ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವಾರ್, ಬುರೆವಿ ಬಳಿಕ ಇದೀಗ ತಮಿಳುನಾಡಿಗೆ ಅಪ್ಪಳಿಸಲಿದೆ 'ಅರ್ನಬ್' ಚಂಡಮಾರುತ

|
Google Oneindia Kannada News

ಚೆನ್ನೈ, ಡಿಸೆಂಬರ್ 07: ನಿವಾರ್, ಬುರೆವಿ ಬಳಿಕ ಇದೀಗ ತಮಿಳುನಾಡಿಗೆ ಅರ್ನಬ್ ಚಂಡಮಾರುತದ ಭೀತಿ ಎದುರಾಗಿದೆ.

ತಮಿಳುನಾಡಿಗೆ ಅರ್ನಬ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಆಹಿತಿ ನೀಡಿದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಈ ಚಂಡಮಾರುತ ಉಂಟಾಗಲಿದ್ದು, ಭಾರತ, ಬಾಂಗ್ಲಾದೇಶ ಸೇರಿದಂತೆ 13 ದೇಶಗಳು ವರದಿ ಮಾರುತಗಳ ಪೈಕಿ ಅರ್ನಬ್ ಚಂಡಮಾರುತ ಕೂಡ ಒಂದಾಗಿದೆ.

ಮುಂದಿನ 5 ದಿನ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದಿನ 5 ದಿನ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ

ಬುರೇವಿ ಚಂಡಮಾರುತದ ಹಾವಳಿಯಿಂದ ತಮಿಳುನಾಡಿನ ಕಡ್ಡಲೂರ್ ಜಿಲ್ಲೆಯಲ್ಲಿ 66,000ಕ್ಕೂ ಅಧಿಕ ಜನರನ್ನು ಈಗಾಗಲೇ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 5,000 ಜನರನ್ನು ರಾಮನಾಥಪುರಕ್ಕೆ ಸ್ಥಳಾಂತರಿಸಲಾಗಿದೆ.

ಚಂಡ ಮಾರುತ ಅಪ್ಪಳಿಸುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ

ಚಂಡ ಮಾರುತ ಅಪ್ಪಳಿಸುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ

ಈ ಚಂಡಮಾರುತ ಯಾವಾಗ ಅಪ್ಪಳಿಸಲಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಏಳಲಿರುವ ಚಂಡಮಾರುತಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. 13 ದೇಶಗಳು ಸಿದ್ಧಪಡಿಸಿರುವ ಚಂಡಮಾರುತದ ಪಟ್ಟಿಯಲ್ಲಿ ಅರ್ನಬ್ ಚಂಡಮಾರುತದ ಹೆಸರು ಕೂಡ ಇದೆ. ಭಾರತ, ಬಾಂಗ್ಲಾದೇಶ, ಮಾಲ್ಡೀವ್ಸ್​, ಮಯನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಇರಾನ್, ಕತಾರ್, ಸೌದಿ ಅರೇಬಿಯ, ಯುಎಇ ದೇಶಗಳು ಈ ಪಟ್ಟಿಯನ್ನು ತಯಾರಿಸಿವೆ.

ಚಂಡಮಾರುತಕ್ಕೆ ಅರ್ನಬ್ ಎಂದು ನಾಮಕರಣ

ಚಂಡಮಾರುತಕ್ಕೆ ಅರ್ನಬ್ ಎಂದು ನಾಮಕರಣ

ಈ ವರ್ಷ ಒಂದರ ಹಿಂದೊಂದು ಚಂಡಮಾರುತ ಅಪ್ಪಳಿಸುತ್ತಿದ್ದು, ಮುಂದಿನ ಸರದಿ ಅರ್ನಬ್ ಚಂಡಮಾರುತದ್ದಾಗಿದೆ. ಅರ್ನಬ್ ಚಂಡಮಾರುತವೆಂಬುದು ಬಾಂಗ್ಲಾ ದೇಶಿಗರು ಹೊಸ ಚಂಡಮಾರುತಕ್ಕೆ ಇಟ್ಟಿರುವ ಹೆಸರು. ಈ ಹೆಸರನ್ನು ಹಿಂದೂ ಮಹಾಸಾಗರದ ಆಸುಪಾಸಿನ ದೇಶಗಳು ಕೂಡ ಒಪ್ಪಿಕೊಂಡಿದ್ದು, ಹೊಸ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರಿಡಲಾಗಿದೆ.

ವಿವಿಧ ಚಂಡಮಾರುತಗಳ ಹೆಸರುಗಳು

ವಿವಿಧ ಚಂಡಮಾರುತಗಳ ಹೆಸರುಗಳು

ಬುಲ್​ಬುಲ್, ಫನಿ, ವಾಯು, ಹಿಕ್ಕಾ, ಅಂಫಾನ್, ನಿಸರ್ಗ, ನಿವಾರ್, ಬುರೇವಿ ಚಂಡಮಾರುತಗಳ ಬಳಿಕ ಇದೀಗ ಅರ್ನಬ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಲಿದೆ . ಬುರೇವಿ ಚಂಡಮಾರುತದ ಹಾವಳಿಯಿಂದ ತಮಿಳುನಾಡಿನ ಕಡ್ಡಲೂರ್ ಜಿಲ್ಲೆಯಲ್ಲಿ 66,000ಕ್ಕೂ ಅಧಿಕ ಜನರನ್ನು ಈಗಾಗಲೇ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 5,000 ಜನರನ್ನು ರಾಮನಾಥಪುರಕ್ಕೆ ಸ್ಥಳಾಂತರಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಕೇರಳದಲ್ಲಿ ಬುರೆವಿ ಚಂಡಮಾರುತ ಅಪ್ಪಳಿಸಿದೆ. ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಬುರೇವಿ ಚಂಡಮಾರುತದ ಪರಿಣಾಮದಿಂದ ಮಳೆಯಾಗುತ್ತಿದೆ. ಶ್ರೀಲಂಕಾದಿಂದ ತಮಿಳುನಾಡು, ಕೇರಳದ ಕರಾವಳಿಯನ್ನು ಪ್ರವೇಶಿಸಿದ್ದ ಈ ಚಂಡಮಾರುತದ ಪರಿಣಾಮದಿಂದ ತಮಿಳುನಾಡೊಂದರಲ್ಲೇ 7 ಜನರು ಸಾವನ್ನಪ್ಪಿದ್ದಾರೆ. ಉಗ್ರರೂಪ ತಾಳಿದ ಚಂಡಮಾರುತದ ಅಬ್ಬರಕ್ಕೆ ನೂರಾರು ಗ್ರಾಮಗಳು ಜಲಾವೃತವಾಗಿವೆ.

ತಮಿಳುನಾಡಿನಲ್ಲಿ ಹಲವು ಗ್ರಾಮಗಳ ಮುಳುಗಡೆ

ತಮಿಳುನಾಡಿನಲ್ಲಿ ಹಲವು ಗ್ರಾಮಗಳ ಮುಳುಗಡೆ

ತಮಿಳುನಾಡಿನ ಕಡ್ಡಲೂರ್ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಗ್ರಾಮಗಳು ನೀರಿನಿಂದ ಮುಳುಗಡೆಯಾಗಿದೆ. ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡವರಿಗೆ ಕೂಡ ಪರಿಹಾರ ಘೋಷಿಸಲಾಗಿದೆ.

English summary
After Burevi and a few other cyclones, there's another that may disturb the calm of the Indian Ocean. 'Cyclone Arnab' could hit Tamil Nadu, the southern state which recently was met with Cyclone Burevi and Cyclone Nivar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X