ಬೆಂಗಳೂರು ಬಳಿಕ ತಮಿಳುನಾಡಿನಲ್ಲಿ ಆತಂಕ ಹುಟ್ಟಿಸಿದ ನಿಗೂಢ ಶಬ್ದ
ಚೆನ್ನೈ, ಮೇ 29: ಬೆಂಗಳೂರು ಬಳಿಕ ತಮಿಳುನಾಡಿನ ತಿರುಪ್ಪುರದಲ್ಲಿ ನಿಗೂಢ ಶಬ್ದ ಕೇಳಿಸಿದೆ.
ಜನರು ಆತಂಕದಿಂದ ಮನೆಯೊಳಗಿಂದ ಓಡಿ ಬಂದಿದ್ದಾರೆ. ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಶಬ್ದ ಕೇಳಿಸಿದೆ. ತಿರುಪ್ಪುರದ ಧಾರಾಪುರಂ, ಪಲ್ಲಾಡಂ ಪ್ರದೇಶದಲ್ಲಿ ಆಕಾಶದಿಂದ ಭಾರಿ ಶಬ್ದ ಕೇಳಿಬಂದಿದೆ.
ಸೂಪರ್ಸೋನಿಕ್ ಏರ್ಕ್ರಾಫ್ಟ್ ಮಾದರಿಯ ಸದ್ದು ಕೇಳಿಸಿದೆ ಎಂದು ಕಲೆಕ್ಟರ್ ವಿಜಯ್ ಕಾರ್ತಿಕೇಯನ್ ಟ್ವೀಟ್ ಮಾಡಿದ್ದಾರೆ.
ಡೈಯಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಶಬ್ದ ಕೇಳಿದಾಗ ಬಾಯ್ಲರ್ ಸ್ಫೋಟಗೊಂಡಿದೆ ಎಂದು ತಿಳಿದಿದ್ದರು. ತಕ್ಷಣ ಓಡಿ ಹೋಗಿ ಪರಿಶೀಲಿಸಿದಾಗ ಎಲ್ಲವೂ ಸರಿಯಾಗಿಯೇ ಇತ್ತು ಎಂದು ಹೇಳಿದ್ದಾರೆ.
ಕೆಲವು ಮಂದಿ ಭೂಕಂಪ ಎಂದು ತಿಳಿದು ಮನೆಯಿಂದ ಹೊರಗೆ ಓಡಿ ಬಂದಿದ್ದರು.ಮೇ 20 ರಂದು ಮಧ್ಯಾಹ್ನ 1.30ರ ಸುಮಾರಿಗೆ ಬೆಂಗಳೂರಿನಲ್ಲೂ ಇಂತದ್ದೇ ಶಬ್ದ ಕೇಳಿಸಿತ್ತು. ಬೆಂಗಳೂರಿನಲ್ಲಿ ಹೊರಹೊಮ್ಮಿದ ಶಬ್ದ ಸೋನಿಕ್ ಭೂಮ್ ಎನ್ನಲಾಗಿದೆ.
ಬೆಂಗಳೂರು ಎದೆ ನಡುಗಿಸಿದ ಶಬ್ಧ ಸೋನಿಕ್ ಬೂಮ್?
ಸೋನಿಕ್ ಬೂಮ್ ಎಂದರೆ ಗಾಳಿಯ ವೇಗಕ್ಕಿಂತಲೂ ಹೊರಡುವ ಯಾವುದೋ ಒಂದು ದ್ವನಿ ಅಥವಾ ಶಬ್ದದ ಕಂಪನ. ಗಾಳಿಯ ವೇಗವನ್ನೂ ಮೀರಿ ಹೊರ ಹೊಮ್ಮುವ ದ್ವನಿ ಕಂಪನಕ್ಕೆ ಸೋನಿಕ್ ಬೂಮ್ ಎನ್ನಲಾಗುತ್ತದೆ.
ಸೋನಿಕ್ ಬೂಮ್ ಸೂಪರ್ ಸಾನಿಕ್ ವಿಮಾನಗಳು ಅಂದರೆ ಯುದ್ಧ ವಿಮಾನಗಳಲ್ಲಿ ಬಳಕೆಯಾಗುತ್ತದೆ. ಈ ಸೂಪರ್ಸಾನಿಕ್ ವಿಮಾನಗಳು ಕೆಲ ಸಂದರ್ಭಗಳಲ್ಲಿ ಹಾರಾಡುವ ವೇಗ ಸೋನಿಕ್ ಬೂಮ್ ಆಗಿ ಹೊರ ಹೊಮ್ಮುತ್ತದೆ.
ಈ ದ್ವನಿ ಕಂಪನ ಅಪಾರವಾಗಿರುತ್ತದೆ. ಒಂದು ರೀತಿ ಭೂಕಂಪನದ ಅನುಭವವನ್ನು ತೆರದಿಡುತ್ತದೆ. ಕೇಳಲು ಅತ್ಯಂತ ಭಯಾನಕವಾಗಿರುತ್ತದೆ.