• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಜಿಎಫ್‌ ತಮಿಳು ಆವೃತ್ತಿ ವಿತರಕ ನಟ ವಿಶಾಲ್ ಪೊಲೀಸರ ವಶಕ್ಕೆ

|
   ಕೆಜಿಎಫ್‌ ವಿತರಕ ನಟ ವಿಶಾಲ್ ಪೊಲೀಸರ ವಶಕ್ಕೆ..! | Oneindia Kannada

   ಚೆನ್ನೈ, ಡಿಸೆಂಬರ್ 20: ಕೆಜಿಎಫ್‌ ತಮಿಳು ಆವೃತ್ತಿಯ ಸಿನಿಮಾವನ್ನು ತಮಿಳುನಾಡಿನಲ್ಲಿ ವಿತರಣೆ ಮಾಡುತ್ತಿರುವ ಖ್ಯಾತ ನಟ ವಿಶಾಲ್ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

   ಕೆ.ಜಿ.ಎಫ್‌ ಸಿನಿಮಾಕ್ಕೂ ವಿಶಾಲ್ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಾಥಮಿಕ ಮಾಹಿತಿ ಗೊತ್ತಾಗಿದೆ. ಆದರೆ ನಿರ್ಮಾಪಕರ ಸಂಘದ ಸದಸ್ಯರು ವಿಶಾಲ್ ಅವರ ಮೇಲೆ ಬಂಡಾಯವೆದ್ದಿದ್ದು, ಅವರನ್ನು ತಮಿಳುನಾಡು ನಿರ್ಮಾಪಕರ ಸಂಘಕ್ಕೆ ಬರಲು ಬಿಡದ ಕಾರಣ ಗಲಾಟೆ ಆಗಿ ವಿಶಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ.

   ಪೊಲೀಸರ ಜೊತೆ ವಾಗ್ವಾದ: ತಮಿಳು ನಟ ವಿಶಾಲ್ ಬಂಧನ.!

   ನಟ ವಿಶಾಲ್ ಅವರು ನಿರ್ಮಾಪಕರು ಸಹ ಆಗಿದ್ದು, ಅವರು ತಮಿಳುನಾಡು ನಿರ್ಮಾಪಕ ಸಂಘದ (ಟಿಎಫ್‌ಪಿಸಿ) ಅಧ್ಯಕ್ಷರಾಗಿದ್ದಾರೆ. ಆದರೆ ಸಂಘದ ಸದಸ್ಯರು ವಿಶಾಲ್ ವಿರುದ್ಧ ನಿಂತಿದ್ದು ಸಂಘದ ಅಧ್ಯಕ್ಷ ಸ್ಥಾನದಿಂದ ವಿಶಾಲ್ ಅವರನ್ನು ವಜಾ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

   'ಕೆಜಿಎಫ್' ಚಿತ್ರಕ್ಕೆ ಸಾಥ್ ಕೊಡ್ತಿದ್ದಾರೆ ತಮಿಳು ನಟ ವಿಶಾಲ್

   ಇಂದು ನಟ ವಿಶಾಲ್ ಅವರು ನಿರ್ಮಾಪಕರ ಸಂಘದ ಕಟ್ಟಡದ ಗೇಟ್ ಒಡೆದು ಪ್ರವೇಶಿಸಲು ಯತ್ನಿಸಿದ್ದಾರೆ. ಹಾಗಾಗಿ ಪೊಲೀಸರು ವಿಶಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಶಾಲ್ ಅವರು ಹಲವು ಬೆಂಬಲಿಗರೊಂದಿಗೆ ಈ ಕೃತ್ಯಕ್ಕೆ ಮುಂದಾಗಿದ್ದರು.

   ವಿಶಾಲ್‌ ಅನ್ನು ವಶಕ್ಕೆ ಪಡೆದ ಪೊಲೀಸರು

   ವಿಶಾಲ್‌ ಅನ್ನು ವಶಕ್ಕೆ ಪಡೆದ ಪೊಲೀಸರು

   ಇಂದು ನಟ ವಿಶಾಲ್ ಅವರು ನಿರ್ಮಾಪಕರ ಸಂಘದ ಕಟ್ಟಡದ ಗೇಟ್ ಒಡೆದು ಪ್ರವೇಶಿಸಲು ಯತ್ನಿಸಿದ್ದಾರೆ. ಹಾಗಾಗಿ ಪೊಲೀಸರು ವಿಶಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಶಾಲ್ ಅವರು ಹಲವು ಬೆಂಬಲಿಗರೊಂದಿಗೆ ಈ ಕೃತ್ಯಕ್ಕೆ ಮುಂದಾಗಿದ್ದರು.

