಲಿಷ್‌ ಮೇಷ್ಟ್ರಿಗಾಗಿ ಕಣ್ಣೀರಿಟ್ಟರು!ಸರ್ಕಾರಿ ಹೈಸ್ಕೂಲ್‌ ಮಕ್ಳು ಇಂಗ್ಲಿಷ್‌ ಮೇಷ್ಟ್ರಿಗಾಗಿ ಕಣ್ಣೀರಿಟ್ಟರು!

ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕನನ್ನು ಶಾಲೆ ಬಿಟ್ಟು ಹೋಗದಂತೆ ತಡೆ ಹಿಡಿದು ಪ್ರತಿಭಟನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸುದ್ದಿಯಾಗಿತ್ತು. ಶಿಕ್ಷಕನ ವರ್ಗಾವಣೆ ರದ್ದು ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿಬಂದಿತ್ತು.

After seeing students love towards teacher Officers canceled transfer order of teacher

ಇದೀಗ ವಿದ್ಯಾರ್ಥಿಗಳ ಪ್ರೀತಿಗೆ ಮಣಿದಿರುವ ತಮಿಳುನಾಡು ಶಿಕ್ಷಣ ಇಲಾಖೆ, ಶಿಕ್ಷಕ ಭಗವಾನ್ ವರ್ಗಾವಣೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದು, ಆತನನ್ನು ಅದೇ ಶಾಲೆಯಲ್ಲಿ ಮುಂದುವರೆಯುವಂತೆ ಮಾಡಿದೆ. ವಿದ್ಯಾರ್ಥಿಗಳ ನಿಷ್ಕಲ್ಮಷ ಪ್ರೀತಿಗೆ ಸಿಕ್ಕ ಜಯ ಇದಾಗಿದೆ.

English summary
Students of Government High School in Veliagaram(Thiruvallur) cry and try to stop their English Teacher G Bhagawan who was leaving after receiving his transfer order. Education department canceled the transfer order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X