India
 • search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬಹುಭಾಷಾ ನಟಿ ಮೀನಾ ಪತಿ ವಿದ್ಯಾ ಸಾಗರ್ ವಿಧಿವಶ

|
Google Oneindia Kannada News

ಚೆನ್ನೈ, ಜೂನ್ 27; ಬಹುಭಾಷಾ ನಟಿ ಮೀನಾ ಪತಿ ವಿದ್ಯಾ ಸಾಗರ್ ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಬುಧವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

ಮಂಗಳವಾರ ರಾತ್ರಿ ಮೀನಾ ಪತಿ ವಿದ್ಯಾ ಸಾಗರ್ (48) ನಿಧನ ಹೊಂದಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಅವರು ಬಳಲುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಟ್ವಿಟರ್‌ನಲ್ಲಿ ಹಲವಾರು ಗಣ್ಯರು ಮೀನಾಗೆ ಸಂತಾಪ ಸೂಚಿಸುತ್ತಿದ್ದಾರೆ.

ಸಿನಿಮಾ ಸ್ಫೂರ್ತಿ: ಮಂಗಳೂರು ಶ್ವಾನ ದಳದ ನಾಯಿಮರಿಗೆ ಚಾರ್ಲಿ ಹೆಸರುಸಿನಿಮಾ ಸ್ಫೂರ್ತಿ: ಮಂಗಳೂರು ಶ್ವಾನ ದಳದ ನಾಯಿಮರಿಗೆ ಚಾರ್ಲಿ ಹೆಸರು

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ಮೀನಾ ಬೆಂಗಳೂರು ಮೂಲದ ವಿದ್ಯಾ ಸಾಗರ್‌ರನ್ನು 2009ರಲ್ಲಿ ವಿವಾಹವಾಗಿದ್ದರು. ಮೀನಾ, ವಿದ್ಯಾ ಸಾಗರ್ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ.

ಅವಲೋಕನ: ದೈನಂದಿನ ಬದುಕು, ಸಿನಿಮಾ, ಸಾಹಿತ್ಯದಲ್ಲಿ ಹಾಸ್ಯಅವಲೋಕನ: ದೈನಂದಿನ ಬದುಕು, ಸಿನಿಮಾ, ಸಾಹಿತ್ಯದಲ್ಲಿ ಹಾಸ್ಯ

ವಿದ್ಯಾ ಸಾಗರ್ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿವಾಹದ ಬಳಿಕ ವಿದ್ಯಾ ಸಾಗರ್ ಮತ್ತು ಮೀನಾ ಚೆನ್ನೈನಲ್ಲಿ ವಾಸ್ತವ್ಯ ಹೂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮೀನಾ ಕುಟುಂಬದ ಚಿತ್ರಗಳನ್ನು ಆಗಾಗ ಶೇರ್ ಮಾಡುತ್ತಿದ್ದರು.

ಸಿನಿಮಾ ಶೈಲಿಯಲ್ಲಿ ಓಜಿಕುಪ್ಪಂ ಗ್ಯಾಂಗ್ ಅರೆಸ್ಟ್ ಮಾಡಿದ ಬೆಂಗಳೂರು ಪೊಲೀಸ್! ಸಿನಿಮಾ ಶೈಲಿಯಲ್ಲಿ ಓಜಿಕುಪ್ಪಂ ಗ್ಯಾಂಗ್ ಅರೆಸ್ಟ್ ಮಾಡಿದ ಬೆಂಗಳೂರು ಪೊಲೀಸ್!

ಕನ್ನಡ ಸೇರಿದಂತೆ ವಿವಿಧ ಚಿತ್ರರಂಗದ ಗಣ್ಯರು ನಟಿ ಮೀನಾಗೆ ಸಂತಾಪವನ್ನು ಸೂಚಿಸಿದ್ದಾರೆ. ವಿದ್ಯಾಸಾಗರ್ ಅಂತ್ಯಕ್ರಿಯೆ ಚೆನ್ನೈನ ಬಸಂತ್‌ ನಗರದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ಬಹುಭಾಷಾ ನಟಿ; ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದ ನಟಿ ಮೀನಾ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳ ಜೊತೆ ಮೀನಾ ನಟಿಸಿದ್ದಾರೆ. ಕನ್ನಡದ 'ಪುಟ್ನಂಜ' ಸೇರಿದಂತೆ ವಿವಿಧ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

   ಟಿಬೆಟ್‌ ಹಿಮನದಿಗಳು ಕರಗೋದ್ರಿಂದ ಭಾರತ ಮತ್ತು ಚೀನಾಗೆ ಎದುರಾಗೋ ಅಪಾಯ ಏನು? | Oneindia Kannada

   ಸಿನಿಮಾ ಮಾತ್ರವಲ್ಲ ಕಿರುತೆರೆಯ ಹಲವಾರು ಶೋಗಳಲ್ಲಿ ಮೀನಾ ಜಡ್ಜ್ ಆಗಿ ಕೆಲಸ ಮಾಡಿದ್ದಾರೆ. ಮೀನಾ, ವಿದ್ಯಾಸಾಗರ್ ಪುತ್ರಿ ನೈನಿಕಾ ನಟ ವಿಜಯ್ ಅಭಿಯನದ ಚಿತ್ರವೊಂದರಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗಳಿಸಿದ್ದಾರೆ.

   English summary
   Actress Meena husband Vidyasagara died in private hospital in Chennai.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X