   ತಮಿಳುನಾಡಿನಲ್ಲಿ 'ಕೆಜಿಎಫ್' ಸಿನಿಮಾಗೆ ದೊಡ್ಡ ಸ್ಪರ್ಧೆ

   ನಿನ್ನೆ ವಿಶಾಲ್ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು

   ನಿನ್ನೆ ವಿಶಾಲ್ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು

   ನಿನ್ನೆಯಷ್ಟೆ ತಮಿಳುನಾಡು ನಿರ್ಮಾಪಕ ಸಂಘದ ಕೆಲವು ಸದಸ್ಯರು ನಟ ವಿಶಾಲ್ ವಿರುದ್ಧ ಪ್ರತಿಭಟನೆ ಮಾಡಿ, ಟಿ.ನಗರದಲ್ಲಿರುವ ನಿರ್ಮಾಪಕರ ಸಂಘದ ಕಚೇರಿಗೆ ಬೀಗ ಹಾಕಿದ್ದರು. 2015ರಲ್ಲಿ ನಡೆದ ನಿರ್ಮಾಪಕರ ಸಂಘದ ಚುನಾವಣೆ ವೇಳೆ ವಿಶಾಲ್ ಮಾಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.

   ಕನ್ನಡ ಇಂಡಸ್ಟ್ರಿಯ ದಿಕ್ಕು ಬದಲಿಸಿದ 'ಕೆಜಿಎಫ್' ಚಿತ್ರದ '21' ಅಂಶಗಳು

   ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿರುವ ವಿಶಾಲ್

   ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿರುವ ವಿಶಾಲ್

   ಈ ಬಗ್ಗೆ ಟ್ವೀಟ್‌ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ನಟ ವಿಶಾಲ್, ನಿನ್ನೆ ಪ್ರತಿಭಟನೆ ನಡೆಸಿ, ಗೇಟುಗಳು, ಕಚೇರಿಗೆ ಬೀಗ ಹಾಕಿದಾಗ ಸುಮ್ಮನಿದ್ದ ಪೊಲೀಸರು ಈಗ ತಮ್ಮ 'ಕರ್ತವ್ಯ' ನಿಭಾಯಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಣ್ಣ ವಿಷಯಕ್ಕೆ ನನ್ನನ್ನು ಗುರಿ ಮಾಡಲಾಗುತ್ತಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

   'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!

   ತಮಿಳು ಕೆಜಿಎಫ್‌ ವಿತರಕ ವಿಶಾಲ್‌

   ತಮಿಳು ಕೆಜಿಎಫ್‌ ವಿತರಕ ವಿಶಾಲ್‌

   ನಟ ವಿಶಾಲ್ ಅವರು ಕೆಜಿಎಫ್‌ ಚಿತ್ರದ ತಮಿಳು ಆವೃತ್ತಿಯಲ್ಲಿ ತಮಿಳುನಾಡಿನಲ್ಲಿ ವಿತರಣೆ ಮಾಡುವ ಹಕ್ಕನ್ನು ಪಡೆದುಕೊಂಡಿದ್ದಾರೆ. ಇದೂ ಸಹ ಕೆಲವು ನಿರ್ಮಾಪಕರಲ್ಲಿ ಬೇಸರ ಮೂಡಿಸಿ ವಿಶಾಲ್ ವಿರುದ್ಧ ಸಿಡಿದೇಳುವಂತೆ ಮಾಡಿದೆ ಎನ್ನಲಾಗಿದೆ. ಕೆಜಿಎಫ್‌ ಚಿತ್ರವು ನಾಳೆ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

   ಯಶ್ ಗೆ ಮಾತು ಕೊಟ್ಟ ತಮಿಳು ನಟ ವಿಶಾಲ್

   English summary
   Tamil actor Vishal who is Tamilnadu film producer council president also has been detained by Chennai police. He tried to break TFPC's office key and enter it so police stopped him and detained.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X