• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಟ್ವಿಟ್ಟರ್ ಖಾತೆ ಮತ್ತೆ ಹ್ಯಾಕ್

|
Google Oneindia Kannada News

ಚೆನ್ನೈ, ಜುಲೈ 20: ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಅವರ ಟ್ವಿಟ್ಟರ್ ಖಾತೆ ಒಮ್ಮೆ ಹ್ಯಾಕ್ ಆಗಿತ್ತು, ಇದೀಗ ಎರಡನೇ ಬಾರಿಗೆ ಮತ್ತೆ ಹ್ಯಾಕ್ ಆಗಿದೆ ಎಂದು ತಿಳಿದುಬಂದಿದೆ.

ಈ ಬಾರಿ ಖುಷ್ಬೂ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಮಾಡಲಾಗಿದ್ದು, ಅದರ ಜತೆಗೆ ಅಕೌಂಟ್ ಹೆಸರು ಹಾಗೂ ಕವರ್ ಪೇಜ್ ಎರಡನ್ನೂ ಬದಲಾಯಿಸಲಾಗಿದೆ. ಈ ಹಿಂದೆ ತಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಆದ ಸಮಯದಲ್ಲೂ ಕೂಡ ಅವರು ತಮ್ಮ ಅಭಿಮಾನಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದರು.

ಕವರ್ ಫೋಟೊ ಬದಲಾಯಿಸಿರುವ ಜತೆಗೆ ಈ ಹಿಂದೆ ಖುಷ್ಬೂ ಮಾಡಿದ್ದ ಎಲ್ಲಾ ಟ್ವೀಟ್‌ಗಳನ್ನು ಅಳಿಸಲಾಗಿದೆ. ಖುಷ್ಬೂ ಅವರು ರಾಜಕೀಯಕ್ಕೆ ಕಾಲಿಟ್ಟಾಗಿನಿಂದ ಯಾವ ಚಿತ್ರದಲ್ಲೂ ನಟಿಸಿರಲಿಲ್ಲ, ರಜನೀಕಾಂತ್ ಅಭಿನಯದ ಅಣ್ಣಾತೆ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಅವರು 2020ರ ಅಕ್ಟೋಬರ್ ತಿಂಗಳಿನಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರು ತಮಿಳುನಾಡಿನ ಥೌಂಸೆಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ 32,000 ಮತಗಳಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು.

English summary
Actress-politician Khushbu Sundar's Twitter account has been hacked again. Earlier, in April 2020, her Twitter account was hacked, after which she sought her fans' help. This time, the hacker has changed the profile name of the account to Briann and has also changed the cover image. All the tweets and posts by the actress have also been deleted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X